‘ಜೂನಿಯರ್‌’ ಓಟ ಭರ್ಜರಿ.. ಸಾಹಸ ದೃಶ್ಯಕ್ಕಾಗಿ ನಟ ಕಿರೀಟಿ ಶ್ರಮ ಬರೋಬ್ಬರಿ

'ಜೂನಿಯರ್‌'ಗಾಗಿ ಕಿರೀಟಿ ಶ್ರಮ ಹೇಗಿತ್ತು..ತೆರೆಹಿಂದಿನ ಆಕ್ಷನ್‌ ಸ್ಟಂಟ್‌ ವಿಡಿಯೋ ವೈರಲ್!‌

111 (38)

ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋ ಸಿಕ್ಕಿದ್ದಾರೆ. ಜೂನಿಯರ್‌ ಮೂಲಕ ತಮ್ಮ ಪ್ರತಿಭೆಯನ್ನು ನಟ ಕಿರೀಟಿ ತೆರೆದಿಟ್ಟಿದ್ದಾರೆ. ಜೂನಿಯರ್‌ ಅಂತಾ ಹೇಳುತ್ತಾ ಸೀನಿಯರ್‌ ಲೆವೆಲ್‌ನಲ್ಲಿ ನಟನೆ ಕೌಶಲ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಅಭಿನಯ, ನೃತ್ಯದಲ್ಲಿ ಪ್ರೇಕ್ಷಕರಿಂದ ಕಿರೀಟಿ ಫುಲ್‌ ಮಾರ್ಕ್ಸ್‌ ಪಡೆದುಕೊಂಡಿದ್ದಾರೆ. ಇದೇ ತಿಂಗಳ 18ರಂದು ತೆರೆಗೆ ಬಂದ ಜೂನಿಯರ್‌ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ ಗಳಿಂದ ಚಪ್ಪಾಳೆ ಪಡೆಯುತ್ತಿದೆ.

ರಾಧಾಕೃಷ್ಣ ರೆಡ್ಡಿ ಜೂನಿಯರ್‌ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದಲ್ಲಿ ಕಿರೀಟಿ ಭರ್ಜರಿ ಸ್ಟಂಟ್‌ ಮಾಡಿದ್ದಾರೆ. ತೆರೆಹಿಂದೆ ಕಿರೀಟಿ ಯಾವ ಮಟ್ಟಿಗೆ ಶ್ರಮ ಹಾಕಿದ್ದಾರೆ ಎಂಬುದಕ್ಕೆ ವಿಡಿಯೋವೊಂದು ವೈರಲ್‌ ಆಗಿದೆ. ಕಾರು ಸ್ಟಂಟ್‌ ವೇಳೆ ಕಿರೀಟಿ ಪಟ್ಟಿರುವ ಪರಿಶ್ರಮ ತೆರೆಮೇಲೆ ಸೊಗಸಾಗಿ ಮೂಡಿಬಂದಿದೆ. ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಸಾಹಸ ದೃಶ್ಯಗಳನ್ನು ಕಂಪೋಸ್‌ ಮಾಡಿದ್ದಾರೆ.

ADVERTISEMENT
ADVERTISEMENT

ಜೂನಿಯರ್‌ ಸಿನಿಮಾದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್ ಅಂತಹ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ ಸೆಂಥಿಲ್ ಕುಮಾರ್ ಕೆಲಸ ಮಾಡಿದ್ದಾರೆ. ಸಿನಿಮಾಕ್ಕೆ ಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಆಕ್ಷನ್ ನೀಡಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್‌ ಸ್ಟಾರ್‌ ದೇವಿಶ್ರೀ ಪ್ರಸಾದ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಜೂನಿಯರ್‌ ಸಿನಿಮಾ ಪ್ರೇಕ್ಷಕರಿಂದ ಪ್ರೀತಿ ಪಡೆಯುವುದರ ಜೊತೆಗೆ ಬಾಕ್ಸಾಫೀಸ್‌ನಲ್ಲಿಯೂ ಒಳ್ಳೆ ಗಳಿಕೆ ಮಾಡುತ್ತಿದೆ. ಈ ಚಿತ್ರದಲ್ಲಿ ಕಿರೀಟಿ ಒಳ್ಳೆಯ ಡ್ಯಾನ್ಸ್ ಹಾಗೂ ಫೈಟ್ ಮಾಡಿ ಮೊದಲ ಪ್ರಯತ್ನದಲ್ಲಿಯೇ ಸಕ್ಸಸ್‌ ಕಂಡಿದ್ದಾರೆ.

Exit mobile version