ಮಸ್ತ್ ಮಲೈಕಾ ಅಂತ ತಂದೆ ಸುದೀಪ್‌ಗಾಗಿ ಹಾಡಿದ್ದ ಸಾನ್ವಿ ಸುದೀಪ್ ಕಂಠಕ್ಕೆ ಇಡೀ ಕರುನಾಡೇ ಕ್ಲೀನ್ ಬೋಲ್ಡ್ ಆಗಿದೆ. ಹಾಡು ಮ್ಯಾಕ್ಸಿಮಮ್ ಹಿಟ್ ಆಗಿದ್ದು, ಕನ್ನಡಿಗರಿಗೆ ತುಂಬು ಹೃದಯದಿಂದ ಧನ್ಯವಾದ ಅರ್ಪಿಸಿದ್ದಾರೆ ಕಿಚ್ಚನ ಮಗಳು. ಅಷ್ಟೇ ಅಲ್ಲ, ಪ್ರೀ ರಿಲೀಸ್ ಇನ್ವಿಟೇಷನ್ ಜೊತೆ ಮಾರ್ಕ್ ಸೆನ್ಸಾರ್ ಅಪ್ಡೇಟ್ಸ್ ಇಲ್ಲಿದೆ..
- ಮಸ್ತ್ ಮಲೈಕಾ.. ಚಿತ್ರಪ್ರೇಮಿಗಳಿಂದ ಸಾನ್ವಿ ಸುದೀಪ್ ಧನ್ಯ
- ಅರ್ಧ ಕೋಟಿ ವೀವ್ಸ್ ಪಡೆದ ಕೋಟಿಗೊಬ್ಬನ ಮಗಳ ಕಂಠ
- ಹುಬ್ಬಳ್ಳಿಯಲ್ಲಿ ಪ್ರೀ-ರಿಲೀಸ್ ಇವೆಂಟ್.. ಸೆನ್ಸಾರ್ನಿಂದ U/A
- ಡಿಸೆಂಬರ್ 20ರಿಂದಲೇ ಆನ್‌ಲೈನ್ ಬುಕಿಂಗ್ ಶುಭಾರಂಭ
ಮಾರ್ಕ್.. ಬಾದ್‌ಷಾ ಕಿಚ್ಚ ಸುದೀಪ್ ಕರಿಯರ್‌ನ ಮತ್ತೊಂದು ಮಹತ್ವದ ಸಿನಿಮಾ. ಇದೇ ಡಿಸೆಂಬರ್ 25ಕ್ಕೆ ತೆರೆಗಪ್ಪಳಿಸೋಕೆ ಸಜ್ಜಾಗಿರೋ ಈ ಸಿನಿಮಾ, ಇತ್ತೀಚೆಗೆ ರಿಲೀಸ್ ಆದ ಮಸ್ತ್ ಮಲೈಕಾ ಸಾಂಗ್‌ನಿಂದ ಹಲ್‌ಚಲ್ ಎಬ್ಬಿಸಿದೆ. ನಿಶ್ವಿಕಾ ಜೊತೆ ಸುದೀಪ್ ಮಸ್ತ್ ಸ್ಟೆಪ್ ಹಾಕಿರೋ ಈ ಡ್ಯಾನ್ಸಿಂಗ್ ನಂಬರ್‌ಗೆ ಸಾನ್ವಿ ಸುದೀಪ್ ಹಾಡಿರೋದು ಇಂಟರೆಸ್ಟಿಂಗ್. ಇದು ಸಿಂಗರ್ ಸಾನ್ವಿ ಸುದೀಪ್ ಚೊಚ್ಚಲ ಕನ್ನಡ ಸಾಂಗ್ ಆಗಿದ್ದು, ಇಡೀ ಕರುನಾಡೇ ಆಕೆಯ ಕಂಠವನ್ನ ಕೊಂಡಾಡ್ತಿದೆ.
ಮಸ್ತ್ ಮಲೈಕಾ ಸಾಂಗ್ ಯೂಟ್ಯೂಬ್‌ನಲ್ಲಿ ಹೆಚ್ಚು ಕಡಿಮೆ 50 ಲಕ್ಷ ವೀವ್ಸ್ ಪಡೆದಿದ್ದು, ಕೋಟ್ಯಂತರ ಕನ್ನಡ ಕಲಾಭಿಮಾನಿಗಳಿಗೆ ಅಚ್ಚ ಕನ್ನಡದಲ್ಲಿ ಕಿಚ್ಚನ ಮಗಳು ಸಾನ್ವಿ ಸುದೀಪ್ ಧನ್ಯವಾದ ಅರ್ಪಿಸಿದ್ದಾರೆ. ಇದು ಆಕೆಗೆ ಬಹಳ ಎಮೋಷನಲ್ ಮೊಮೆಂಟ್ ಕೂಡ ಹೌದು. ಅಂದಹಾಗೆ ಸಾನ್ವಿ ಹೀಗೆ ಹಾಡಿರೋದು ಇದೇ ಮೊದಲಲ್ಲ, ಈ ಹಿಂದೆ ನಾನಿ ನಟನೆಯ ತೆಲುಗು ಸಿನಿಮಾ ಹಿಟ್-3 ಆಲ್ಬಮ್‌ನ ಹಾಡೊಂದರ ಮೂಲಕ ಪ್ರೊಫೆಷನಲ್ ಸಿಂಗರ್ ಅನಿಸಿಕೊಂಡಿದ್ರು.
ಇದೇ ಡಿಸೆಂಬರ್ 20ರಂದು ಅಂದ್ರೆ ಶನಿವಾರ ಸಂಜೆ 6 ಗಂಟೆಗೆ ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್‌ರ ಮಾರ್ಕ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದ್ದು, ಹುಬ್ಬಳ್ಳಿ ಮಂದಿಗೆ ಆಹ್ವಾನ ನೀಡಿದ್ದಾರೆ ಕಿಚ್ಚ. ಅದೇ ದಿನ ಅಂದ್ರೆ ರಿಲೀಸ್‌ಗೂ ಐದು ದಿನ ಮೊದಲೇ ಮಾರ್ಕ್ ಚಿತ್ರದ ಆನ್‌ಲೈನ್ ಟಿಕೆಟ್ ಬುಕಿಂಗ್ಸ್ ಓಪನ್ ಆಗ್ತಿವೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಮಾರ್ಕ್ ಸಿನಿಮಾನ ಕೆಆರ್‌ಜಿ ಜೊತೆಗೂಡಿ ಸ್ವತಃ ಪ್ರಿಯಾ ಸುದೀಪ್ ಅವರೇ ವಿಶಾಲ ಕರ್ನಾಟಕಕ್ಕೆ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
