ಬೆಂಗಳೂರು: ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಅವರ 47ನೇ ಚಿತ್ರ ‘ಮಾರ್ಕ್’ನ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಒಂದು ಭರ್ಜರಿ ಉಡುಗೊರೆಯಾಗಿ ಸಿಕ್ಕಿದೆ. ‘ಮ್ಯಾಕ್ಸ್’ ಚಿತ್ರದ ಬಳಿಕ ಸುದೀಪ್ ಅವರ ಮುಂದಿನ ಕ್ರೈಮ್ ಥ್ರಿಲ್ಲರ್ ‘ಮಾರ್ಕ್’ ಡಿಸೆಂಬರ್ 25ರಂದು ತೆರೆಗೆ ಬರಲಿದೆ. ಈ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, ಕಿಚ್ಚನ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
‘ಮಾರ್ಕ್’ ಚಿತ್ರದ ಟೈಟಲ್ ಟೀಸರ್ ದೃಶ್ಯ ಭಾಷೆ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಟೀಸರ್‌ನಲ್ಲಿ ಕಿಚ್ಚ ಸುದೀಪ್ ಅವರ ಲುಕ್ ಮತ್ತು ಕಥಾನಕದ ಒಂದಿಷ್ಟು ಝಲಕ್ ಅನಾವರಣಗೊಂಡಿದೆ. ಕ್ರೈಮ್ ಥ್ರಿಲ್ಲರ್‌ಗೆ ಸಸ್ಪೆನ್ಸ್‌ನ ಒಂದಿಷ್ಟು ಮಿಶ್ರಣವಿರುವ ಈ ಚಿತ್ರ, ತನ್ನ ವಿಶಿಷ್ಟ ಕಥಾನಕದಿಂದಾಗಿ ಈಗಾಗಲೇ ಚಿತ್ರರಸಿಕರ ಗಮನ ಸೆಳೆದಿದೆ.
ಕಿಚ್ಚ ಸುದೀಪ್ ಹೊಸ ಲುಕ್
ಈ ಚಿತ್ರದಲ್ಲಿ ಸುದೀಪ್ ಅವರ ಲುಕ್ ಸಂಪೂರ್ಣವಾಗಿ ಭಿನ್ನವಾಗಿದ್ದು, ಅವರ ಅಭಿಮಾನಿಗಳಿಗೆ ಆಶ್ಚರ್ಯದ ಜೊತೆಗೆ ಉತ್ಸಾಹವನ್ನೂ ತಂದಿದೆ. ಕಥಾನಕಕ್ಕೆ ತಕ್ಕಂತೆ ಅವರ ಆಕರ್ಷಕ ಭಾವನೆಗಳು ಮತ್ತು ಶಕ್ತಿಯುತ ನಟನೆಯು ಟೀಸರ್‌ನಲ್ಲಿ ಗೋಚರಿಸುತ್ತದೆ. ಈ ಲುಕ್‌ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಭಿಮಾನಿಗಳ ಸಂಭ್ರಮ
ಕಿಚ್ಚ ಸುದೀಪ್‌ರ ಹುಟ್ಟುಹಬ್ಬದ ಈ ದಿನವು ಅಭಿಮಾನಿಗಳಿಗೆ ಇದು ದೊಡ್ಡ ಸಂಭ್ರಮದಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್‌ಗೆ ಸಂಬಂಧಿಸಿದಂತೆ ಸಾವಿರಾರು ಕಾಮೆಂಟ್‌ಗಳು, ಶೇರ್‌ಗಳು ಮತ್ತು ಲೈಕ್‌ಗಳು ಹರಿದು ಬರುತ್ತಿವೆ. ಕಿಚ್ಚ ಸುದೀಪ್‌ರ ಈ ಹೊಸ ಅವತಾರವನ್ನು ಕಾಣಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.