ಅಂದು ಐರೆನ್‌‌ಲೆಗ್..ಇಂದು ಚಿತ್ರರಂಗಕ್ಕೆ ಬೆಂಚ್‌‌ ‘ಮಾರ್ಕ್‌’ ಆದ ಸುದೀಪ್

ವಿದ್ಯೆ, ವಿವೇಕತೆಗೆ ಕಿಚ್ಚ c/o ಅಡ್ರೆಸ್..30 ವರ್ಷದ ಆಸ್ತಿ ಇಲ್ಲಿದೆ ನೋಡಿ

Untitled design 2025 09 02t150306.847

ಬಾದ್‌ಷಾ ಕಿಚ್ಚ ಸುದೀಪ್.. ಭಾರತೀಯ ಚಿತ್ರರಂಗ ಕಂಡ ಸೆಲ್ಫ್ ಮೇಡ್ ಶೆಹೆನ್​ಷಾ. ಬಣ್ಣ ಹಚ್ಚಿದಾಗ ಐರೆನ್​ ಲೆಗ್ ಅಂತ ಹೀಯಾಳಿಸಿದವ್ರ ಮುಂದೆ, ಬೆಂಕಿ ಚೆಂಡಿನಂತೆ ಸೆಟೆದು ನಿಂತ ಆಲ್ ಇಂಡಿಯಾ ಕಟೌಟ್. 52ನೇ ವಸಂತಕ್ಕೆ ಕಾಲಿಟ್ಟಿರೋ ಕಿಚ್ಚ, ಇಂದು ವರ್ಲ್ಡ್​ ಕಟೌಟ್ ಆಗಿ ರಾರಾಜಿಸ್ತಿದ್ದು, ಈ ಬಾರಿಯ ಕಿಚ್ಚೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡಿಕೊಂಡರು. ಮಾರ್ಕ್‌ ಟೀಸರ್ ಜೊತೆಗೆ ಕಿಚ್ಚೋತ್ಸವದ ಹೈಲೈಟ್ಸ್ ಇಲ್ಲಿದೆ ನೋಡಿ.

ಯೆಸ್.. ನಮ್ಮ ಕನ್ನಡದ ಬಾವುಟವನ್ನು ನ್ಯಾಷನಲ್, ಇಂಟರ್​ ನ್ಯಾಷನಲ್ ಲೆವೆಲ್​ನಲ್ಲಿ ಹಾರಿಸಿದಂತಹ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಕಿಚ್ಚ ಸುದೀಪ್​ಗಿಂದು ಬರ್ತ್ ಡೇ ಸಂಭ್ರಮ. 51 ವಸಂತಗಳನ್ನು ಪೂರೈಸಿ 52ನೇ ವರ್ಷಕ್ಕೆ ಕಾಲಿಟ್ಟಿರೋ ಬಾದ್‌ಷಾ ಸುದೀಪ್, ಬರೀ ವ್ಯಕ್ತಿಯಾಗಲ್ಲದೆ ಚಿತ್ರರಂಗದ ಬಹುದೊಡ್ಡ ಶಕ್ತಿ ಆಗಿ ನಿಂತಿದ್ದಾರೆ.

ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ಹಾಗೂ ಗಾಯಕ ಹೀಗೆ ಚಿತ್ರರಂಗದ ಹತ್ತು ಹಲವು ವಿಭಾಗಗಳಲ್ಲಿ ಮಾಸ್ಟರ್ ಆಗಿರೋ ಸುದೀಪ್ ಒಂಥರಾ ಕಂಪ್ಲೀಟ್ ಌಕ್ಟರ್. 30 ವರ್ಷದ ಯಶಸ್ವಿ ಸಿನಿಯಾನ ಮಾಡಿರೋ ಕಿಚ್ಚ. ಈ ಇಪ್ಪತ್ತೈದು- ಮೂವತ್ತು ವರ್ಷಗಳ ಹಾದಿಯಲ್ಲಿ ಸಾಕಷ್ಟು ಅವಮಾನ, ಅಪಮಾನಗಳಿದ್ದವು ಅನ್ನೋದು ಮರೆಯೋ ಹಾಗಿಲ್ಲ. ಆರಂಭದಲ್ಲೇ ಇವ್ರಿಗೆ ಐರೆನ್ ಲೆಗ್ ಅನ್ನೋ ಪಟ್ಟ ಕಟ್ಟಿಬಿಟ್ಟಿದ್ರು. ವಾಯ್ಸ್ ಸರಿಯಿಲ್ಲ ಅಂದಿದ್ರು. ಆದ್ರೀಗ ಸುದೀಪ್ ಸಾಮ್ರಾಜ್ಯ ವಿಶ್ವದ ಮೂಲೆ ಮೂಲೆಗೆ ವಿಸ್ತರಿಸಿದೆ.

ಸ್ಪರ್ಶ ಚಿತ್ರದಿಂದ ನಾಯಕನಟನಾಗಿ ಮೊದಲ ಹೆಜ್ಜೆ ಇಟ್ಟ ಸುದೀಪ್, ದೀಪದಂತೆ ಬೆಳಗಿ, ತನ್ನ ಪ್ರಕಾಶಮಾನದಿಂದ ಮತ್ತಷ್ಟು ಮಂದಿಗೆ ಬೆಳಕಾದರು. ತನ್ನದೇ ವಿಶಿಷ್ಟ ಸ್ಟೈಲು, ಮ್ಯಾನರಿಸಂನಿಂದ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನ ಕೊಟ್ಟು ಛಾಪನ್ನೊತ್ತಿದರು. ಶ್ರೀಮಂತ ಕುಟುಂಬದ ಕುಡಿಯೇ ಆದ್ರೂ, ಅವ್ರ ಸಿನಿಯಾನ ಮಾತ್ರ ಕಲ್ಲು ಮುಳ್ಳಿನಿಂದ ಕೂಡಿತ್ತು. ಮುಂದೆ ತಮ್ಮ ಸ್ವಂತ ಟ್ಯಾಲೆಂಟ್​ನಿಂದ ಅದನ್ನ ಹೂವಿನ ಹಾಸಿಗೆ ಆಗುವಂತೆ ಮಾಡಿಕೊಂಡ ಗರಿಮೆ ಇವರದ್ದು.

ಮನೋಜ್ಞ ಅಭಿನಯದಿಂದಲೇ ಪಕ್ಕದ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದ ಮಂದಿಯ ಹುಬ್ಬೇರಿಸಿದ ಸ್ಟಾರ್ ಇವರು.. ಪರಭಾಷಾ ಮೆಗಾಸ್ಟಾರ್, ಸೂಪರ್ ಸ್ಟಾರ್​ಗಳ ಜೊತೆ ಇವ್ರಿಗೆ ಉತ್ತಮ ಬಾಂಧವ್ಯ, ಒಡನಾಟವಿದೆ. ಅಷ್ಟರ ಮಟ್ಟಿಗೆ ಬೆಳೆದು ನಿಂತ ಕಿಚ್ಚ ಅಕ್ಷರಶಃ ಆಲ್ ಇಂಡಿಯಾ ಕಟೌಟ್.

ಕನ್ನಡ ಚಿತ್ರರಂಗಕ್ಕೆ ಬೆಂಚ್‌ಮಾರ್ಕ್‌ ಸ್ಟಾರ್ ಆಗಿರೋ ಸುದೀಪ್, ಈ ಬಾರಿಯ ಕಿಚ್ಚೋತ್ಸವವನ್ನು ನಂದಿ ಲಿಂಕ್ಸ್ ಗ್ರೌಂಡ್‌‌ನಲ್ಲಿ ಕುಟುಂಬ ಸಮೇತ, ಅಭಿಮಾನಿಗಳ ಸಮ್ಮುಖದಲ್ಲಿ ಸೆಲೆಬ್ರೇಟ್ ಮಾಡಿಕೊಂಡರು. ಎರಡು ವರ್ಷಗಳ ಹಿಂದೆ ಪ್ರಿಯಾ ಸುದೀಪ್‌ರಿಂದ 500 ಪ್ಲಸ್ ಡ್ರೋಣ್‌‌ಗಳಿಂದ ಆಗಸದಲ್ಲಿ ವಿಶೇಷವಾಗಿ ಹ್ಯಾಪಿ ಬರ್ತ್ ಡೇ ಅನ್ನೋ ಬೆಳಕು ಮೂಡಿತ್ತು. ಆದ್ರೆ ಈ ವರ್ಷ ಹಣ ಖರ್ಚು ಮಾಡೋದು ಬೇಡ ಅಂತ ಒಂದಷ್ಟು ಆಪ್ತರು ಹಾಗೂ ಪತ್ನಿ ಪ್ರಿಯಾ ಸುದೀಪ್‌‌ರಿಂದ ಸಾವಿರಾರು ಅಭಿಮಾನಿಗಳ ಅಭಿಮಾನ ಸಾಗರದಲ್ಲಿ ಕಿಚ್ಚೋತ್ಸವ ಅರ್ಥಪೂರ್ಣ ಅನಿಸಿತು.

ಮಗಳ ಜೊತೆ ಮಗನನ್ನ ಕೂಡ ಇಂಟ್ರಡ್ಯೂಸ್ ಮಾಡಿದ್ರು ಸುದೀಪ್. ಅರೇ ಮಗಳು ಮಾತ್ರ ಅಲ್ವಾ ಅವರಿಗೆ ಇರೋದು ಅಂತ ಹುಬ್ಬೇರಿಸಬೇಡಿ. ಸೋದರಳಿಯ ಸಂಚಿತ್‌ರನ್ನೇ ಮಗ ಅಂತ ಪರಚಿಯಿಸಿದ್ರು ಕಿಚ್ಚ. ಮ್ಯಾಂಗೋ ಪಚ್ಚ ಅನ್ನೋ ಸಿನಿಮಾ ಮಾಡ್ತಿರೋ ಸಂಚಿತ್ ಕೂಡ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಅಕ್ಕನ ಮಗನನ್ನ ತನ್ನ ಮಗ ಅನ್ನೋದಿದೆಯಲ್ವಾ ನಿಜಕ್ಕೂ ಗ್ರೇಟ್.

ವಿದ್ಯೆ ಹಾಗೂ ವಿವೇಕತೆಗೆ ಕೇರ್ ಆಫ್ ಅಡ್ರೆಸ್ ಆಗಿರೋ ಬಾದ್‌ಷಾ, ತನ್ನ ಮಾತಿನಿಂದ ಎಂದೂ ವಿವಾದ ಸೃಷ್ಟಿಸಿಕೊಂಡವರಲ್ಲ. ಎಲ್ಲಿ ಯಾವಾಗ ಹೇಗೆ ಮಾತಾಡಬೇಕು ಅನ್ನೋ ಸೆನ್ಸ್ ಇರೋ ಸ್ಟಾರ್ ಅಂದ್ರೆ ಅದು ಒನ್ ಅಂಡ್ ಓನ್ಲಿ ಸುದೀಪ್. ಸದ್ಯ ಫ್ಯಾನ್ಸ್ ವಾರ್, ಸ್ಟಾರ್‌ ವಾರ್‌‌ಗಳ ಬಗ್ಗೆ ಗೊತ್ತೇಯಿದೆ. ಆದ್ರೆ ಈ ಬಗ್ಗೆ ತನ್ನ ಫ್ಯಾನ್ಸ್‌ಗೆ ಬಿಗ್ ಸಂದೇಶ ನೀಡಿದ ಕಿಚ್ಚ, ಯಾರೇನೇ ಅಂದ್ರೂ ಸೈಲೆಂಟ್ ಆಗಿ ಇರಿ. ಇತರೆ ಸ್ಟಾರ್‌‌ಗಳನ್ನ ಅಗೌರವದಿಂದ ನಿಂದಿಸಬೇಡಿ. ನನಗೆ ಅವಮಾನ ಆದ್ರೂ ಪರವಾಗಿಲ್ಲ. ತಾಳ್ಮೆ ಕಳೆದುಕೊಳ್ಳಬೇಡಿ ಅಂತ ಹೇಳ್ತಾ ಜವಾಬ್ದಾರಿ ಮೆರೆದರು.

ಕಿಚ್ಚನ ಒಂದೊಂದು ಮಾತು ಕೂಡ ಅಭಿಮಾನಿಗಳಿಗೆ ಶಾಸನವಾಗಲಿದ್ದು, ಇಲ್ಲಿಂದ ಹೊಸ ಅಧ್ಯಾಯ ಶುಭಾರಂಭವಾಗಲಿದೆ. ಚಿತ್ರರಂಗದ ಪಾಲಿಗೆ ಕಿಚ್ಚನ ಕೊಡುಗೆ, ತೂಕದ ನಡೆ, ಹಿಟ್ ಸಿನಿಮಾಗಳು, ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿನ ನಿರ್ಧಾರ ಹೀಗೆ ಎಲ್ಲವೂ ಸ್ಯಾಂಡಲ್‌ವುಡ್‌‌ನ ಘಟನೆ, ಗೌರವವನ್ನು ಹೆಚ್ಚಿಸ್ತಿವೆ.

ಯೆಸ್.. ಇದು ಸತ್ಯಜ್ಯೋತಿ ಫಿಲಂಸ್‌‌ನಲ್ಲಿ ತಯಾರಾಗ್ತಿರೋ ಕಿಚ್ಚನ 47ನೇ ಸಿನಿಮಾದ ಟೀಸರ್ ಝಲಕ್. ಚಿತ್ರಕ್ಕೆ ಮಾರ್ಕ್ ಅಂತ ಟೈಟಲ್ ಇಟ್ಟಿರೋ ಚಿತ್ರತಂಡ ಬರ್ತ್ ಡೇಗೆ ಇದನ್ನೇ ಗಿಫ್ಟ್ ಆಗಿ ನೀಡಿದೆ. ಮ್ಯಾಕ್ಸ್ ಡೈರೆಕ್ಟರ್ ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮಾರ್ಕ್‌ ಸಿದ್ಧವಾಗ್ತಿದ್ದು, ಭಾರತೀಯ ಚಿತ್ರರಂಗಕ್ಕೆ ಬೆಂಚ್‌ಮಾರ್ಕ್‌ ಚಿತ್ರವಾಗಲಿದೆ.

ಅಂದಹಾಗೆ ಮ್ಯಾಕ್ಸ್‌‌‌‌ನಲ್ಲಿ ಅರ್ಜುನ್ ಮಹಾಕ್ಷಯ್ ಆಗಿದ್ರು ಸುದೀಪ್. ಇಲ್ಲಿ ಅಜಯ್ ಮಾರ್ಕಂಡೇಯ ಆಗಿ ಅಬ್ಬರಿಸಿ, ಆರ್ಭಟಿಸಲಿದ್ದಾರೆ. ಮಾರ್ಕಂಡೇಯ ಹೆಸರಿನ ಶಾರ್ಟ್‌ ಫಾರ್ಮ್‌ ಈ ಮಾರ್ಕ್‌. ಅಂದಹಾಗೆ ಇಲ್ಲಿ ಕೂಡ ಕಿಚ್ಚ ಪೊಲೀಸ್ ಆಫೀಸರ್. ಒನ್ಸ್ ಅಗೈನ್ ಪೊಲೀಸ್ ಸ್ಟೇಷನ್. ಮಾಸ್‌‌ ಪ್ರಿಯರಿಗೆ ಇದು ಮಸ್ತ್ ಕಿಕ್ ಕೊಡಲಿದೆ. ಭೀಮ ಚಿತ್ರದ ಖಳನಟ ಡ್ರ್ಯಾಗನ್ ಮಂಜು ಇಲ್ಲಿ ವಿಲನ್ ಆಗಿ ಕಿಚ್ಚನ ಎದುರು ನಟಿಸಿದ್ದಾರೆ.

ಕಿಚ್ಚನ ಹೇರ್‌ ಸ್ಟೈಲ್ ಸಖತ್ ಟ್ರೆಂಡಿಂಗ್‌ನಲ್ಲಿದ್ದು, ಇದೇ ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ವಿಶೇಷ ಗ್ರ್ಯಾಂಡ್ ರಿಲೀಸ್ ಆಗಲಿದೆ. ಕಳೆದ ಬಾರಿ ಯುಐ ಚಿತ್ರದ ಜೊತೆ ಮ್ಯಾಕ್ಸ್ ತೆರೆ ಕಂಡಿತ್ತು. ಈ ಬಾರಿ ಉಪ್ಪಿ ಜೊತೆ ಶಿವಣ್ಣ ಕೂಡ ನಟಿಸಿರೋ 45 ಜೊತೆ ಕಿಚ್ಚನ ಬಾಕ್ಸ್ ಆಫೀಸ್ ದಂಗಲ್ ಶುರುವಾಗಲಿದೆ.

ನೀನು ರೆಬೆಲ್‌ನ ಕೊಲ್ಲಬಹುದು.. ಆದ್ರೆ ರೆಬೆಲಿಯನ್‌ನ ಅಲ್ಲ ಅನ್ನೋ ಸಂದೇಶದ ಜೊತೆ ಬಿಲ್ಲ ರಂಗ ಬಾಷಾ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಅನೂಪ್ ಭಂಡಾರಿ ವಿಕ್ರಾಂತ್ ರೋಣ ಬಳಿಕ ಸುದೀಪ್‌ಗೆ ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾ ಇದು. ಇಲ್ಲಿ ಕಿಚ್ಚನ ಲುಕ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದು, ಫ್ಯಾನ್ಸ್‌‌ ಎಲ್ಲೆಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ನೀಡ್ತಿದ್ದಾರೆ.

ಇನ್ನು ಬಿಗ್‌ಬಾಸ್ ಸೀಸನ್ 12 ಕಿಕ್‌ಸ್ಟಾರ್ಟ್‌ ಆಗ್ತಿದ್ದು, ಸ್ವತಃ ಕಿಚ್ಚನೇ ಅದ್ರ ಡೇಟ್ ಅನೌನ್ಸ್ ಮಾಡಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಬಿಗ್ ಮನೆಯ ವ್ಯಕ್ತಿತ್ವದ ಆಟಗಳು ಶುರುವಾಗಲಿದ್ದು, ವಾರದ ಕಥೆ ಕಿಚ್ಚನ ಜೊತೆಯಾಗಿ ಪ್ರೇಕ್ಷಕರ ಮುಂದೆ ಬರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version