ಇದ್ದಲ್ಲೇ ನೋಡಿ ‘ಸು ಫ್ರಮ್ ಸೋ’.. OTTಗೆ ಡೇಟ್‌ ಫಿಕ್ಸ್..!

ಸೆ- 8ಕ್ಕೆ ಜಿಯೋ ಹಾಟ್‌ಸ್ಟಾರ್‌‌‌ಗೆ ಸೋಮೇಶ್ವರ ಸುಲೋಚನಾ

Untitled design 2025 08 29t174356.596

ಬೆಂಗಳೂರು: 115 ಕೋಟಿ ಪೈಸಾ ವಸೂಲ್ ಮೂಲಕ ಕನ್ನಡಿಗರ ಗತ್ತು, ಗೈರತ್ತನ್ನು ವಿಶ್ವ ಸಿನಿದುನಿಯಾಗೆ ಸಾರಿದ ಸು ಫ್ರಮ್ ಸೋ ಸಿನಿಮಾನ, ನೀವು ಇದ್ದಲ್ಲೇ ನೋಡಬಹುದು.  ಥಿಯೇಟರ್‌‌ನಲ್ಲಿ ಇಂದಿಗೂ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರೋ ಈ ವರ್ಷದ ಇಂಡಸ್ಟ್ರಿ ಬ್ಲಾಕ್ ಬಸ್ಟರ್, ಓಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ.

ಸು ಫ್ರಮ್ ಸೋ.. ರಿಲೀಸ್ ಆಗಿ ಸಿಲ್ವರ್ ಜ್ಯುಬಿಲಿ ಕಂಪ್ಲೀಟ್ ಮಾಡಿದ್ರೂ ಸಹ ಇನ್ನೂ ಕಡಿಮೆ ಆಗಿಲ್ಲ ಅದ್ರ ಹವಾ. ಹೌದು, ರಾಜ್ ಬಿ ಶೆಟ್ಟಿ ಹೊಸ ಪ್ರತಿಭೆಗಳ ತಂಡವನ್ನು ಕಟ್ಟಿಕೊಂಡು ಕಟ್ಟಿದ ಈ ಸಿನಿಮಾ, ಒನ್ ಆಫ್ ದಿ ಮಾಸ್ಟರ್‌ಪೀಸ್ ಚಿತ್ರವಾಗುತ್ತೆ ಅಂತ ಯಾರೂ ನಿರೀಕ್ಷಿಸಿರಲಿಲ್ಲ. ಅದ್ರಲ್ಲೂ ಸಣ್ಣ ಬಜೆಟ್‌‌ನಲ್ಲಿ ತಯಾರಾದ ಹಾರರ್ ಕಾಮಿಡಿ ಜಾನರ್ ಚಿತ್ರ, ಪ್ರೇಕ್ಷಕರನ್ನ ಸಿಕ್ಕಾಪಟ್ಟೆ ರಂಜಿಸೋದ್ರ ಜೊತೆಗೆ 100 ಕೋಟಿ ಪೈಸಾ ವಸೂಲ್ ಮಾಡುತ್ತೆ ಅಂತ ಯಾರೂ ನಿರೀಕ್ಷಿಸಿರಲಿಲ್ಲ.

ಕನ್ನಡದ ಮಟ್ಟಿಗೆ ತಯಾರಾದ ಈ ಚಿತ್ರ, ಆನ್ ಡಿಮ್ಯಾಂಡ್ ಪಕ್ಕದ ಕೇರಳ, ಆಂಧ್ರಗೂ ವಿಸ್ತರಿಸಿತು. ನಂತರ ಸಪ್ತಸಾಗರದಾಚೆ ತೆರಳಿ, ವಿಶ್ವದ ಹತ್ತಾರು ದೇಶಗಳಲ್ಲಿ ತೆರೆಕಂಡು, ಮಸ್ತ್ ಮನರಂಜನೆ ನೀಡಿತು. ಎಲ್ಲೆಡೆ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳಿಗೆ ಕಾರಣೀಭೂತವಾದ ಸೋಮೇಶ್ವರ ಸುಲೋಚನಾ, ಇಂದಿಗೂ ಥಿಯೇಟರ್‌‌ಗಳಲ್ಲಿ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ. ಆದ್ರೆ ನೀವು ಇದ್ದಲ್ಲೇ ಕೂತು ಈ ಚಿತ್ರವನ್ನು ವೀಕ್ಷಿಸುವಂತಹ ಸೌಭಾಗ್ಯ ನಿಮಗೆ ತಂದುಕೊಡ್ತಿದೆ ಚಿತ್ರತಂಡ. ಬಾವ, ಕರುಣಾಕರ ಗುರೂಜಿ, ರವಿ ಅಣ್ಣ, ಅಶೋಕ, ಸತೀಶ ಎಲ್ಲರೂ ನೀವಿರುವಲ್ಲೇ ಬರ್ತಿದ್ದಾರೆ.

ಅಜಯ್ ದೇವಗನ್, ಸುದೀಪ್, ರಮ್ಯಾ, ಧ್ರುವ ಸರ್ಜಾ ಮೆಚ್ಚಿದಂತಹ ಈ ಸು ಫ್ರಮ್ ಸೋ, ಇದೇ ಸೆಪ್ಟೆಂಬರ್ 8ಕ್ಕೆ ಓಟಿಟಿಗೆ ಲಗ್ಗೆ ಇಡ್ತಿದೆ. 6 ಕೋಟಿ 75 ಲಕ್ಷ ರೂಪಾಯಿಗಳಷ್ಟು ಬೃಹತ್ ಮೊತ್ತಕ್ಕೆ ಜಿಯೋ ಹಾಟ್‌‌ಸ್ಟಾರ್ ಪಾಲಾಗಿರೋ ಸೋಮೇಶ್ವರ ಸುಲೋಚನಾ, ಪಂಚಭಾಷೆಯಲ್ಲಿ ಮುಂದಿನ ತಿಂಗಳು ಕಿರುತೆರೆಗೆ ಎಂಟ್ರಿ ಕೊಡ್ತಿದೆ. ಹಾಗಾಗಿ, ಇನ್ನೂ ನಾ ಸು ಫ್ರಮ್ ಸೋ ನೋಡಿಲ್ಲ ಗುರು ಅನ್ನೋರು ಓಟಿಟಿಯಲ್ಲಿ ಬೇಕಾದಷ್ಟು ಬಾರಿ, ಬೇಕಾದ ಸೀಕ್ವೆನ್ಸ್‌ನ ನೋಡಿ ಎಂಜಾಯ್ ಮಾಡಬಹುದು.

Exit mobile version