ಶ್ರೀಸಾಮಾನ್ಯನಾಗಿರಲಿ ಅಥ್ವಾ ಸ್ಟಾರ್ ಆಗಿರಲಿ ಟ್ರೆಂಡ್‌ನ ಫಾಲೋ ಮಾಡಲೇಬೇಕಾದ ಅನಿವಾರ್ಯತೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿದೆ. ಹಾಗಾಗಿ ರೀಲ್ಸ್ ಮಾಡೋದ್ರಿಂದ ರಾಜ್ ಬಿ ಶೆಟ್ಟಿ ಕೂಡ ಹೊರತಾಗಿಲ್ಲ. ಯೆಸ್.. ಸು ಫ್ರಮ್ ಸೋ ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಮಲಯಾಳಿಗರಿಗೂ ರುಚಿಸ್ತಿದೆ. ಅದೇ ಖುಷಿಯಲ್ಲಿ ಬಂದರೋ ಬಂದರು ಬಾವ ಬಂದರು ಅಂತ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ ಶೆಟ್ರು.
- ಶೆಟ್ರ ರೀಲ್ಸ್ ರಂಗು.. ಸು ಫ್ರಮ್ ಸೋ ಬಾವ ಬಂದರು ಗುಂಗು
- ನಗುವಿನ ಟಾನಿಕ್ ಕಿಕ್.. 2ನೇ ವಾರವೂ ಎಲ್ಲೆಡೆ ಹೌಸ್‌ಫುಲ್
- ಮಲಯಾಳಿಗರಿಗೂ ರುಚಿಸಿತು ಟರ್ಬೋ ವಿಲನ್ ಪ್ರಯೋಗ
- ತಡೆಯೋರಿಲ್ಲ ನಗು.. ಬಾಕ್ಸ್ ಆಫೀಸ್‌ಗೆ ಬ್ರೇಕ್ ಹಾಕೋರಿಲ್ಲ
ಶ್ರಾವಣ ಅಂದಾಕ್ಷಣ ವರಮಹಾಲಕ್ಷ್ಮೀ ಹಬ್ಬ ನೆನಪಾಗುತ್ತೆ. ಬಹುತೇಕ ಮಂದಿ ಹಬ್ಬದಂದು ಲಕ್ಷ್ಮೀಯನ್ನ ಕೂರಿಸಿ, ತರಹೇವಾರಿ ರೂಪದಲ್ಲಿ ಅಲಂಕರಿಸಿ ಇಷ್ಟಾರ್ಥಗಳನ್ನ ಸಿದ್ದಿಸಿ ಅಂತ ವರಗಳನ್ನು ಕೇಳಿಕೊಳ್ತಾರೆ. ಆದ್ರೆ ಈ ಬಾರಿ ಸ್ಯಾಂಡಲ್‌ವುಡ್ ಪಾಲಿಗೆ ಹಬ್ಬಕ್ಕೂ ಮೊದಲೇ ಧನಲಕ್ಷ್ಮೀ ವರ ಕೊಟ್ಟಾಗಿದೆ. ಯೆಸ್.. ಮೊದಲು ಎಕ್ಕ, ಜೂನಿಯರ್ ನಂತರ ಸು ಫ್ರಮ್ ಸೋ.. ಇದೀಗ ಕೊತ್ತಲವಾಡಿ.
ಅಂದಹಾಗೆ ರಾಜ್ ಬಿ ಶೆಟ್ಟಿ ನಟಿಸಿ, ನಿರ್ಮಿಸಿರೋ ಹಾರರ್ ಕಾಮಿಡಿ ಸಿನಿಮಾ ಸು ಫ್ರಮ್ ಸೋ ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಜೆ ಪಿ ತುಮಿನಾಡ್ ನಿರ್ದೇಶಿಸಿ, ಲೀಡ್‌ನಲ್ಲಿ ನಟಿಸಿರೋ ಈ ಸಿನಿಮಾ ಪ್ರೇಕ್ಷಕರನ್ನ ಇನ್ನಿಲ್ಲದೆ ರಂಜಿಸುತ್ತಿದೆ. ನಗುವಿನ ಟಾನಿಕ್ ನೀಡಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರೋ ಸು ಫ್ರಮ್ ಸೋ, ಇಂದಿನಿಂದ ಪಕ್ಕದ ಮಲಯಾಳಂಗೂ ಲಗ್ಗೆ ಇಟ್ಟಿದೆ.
ದೇಶಾದ್ಯಂತ ಎಲ್ಲೆಡೆ ಬಿಗ್ ಓಪನಿಂಗ್ ಪಡೆದಿರೋ ಸು ಫ್ರಮ್ ಸೋ ಪ್ರಶಂಸೆ, ಪ್ರತಿಕ್ರಿಯೆಗಳಿಗೆ ರಾಜ್ ಬಿ ಶೆಟ್ಟಿ ಅಂಡ್ ಕಂಪ್ಲೀಟ್ ಟೀಂ ದಿಲ್‌ಖುಷ್ ಆಗಿಬಿಟ್ಟಿದೆ. ಡೈರೆಕ್ಟರ್ ಹಾಗೂ ರವಿಯಣ್ಣ ಪಾತ್ರಧಾರಿ ಜೊತೆ ಶೆಟ್ರು ಬಂದರೋ ಬಂದರು ಬಾವ ಬಂದರು ಅಂತ ಫಸ್ಟ್ ಟೈಂ ಕುಣಿದು ಕುಪ್ಪಳಿಸಿದ್ದಾರೆ. ಅದೂ ರೀಲ್ಸ್ ಮಾಡೋ ಮೂಲಕ ಅನ್ನೋದು ಇಂಟರೆಸ್ಟಿಂಗ್.
ಪೇಯ್ಡ್ ಪ್ರೀಮಿಯರ್ ಶೋಗಳಿಂದ ಹಿಡಿದು, ವಿಜಯಯಾತ್ರೆವರೆಗೆ ತಂಡಕ್ಕೆ ಬೆನ್ನೆಲುಬಾಗಿ ನಿಂತಿರೋ ರಾಜ್ ಬಿ ಶೆಟ್ಟಿಗೆ, ಉತ್ತರ ಕರ್ನಾಟಕ ಮಂದಿಯಿಂದಲೂ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. ಅಂದಹಾಗೆ ಬಾವ ಕ್ಯಾರೆಕ್ಟರ್ ಚಿತ್ರದ ಪ್ರಮುಖ ಪಾತ್ರಗಳಲ್ಲೊಂದು. ಅವ್ರು ಎಂಟ್ರಿ ಕೊಟ್ರೆ ಸಾಕು ಬಂದರೋ ಬಂದರು ಬಾವ ಬಂದರೋ ಅನ್ನೋ ಸಾಂಗ್ ಬಿಟ್ ಸಿನಿಮಾದುದ್ದಕ್ಕೂ ಪ್ಲೇ ಆಗುತ್ತೆ. ಹಾಗಾಗಿ ಅದೇ ಸಾಂಗ್ ಬಿಟ್‌ಗೆ ಶೆಟ್ರು ರೀಲ್ಸ್ ಮಾಡಿರೋದು ಎಲ್ಲೆಡೆ ವೈರಲ್ ಆಗ್ತಿದೆ.
ಸಾಮಾನ್ಯವಾಗಿ ಒಂದು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ್ರೆ, ಅದರ ಸೀಕ್ವೆಲ್ ಬಗ್ಗೆ ಟಾಕ್ಸ್ ಬರುತ್ತವೆ. ಆದ್ರೆ ಸ್ವತಃ ನಿರ್ಮಾಪಕ ರಾಜ್ ಶೆಟ್ಟಿ ಸ್ಪಷ್ಟಪಡಿಸಿರೋ ಹಾಗೆ ಸು ಫ್ರಮ್ ಸೋ ಎರಡನೇ ಭಾಗ ಯಾವುದೇ ಕಾರಣಕ್ಕೂ ಬರ್ತಿಲ್ಲ. ನಾನ್‌ಸ್ಟಾಪ್ ಮನರಂಜನೆ ನೀಡ್ತಿರೋ ಈ ಚಿತ್ರ ವೀಕೆಂಡ್ಸ್‌ನಲ್ಲಿ ಮಾತ್ರವಲ್ಲದೆ, ವೀಕ್ ಡೇಸ್‌ನಲ್ಲೂ ಹೌಸ್‌ಫುಲ್ ಆಗ್ತಿವೆ. ರಿಪೀಟೆಡ್ ಆಡಿಯೆನ್ಸ್ ಪದೇ ಪದೆ ಸಿನಿಮಾ ನೋಡೋಕೆ ಬರ್ತಿದ್ದು, ಫ್ಯಾಮಿಲಿ ಆಡಿಯೆನ್ಸ್ ಅಚ್ಚುಮೆಚ್ಚಿನ ಚಿತ್ರವಾಗಿ ಹೊರಹೊಮ್ಮಿದೆ. ಬಹುಶಃ ರಾಮ ಶಾಮ ಬಾಮ ಚಿತ್ರದ ಬಳಿಕ ಆ ಪಾಟಿ ನಗೆ ಬುಗ್ಗೆ ಚಿಮ್ಮಿದ ಚಿತ್ರ ಅನಿಸಿಕೊಂಡಿರೋದು ಸು ಫ್ರಮ್ ಸೋ ಒಂದೇನೇ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್