ರಾಜ್ ಬಿ ಶೆಟ್ಟಿ ಜೊತೆ ಕೊಲ್ಯಾಬೊರೇಷನ್‌ಗೆ ದೇವಗನ್ ರೆಡಿ

ಅಜಯ್ ದೇವಗನ್ ಮೆಚ್ಚಿದ ಕಾಮಿಡಿ ಗನ್ ಸು ಫ್ರಮ್ ಸೋ

Web (7)

ಸ್ಯಾಂಡಲ್‌ವುಡ್ ಕಾಮಿಡಿ ಗನ್ ಸು ಫ್ರಮ್ ಸೋಗೆ ಬಾಲಿವುಡ್ ಅಜಯ್ ದೇವಗನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ದೇವಗನ್ ಸಿನಿಮಾನ ಕೇಳಿ, ಮನೆಯಲ್ಲೇ ವೀಕ್ಷಿಸಿ, ಟೀಂನ ಕರೆಸಿ ಶಹಬ್ಬಾಸ್ ಎಂದಿದ್ದಾರೆ. ಹಾಗಾದ್ರೆ ಸು ಫ್ರಮ್ ಸೋ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು..? ಬಾಲಿವುಡ್‌‌ನಲ್ಲಿ ಯಾರೆಲ್ಲಾ ಫಿದಾ ಆಗಿದ್ದಾರೆ.

ಸೋಮೇಶ್ವರ ಸುಲೋಚನಾಳ ಕಾಮಿಡಿ ಮಹಿಮೆಗೆ ಚಿತ್ರಪ್ರೇಮಿಗಳು ನಕ್ಕು ನಕ್ಕು ಸುಸ್ತಾಗ್ತಿದ್ದಾರೆ. ನಾಲ್ಕೈದು ಕೋಟಿ ಸಣ್ಣ ಬಜೆಟ್‌‌ನಲ್ಲಿ ತಯಾರಾದ ರಾಜ್ ಬಿ ಶೆಟ್ಟಿ ಬಳಗದ ಸು ಫ್ರಮ್ ಸೋ ಸಿನಿಮಾ, ಇಂದು ನೂರು ಕೋಟಿ ಕ್ಲಬ್‌‌‌ ಸೇರುವ ಗಡಿಯಲ್ಲಿದೆ.  ಕನ್ನಡದಲ್ಲಿ ತಯಾರಾದ ಈ ಸಿನಿಮಾ ಹೌಸ್‌‌ಫುಲ್ ಪ್ರದರ್ಶನ ಹಾಗೂ ಜನ ಮೆಚ್ಚುಗೆಯಿಂದ ಪಕ್ಕದ ಕೇರಳ ಹಾಗೂ ಆಂಧ್ರದ ಮಲಯಾಳಂ, ತೆಲುಗಿಗೂ ಹೋಗಿ, ಮೋಡಿ ಮಾಡಿದೆ.

ಇಲ್ಲಿಯವರೆಗೆ ಕರ್ನಾಟವೊಂದರಲ್ಲೇ 65 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರೋ ಸು ಫ್ರಮ್ ಸೋ ಚಿತ್ರ, ಕರ್ನಾಟಕದ ಹೊರತಾಗಿ ಪರ ರಾಜ್ಯಗಳು ಹಾಗೂ ವಿದೇಶಗಳಲ್ಲಿ ಸುಮಾರು 21 ಕೋಟಿ ರೂಪಾಯಿ ಗ್ರಾಸ್ ಗಳಿಸಿದೆ. ಒಟ್ಟು 86 ಕೋಟಿ ಲೂಟಿ ಮಾಡಿರೋ ಈ ಕಾಮಿಡಿ ಹಾರರ್ ಎಂಟರ್‌ಟೈನರ್, ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರಿ. ನೂತನ ದಾಖಲೆ ನಿರ್ಮಿಸಲಿದೆ. ಅಂದಹಾಗೆ ಕಾಂತಾರ ಕೂಡ ಇದೇ ರೀತಿ ಆಗಿತ್ತು. ಇದೀಗ ಅದರ ಹಾದಿಯಲ್ಲಿ ಸು ಫ್ರಮ್ ಸೋ ಸೂಪರ್ ಡೂಪರ್ ಹಿಟ್ ಆಗಿದೆ.

ಅಂದಹಾಗೆ ಆಗಸ್ಟ್ 9ರ ಶನಿವಾರದಂದು ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್, ಸು ಫ್ರಮ್ ಸೋಗೆ ಸಿಗ್ತಿರೋ ಅಭೂತಪೂರ್ವ ರೆಸ್ಪಾನ್ಸ್ ನೋಡಿ, ಮನೆಯಲ್ಲೇ ಸಿನಿಮಾ ವೀಕ್ಷಿಸಿದ್ದಾರೆ. ಭಾನುವಾರ ಚಿತ್ರತಂಡವನ್ನು ಮನೆಗೆ ಆಹ್ವಾನಿಸಿದ್ದರಂತೆ. ಆದ್ರೆ ಆಗಸ್ಟ್ 12ರ ಮಂಗಳವಾರದಂದು ಶೂಟಿಂಗ್ ಸೆಟ್‌‌ನಲ್ಲಿದ್ದ ಅಜಯ್ ದೇವಗನ್‌ರನ್ನ ರಾಜ್ ಬಿ ಶೆಟ್ಟಿ, ಬಾಲಕೃಷ್ಣ, ಜೆಪಿ ತುಮಿನಾಡ್, ಶಾನೀಲ್ ಗೌತಮ್ ಭೇಟಿ ಮಾಡಿದ್ದಾರೆ. ಸಿನಿಮಾನ ಬಹಳ ಇಷ್ಟವಾದ ಹಿನ್ನೆಲೆ ಇಡೀ ತಂಡವನ್ನು ಕರೆದ ಅಜಯ್ ದೇವಗನ್, ಹಾಡಿ ಹೊಗಳಿದ್ದಾರೆ. ಟೀಂ ಎಫರ್ಟ್‌ಗೆ ಶಹಬ್ಬಾಸ್ ಎಂದಿದ್ದಾರೆ.

ಅಷ್ಟೇ ಅಲ್ಲ, ಮುಂದೆ ಪ್ರಾಜೆಕ್ಟ್ ಮಾಡೋದಿದ್ರೆ ನಾನು ಕೊಲ್ಯಾಬೊರೇಷನ್ ಮಾಡ್ತೀನಿ. ಕನ್ನಡದಲ್ಲಿ ನೀವು ಮಾಡಿ, ಹಿಂದಿಯಲ್ಲಿ ನಾನು ಮಾಡ್ತೀನಿ. ಒಟ್ಟೊಟ್ಟಿಗೆ ಎರಡೂ ಕಡೆ ಸಿನಿಮಾ ಮಾಡೋಣ ಅಂತ ಓಪನ್ ಆಗಿ ಆಫರ್ ನೀಡಿದ್ದಾರೆ. ಇದಲ್ಲವೇ ಕನ್ನಡಿಗರ ಗತ್ತು. ನಿಜಕ್ಕೂ ಇದು ಗ್ರೇಟ್ ಮೊಮೆಂಟ್ ಆಗಿದ್ದು, ಇಡೀ ರಾಜ್ ಶೆಟ್ಟಿ ಟೀಂ ದಿಲ್‌ಖುಷ್ ಆಗಿದೆ.

ಬಾಲಿವುಡ್ ನಡ, ಕರಾವಳಿಯ ಕುವರ ಸುನೀಲ್ ಶೆಟ್ಟಿ ಸದ್ಯದಲ್ಲೇ ಸಿನಿಮಾ ನೋಡಲಿದ್ದಾರಂತೆ. ಜಾಲಿ ಎಲ್‌ಎಲ್‌ಬಿ ಪ್ರೊಡ್ಯೂಸರ್ ಕೂಡ ಸು ಫ್ರಮ್ ಸೋ ನೋಡಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಹಿಂದಿಯಲ್ಲಿ ರಿಮೇಕ್‌ ಮಾಡಲು ದೊಡ್ಡ ದೊಡ್ಡ ಬ್ಯಾನರ್‌‌ಗಳು ರೈಟ್ಸ್ ಕೇಳ್ತಿದ್ದಾರಂತೆ. ಕರಣ್ ಜೋಹಾರ್ ಒಡೆತನದ ಧರ್ಮ ಪ್ರೊಡಕ್ಷನ್‌‌‌ನಿಂದ ಕೂಡ ಹಿಂದಿ ರಿಮೇಕ್‌ಗೆ ಆಫರ್ ಬಂದಿರೋದು ಇಂಟರೆಸ್ಟಿಂಗ್. ಅಂದಹಾಗೆ ತಮಿಳು ರಿಮೇಕ್ ರೈಟ್ಸ್ ಸೋಲ್ಡ್ ಔಟ್ ಆಗಿದ್ದು, ತಮಿಳಲ್ಲಿ ಡಬ್ ಮಾಡಿ ರಿಲೀಸ್ ಮಾಡ್ತಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದೆ ಚಿತ್ರತಂಡ.

 

Exit mobile version