ಬಘೀರ ಬಳಿಕ ಒಂದಲ್ಲ ಎರಡೆರಡು ಚಿತ್ರಗಳಲ್ಲಿ ಬ್ಯುಸಿ ಆಗಿದ್ರು ರೋರಿಂಗ್ ಸ್ಟಾರ್ ಶ್ರೀಮುರಳಿ. ಆ ಪೈಕಿ ಪರಾಕ್ ಚಿತ್ರದ ಟೀಸರ್ ಲಾಂಚ್ ಆಗಿದ್ದು, ಮಾಸ್ ಪ್ರಿಯರ ನಾಡಿಮಿಡಿತ ಹೆಚ್ಚಿಸಿದೆ. 3 ವರ್ಷ ಟೀಸರ್ ಮಾಡಿದ ಚಿತ್ರತಂಡ ಬೇಷರತ್ ಕ್ಷಮೆ ಯಾಚಿಸೋದ್ರ ಜೊತೆಗೆ ತಕ್ಕ ಸ್ಪಷ್ಟನೆ ಕೂಡ ನೀಡಿದೆ. ಇಷ್ಟಕ್ಕೂ ಟೀಸರ್ ಹೇಗಿದೆ..? ಮುರಳಿ ಮಾತಾಡಿದ್ದೇನು..?
- ಪರಾಕ್ ಟೀಸರ್‌ಗೆ ಬಹುಪರಾಕ್.. 3 ವರ್ಷ ಟೈಂಗೆ ಸ್ಪಷ್ಟನೆ
- ರೋರಿಂಗ್ ಸ್ಟಾರ್ ಈಸ್ ಬ್ಯಾಕ್.. ಮಾಸ್ ಕಾ ಬಾಪ್..!!
- ಸಿಕ್ಸ್ ಪ್ಯಾಕ್, ಸ್ಟಿಚಸ್, ಬ್ಲಡ್.. ಮಚ್ಚು, ಕತ್ತಿ & ಗನ್ ಮೊರೆತ
- ಬೇಷರತ್ ಕ್ಷಮೆ ಯಾಚಿಸಿದ್ಯಾಕೆ ಮುರಳಿ? ಯಾರಿಗಾಗಿ ಚಿತ್ರ?
ಇದು ಆ್ಯಕ್ಷನ್ ಪ್ಯಾಕ್ಡ್ ಪರಾಕ್ ಚಿತ್ರದ ಟೀಸರ್ ಝಲಕ್. ರಾ & ರಗಡ್ ಅವತಾರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಭರ್ಜರಿ ಕಂಬ್ಯಾಕ್ ಮಾಡಿದ್ದು, ಮಾಸ್ ಪ್ರಿಯರು ಶಿಳ್ಳೆ, ಚಪ್ಪಾಳೆಯಿಂದ ರಿಪೀಟ್ ಮೋಡ್‌ನಲ್ಲಿ ನೋಡ್ತಿದ್ದಾರೆ. ಯೆಸ್.. ಬಘೀರ ಬಳಿಕ ಉಗ್ರಾಯುಧಂ ಹಾಗೂ ಪರಾಕ್ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ಮುರಳಿ, ಸದ್ಯ ಈ ಟೀಸರ್‌ನಿಂದ ಸಖತ್ ಸೌಂಡ್ ಮಾಡ್ತಿದ್ದಾರೆ.
ಖಾಸಗಿ ಮಾಲ್‌ವೊಂದರಲ್ಲಿ ಬಿಡುಗಡೆಯಾದ ಟೀಸರ್‌ಗೆ ಎಲ್ಲೆಡೆಯಿಂದ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಹಾಲೇಶ್ ಕೊಗುಂಡಿ ನಿರ್ದೇಶನದ ಈ ಚಿತ್ರದ ಟೀಸರ್ ವಿಕ್ರಮ್‌ನ ರೋಲೆಕ್ಸ್ ರೋಲ್ ನೆನಪಿಸುವಂತಿದ್ದು, ಅದರಷ್ಟೇ ರಕ್ತಸಿಕ್ತ ಅಧ್ಯಾಯವಾಗಿದೆ. ಇಲ್ಲಿ ಹಳೆಯ ರೇಡಿಯೋ, ರೆಟ್ರೋ ಸಾಂಗ್, ಕತ್ತಿ, ಮಚ್ಚು, ಲಾಂಗ್‌ಗಳ ಜಳಪ, ಗನ್ ಮೊರೆತ, ಬ್ಲಡ್, ಸ್ಟಿಚಸ್, ರೋರಿಂಗ್ ಸ್ಟಾರ್ ಸಿಕ್ಸ್‌ಪ್ಯಾಕ್ ಹೈಲೈಟ್ಸ್.
ನಟ ಶ್ರೀಮುರಳಿ ಮಾತನಾಡಿ.. ಪರಾಕ್ ಟೀಸರ್ ನೋಡಿದ್ರೆ ಇದು ಸುಲಭವಾಗಿ ಆದ ಕೆಲಸ ಅಲ್ಲ. ಅದಕ್ಕೆ ವ್ಯಯಿಸಿದ ಶ್ರಮ ಅಷ್ಟಿಷ್ಟಲ್ಲ. ಇದನ್ನು ತೆಗೆಯಲು ಎರಡೂವರೆ ವರ್ಷ ತೆಗೆದುಕೊಂಡೆವು. ಪರಾಕ್ ಸುಲಭವಾಗಿ ಶುರುವಾದ ಸಿನಿಮಾವಲ್ಲ. ಕಥೆಗೆ ಮೂರೂವರೆ ವರ್ಷ ಟೈಮ್ ಕೊಟ್ಟಿದ್ದೇವೆ. ಹೊಸಬರು, ಹೊಸ ಪ್ರೊಡಕ್ಷನ್ ಜೊತೆ ಯಾಕೆ ಸಿನಿಮಾ ಮಾಡಿದ್ದೇನೆ ಅಂದ್ರೆ ಅವ್ರ ಜೊತೆ ಕೆಲಸ ಮಾಡಲು ನನಗೆ ಕಿಕ್ಕು. ನಾನು ಹೊಸಬರನ್ನು, ಅವರ ಆಲೋಚನೆಯನ್ನು, ಇಷ್ಟಪಡುತ್ತೇನೆ.. ನಂಬುತ್ತೇನೆ. ಪರಾಕ್ ಎಂಬ ಅದ್ಬುತ ಪ್ರಯತ್ನವನ್ನು ಎಲ್ಲರಿಗೂ ನೀಡಬೇಕು ಎಂಬ ಅಸೆ, ಹಠ, ಕಾಳಜಿಯಿಂದ ಮಾಡುತ್ತಿದ್ದೇವೆ ಎಂದರು. ತಡ ಆಗ್ತಿರೋ ವಿಷಯಕ್ಕೆ ಕ್ಷಮೆ ಕೇಳಿದ ಮುರಳಿ, ತಕ್ಕ ಸ್ಪಷ್ಟನೆ ಕೂಡ ನೀಡಿದ್ರು. ಅಲ್ಲದೆ, ಯಾರನ್ನ ನೆಚ್ಚಿಸೋಕೆ ಸಿನಿಮಾ ಮಾಡ್ತಿರೋದು ಅನ್ನೋದಕ್ಕೂ ಉತ್ತರಿಸಿದ್ರು.
ಚರಣ್ ರಾಜ್ ಮ್ಯೂಸಿಕ್, ಸಂದೀಪ್ ಕ್ಯಾಮೆರಾ ಕೈಚಳಕ, ರವಿವರ್ಮ ಸಾಹಸ ನಿರ್ದೇಶನ ಸಿನಿಮಾಗಿದ್ದು, ಹಂಡ್ರೆಡ್ ಪರ್ಸೆಂಟ್ ಕಲ್ಟ್ ಫೀಲ್ ಕೊಡುತ್ತೆ ಟೀಸರ್. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್‌ನಡಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಮಂಜುನಾಥ್ ಟಿ, ಮೋಹನ್ ಕೆ ಓ, ಹಾಲೇಶ್ ಕೋಗುಂಡಿ ಸಂಭಾಷಣೆ ಬರೆದಿದ್ದಾರೆ. ಸದ್ಯ ಚಿತ್ರದ 35ರಷ್ಟು ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
