ಹೊಸ ಇತಿಹಾಸ ಬರೆದ ಶೆಟ್ರು.. ‘ಸು ಫ್ರಮ್ ಸೋ’ ಸೂಪರ್

ಉದಯೋನ್ಮುಖ ಪ್ರತಿಭೆಗಳ ಜೊತೆ ಗೆದ್ದು ಬೀಗಿದ ರಾಜ್ ಶೆಟ್ಟಿ

Untitled design 2025 07 25t154603.934

ಪರಭಾಷಾ ಸೂಪರ್ ಸ್ಟಾರ್‌ಗಳು ರೆಡ್ ಕಾರ್ಪೆಟ್ ಹಾಸಿ ವೆಲ್ಕಮ್ ಮಾಡ್ತಿದ್ರೂ, ತಾಯಿ ನೆಲ ಮರೆತಿಲ್ಲ ರಾಜ್ ಬಿ ಶೆಟ್ಟಿ. ಕೆರೆಯ ನೀರನ್ನ ಕೆರೆಗೇ ಚೆಲ್ಲಿ ಅನ್ನೋ ಮಾತಿನಂತೆ ಹೊಸ ಪ್ರತಿಭೆಗಳಿಗಾಗಿ ಸು ಫ್ರಮ್ ಸೋ ಅನ್ನೋ ಸಿನಿಮಾ  ನಿರ್ಮಿಸಿದ್ದಾರೆ. ರಿಲೀಸ್‌ಗೂ ಮೊದಲೇ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಟಾಕ್ ಆಫ್ ದಿ ಟೌನ್ ಆಗಿರೋ ಸೋಮೇಶ್ವರ ಸುಲೋಚನ ಕಥೆ, ನೋಡುಗರನ್ನ ಹೊಟ್ಟೆ ಹುಣ್ಣಾಗಿಸುವಂತೆ ನಕ್ಕು ನಲಿಸುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನ ಎಬ್ಬಿಸಿದ ಬಳಗ ಅಂದ್ರೆ ಅದು ಶೆಟ್ರ ಟೀಂ. ರಕ್ಷಿತ್, ರಿಷಬ್ ಹಾಗೂ ರಾಜ್ ಬಿ ಶೆಟ್ಟಿ ನಟನೆ, ನಿರ್ದೇಶನ ಹಾಗೂ ನಿರ್ಮಾಣದ ಜೊತೆ ಜೊತೆಗೆ ಬರವಣಿಗೆಯಲ್ಲೂ ಮಾಸ್ಟರ್‌ಮೈಂಡ್ಸ್. ಅವ್ರ ಕಲಾ ಗತ್ತು ಏನು ಅನ್ನೋದನ್ನ ಸಾಕಷ್ಟು ಬಾರಿ ಪ್ರೂವ್ ಮಾಡಿದ್ದಾರೆ. ಪದೇ ಪದೆ ಪ್ರೂವ್ ಮಾಡ್ತಿದ್ದಾರೆ ಕೂಡ. ಸದ್ಯ ಪರಭಾಷಾ ಸೂಪರ್ ಸ್ಟಾರ್‌ಗಳೆಲ್ಲಾ ರತ್ನಗಂಬಳಿ ಹಾಸಿ, ರಾಜ್ ಶೆಟ್ರಿಗೆ ಸ್ವಾಗತ ಕೋರುತ್ತಿರೋ ಈ ಬ್ಯುಸಿ ಶೆಡ್ಯೂಲ್ ನಡುವೆ ಒಂದೊಳ್ಳೆ ಫೀಲ್ ಗುಡ್ ಮೂವಿ ನೀಡಿದ್ದಾರೆ ಶೆಟ್ರು. ಅದೇ ಸು ಫ್ರಮ್ ಸೋ.

ಯೆಸ್.. ತಾನೆಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ಸಹ ಹೊಸ ಸಿನಿಮೋತ್ಸಾಹಿ ಪ್ರತಿಭೆಗಳಿಗಾಗಿ ಚಿತ್ರ ನಿರ್ಮಾಣ ಮಾಡೋದನ್ನ ಬಿಡದೇ ಇರೋ ರಾಜ್ ಬಿ ಶೆಟ್ರ ಮನಸ್ಥಿತಿಗೆ ಮೊದಲು ಸಲಾಂ ಹೇಳಬೇಕು. ಕೆರೆಯನ್ನ ನೀರನ್ನ ಕೆರೆಗೇ ಚೆಲ್ಲಿ ಅನ್ನೋ ಮಾತಿನಂತೆ ನಟಿಸಿದ ಸಿನಿಮಾಗಳ ಸಂಭಾವನೆ ಹಣವನ್ನು ನ್ಯೂ ಟ್ಯಾಲೆಂಟ್ಸ್‌‌ ಮೇಲೆ ಇನ್ವೆಸ್ಟ್ ಮಾಡ್ತಿರೋದು ಗ್ರೇಟ್. ಜೆಪಿ ತುಮಿನಾಡ ಅನ್ನೋ ಯಂಗ್‌ಸ್ಟರ್ ಪ್ರಧಾನ ಪಾತ್ರದಲ್ಲಿ ನಟಿಸಿ, ನಿರ್ದೇಶಿಸಿರೋ ಸು ಫ್ರಮ್ ಸೋ ಚಿತ್ರ ಪ್ರೇಮಿಗಳನ್ನ ದೊಡ್ಡ ಮಟ್ಟದಲ್ಲಿ ಥಿಯೇಟರ್‌‌ನತ್ತ ಸೆಳೆಯುವಲ್ಲಿ ಯಶಸ್ವಿ ಆಗಿದೆ.

ಅಂದಹಾಗೆ ಸು ಫ್ರಮ್ ಸೋ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಆದ್ರೆ ರಿಲೀಸ್‌ಗೂ ಮೊದಲೇ ಮಂಗಳೂರು, ಶಿವಮೊಗ್ಗ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನ ನಡೆಸಿದ ಚಿತ್ರತಂಡಕ್ಕೆ ಎಲ್ಲೆಡೆಯಿಂದ ನಿರೀಕ್ಷೆಗೂ ಮೀರಿದ ಬೊಂಬಾಟ್ ರೆಸ್ಪಾನ್ಸ್ ದೊರೆತಿದೆ. ಮೊದಲ ದಿನಕ್ಕೆ ಸುಮಾರು 17 ಸಾವಿರ ಟಿಕೆಟ್ಸ್ ಸೋಲ್ಡ್ ಔಟ್ ಆಗಿರೋದು ಇಂಟರೆಸ್ಟಿಂಗ್. 38 ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿದ್ದು, ಎಲ್ಲವೂ ಹೌಸ್‌‌ಫುಲ್ ಆಗಿವೆ ಅಂದ್ರೆ ನೀವು ನಂಬಲೇಬೇಕು.

80ಕ್ಕೂ ಅಧಿಕ ಥಿಯೇಟರ್‌‌ಗಳಲ್ಲಿ ಸುಮಾರು 350ರಿಂದ 400 ಶೋಗಳು ಇಂದು ಪ್ರದರ್ಶನ ಕಂಡಿವೆ. ಸಿನಿಮಾ ನೋಡಿದ ಪ್ರೇಕ್ಷಕರೆಲ್ಲಾ ಸು ಫ್ರಮ್ ಸೋ ಸೂಪರ್ ಸೂಪರ್ ಸೂಪರ್ ಅಂತಿದ್ದಾರೆ. ಕಾಮಿಡಿ ಕಮ್ ಹಾರರ್ ಜಾನರ್‌ನ ಈ ಸಿನಿಮಾ ನಿಮಗೊಂದು ಫ್ರೆಶ್ ಫೀಲ್ ತಂದುಕೊಡಲಿದೆ. ಮೊಬೈಲ್ ಸೈಡ್‌‌ಗಿಟ್ಟು ಸಿನಿಮಾ ನೋಡೋಕೆ ಶುರು ಮಾಡಿದ್ರೆ ಓಪನಿಂಗ್ ನಿಂದ ಕ್ಲೈಮ್ಯಾಕ್ಸ್‌ವರೆಗೆ ನಕ್ಕು ನಕ್ಕು ಸಾಕಾಗುತ್ತೆ. ಹೊಟ್ಟೆ ಹುಣ್ಣಾಗಿಸೋ ಅಷ್ಟು ನಲಿಸುತ್ತೆ.

ನಿಮ್ಮನ್ನು ಹಳ್ಳಿಯೊಂದಕ್ಕೆ ಕರೆದೊಯ್ಯುವ ಸು ಫ್ರಮ್ ಸೋ, ಹೊಡಿ ಬಡಿ ಕಡಿ ಸಿನಿಮಾಗಳಿಂದ ಬೇಸತ್ತ ನಯನಗಳನ್ನ ತಂಪಾಗಿಸುತ್ತೆ. ಜೀವನದ ಜಂಜಾಟಗಳಿಂದ ಜಡವಾಗಿರೋ ಮನಸ್ಸುಗಳಿಗೆ ಆಹ್ಲಾದ ನೀಡುತ್ತೆ. ಅಂದಹಾಗೆ ಈ ಸಿನಿಮಾದ ಜೀವಾಳವೇ ಬರವಣಿಗೆ. ಮಕ್ಕಳಿಂದ ಮುದುಕರ ವರೆಗೆ ಎಲ್ಲರೂ ನೋಡುಬಹುದಾದಂತಹ ಪಕ್ಕಾ ಮನರಂಜನೆಯ ಪೈಸಾ ವಸೂಲ್ ಮೂವಿ ಸು ಫ್ರಮ್ ಸೋ.

ರವಿ ಅಣ್ಣನಾಗಿ ಶನೀಲ್ ಗೌತಮ್, ನಾಯಕನಟ ಅಶೋಕನಾಗಿ ಡೈರೆಕ್ಟರ್ ಜೆಪಿ ತುಮಿನಾಡ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಮೈಮ್ ರಾಮದಾಸ್, ಸಂಧ್ಯಾ ಹೀಗೆ ಸಾಕಷ್ಟು ಮಂದಿ ರಂಗಭೂಮಿ ಹಾಗೂ ತುಳು ಕಲಾವಿದರ ದಂಡು ಈ ಚಿತ್ರಕ್ಕಿದೆ. ಸುಮೇಧ್ ಕೆ ಹಿನ್ನೆಲೆ ಸಂಗೀತ ಚಿತ್ರದ ಹೈಲೆಟ್‌. ದಯವಿಟ್ಟು ಎರಡು ಗಂಟೆ 17 ನಿಮಿಷಗಳ ಕಾಲ ಈ ಸಿನಿಮಾಗಾಗಿ ಮೀಸಲಿಡಿ. ನೀವು ಟಿಕೆಟ್‌‌ಗೆ ನೀಡಿದ ದುಡ್ಡಿಗಿಂತ ಜಾಸ್ತಿ ನಿಮ್ಮನ್ನು ಈ ಸು ಫ್ರಮ್ ಸೋ ರಂಜಿಸುತ್ತೆ. ಇದಕ್ಕೆ ಗ್ಯಾರಂಟಿಯೇ ಗ್ಯಾರಂಟಿ. ಅಂದಹಾಗೆ ಸು ಫ್ರಮ್ ಸೋ ಅಂದ್ರೆ ಸುಲೋಚನಾ ಫ್ರಮ್ ಸೋಮೇಶ್ವರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version