ಅತ್ಯುತ್ತಮ ಚಲನಚಿತ್ರವಾಗಿ ‘ಸೆಪ್ಟೆಂಬರ್10’ ಆಯ್ಕೆ

Untitled design 2025 07 25t224834.847

ಶತ ಚಿತ್ರಗಳ ಸರದಾರ ಓಂ ಸಾಯಿಪ್ರಕಾಶ್ ಅವರ ನಿರ್ದೇಶನ ಹಾಗೂ ನಿರ್ಮಾಣದ ‘ಸೆಪ್ಟೆಂಬರ್ 10’ ಚಿತ್ರವು ಬಿಡುಗಡೆಗೂ ಮುನ್ನವೇ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.

ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ಎಂಬ ಸಂದೇಶ ಹೊತ್ತು ತೆರೆಗೆ ಬರುತ್ತಿರುವ ‘ಸೆಪ್ಟೆಂಬರ್ 10’ ಚಲನಚಿತ್ರಕ್ಕೆ ಇದೀಗ ಯುನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್ ಹಾಗೂ ಜೆನಸಿಸ್ ಅಲ್ಟಿಮಾ ದುಬೈನ ಸಹಯೋಗದೊಂದಿಗೆ ನಡೆಯುತ್ತಿರುವ ಹೈದರಾಬಾದ್ ನ ಚಾರ್ ಮಿನಾರ್ 17ನೇ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದೆ.

ಹೈದರಾಬಾದ್ ನ ಪ್ರಸಾದ್ ಫಿಲಂ ಲ್ಯಾಬ್ ನಲ್ಲಿ ಜುಲೈ 26, 27ರಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ನಿರ್ದೇಶಕ‌ ಹಾಗೂ ನಿರ್ಮಾಪಕ ಸಾಯಿಪ್ರಕಾಶ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

Exit mobile version