ಲೈಗರ್ ಬಳಿಕ ಕಲ್ಟ್ ಡೈರೆಕ್ಟರ್ ಪೂರಿ ಜಗನ್ನಾಥ್ ಕೈ ಹಾಕಿರೋ ಸಿನಿಮಾ ಸ್ಲಂ ಡಾಗ್. ತಮಿಳಿನ ವಿಜಯ್ ಸೇತುಪತಿ ಹಾಗೂ ನಮ್ಮ ಕನ್ನಡದ ಸ್ಯಾಂಡಲ್‌ವುಡ್ ಸಲಗ ವಿಜಯ್ ಕುಮಾರ್ ಕಾಂಬೋ ಸಿನಿಮಾ ಇದಾಗಿದ್ದು, ಟೀಸರ್ ನೋಡುಗರ ಹುಬ್ಬೇರಿಸಿದೆ. ಆ್ಯಕ್ಷನ್-ಎಮೋಷನ್ ಬ್ಲೆಂಡ್ ಆಗಿರೋ ಸ್ಲಂ ಡಾಗ್ ಕಥೆ ಎಂಥದ್ದು..? ವಿಜಯ್ ವರ್ಸಸ್ ವಿಜಯ್ ಟಗ್ ಆಫ್ ವಾರ್ ಹೇಗಿರಲಿದೆ ಅನ್ನೋದ್ರ ಜೊತೆ ನಮ್ಮ ಭೀಮನ ಕುರಿತು ಟೀಂ ಏನು ಹೇಳುತ್ತೆ ಅನ್ನೋದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
- ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ.. ಸ್ಲಂ ಡಾಗ್ ಸೆನ್ಸೇಷನ್
- ದುನಿಯಾ ಡೇಸ್ ನೆನೆದ ಸೇತು.. ಗೋಲ್ಡ್ ಹಾರ್ಟ್ ಎಂದ ಚಾರ್ಮಿ
- ಆ್ಯಕ್ಷನ್ & ಎಮೋಷನ್ ಮಿಕ್ಸ್ಡ್ ಮಾಸ್ ಕಮರ್ಷಿಯಲ್ ಪ್ಯಾಕ್
- ಮೂಕುತಿ ಅಮ್ಮನ್-2 ಬಳಿಕ ದುನಿಯಾ ವಿಜಯ್ 2ನೇ ವೆಂಚರ್
ಇದು ಸ್ಲಂ ಡಾಗ್.. 33 ಟೆಂಪಲ್ ರೋಡ್ ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ತಮಿಳು ಸಿನಿಮಾ ಇದಾಗಿದ್ದು, ತಮಿಳಿನ ಜೊತೆ ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂನಲ್ಲೂ ತಯಾರಾಗ್ತಿದೆ. ಲೈಗರ್ ಚಿತ್ರದ ಬಳಿಕ ಪೂರಿ ಜಗನ್ನಾಥ್ ನಿರ್ದೇಶನದ ಸಿನಿಮಾ ಆದ್ದರಿಂದ ಸಹಜವಾಗಿಯೇ ಕುತೂಹಲ ಗರಿಗೆದರಿದೆ. ಕಲ್ಟ್ ಡೈರೆಕ್ಟರ್ ಅಂತಲೇ ಫೇಮಸ್ ಆಗಿರೋ ಪೂರಿ ಒನ್ಸ್ ಅಗೈನ್ ನೆಗೆಟೀವ್ ಟೈಟಲ್‌ನಿಂದ ತಮ್ಮ ವಿಂಟೇಜ್ ಮೇಕಿಂಗ್ ಸ್ಟೈಲ್‌ನ ಬೆಳ್ಳಿತೆರೆಗೆ ತರ್ತಿದ್ದಾರೆ.
ಇದೊಂದು ಆ್ಯಕ್ಷನ್ & ಎಮೋಷನ್ ಬ್ಲೆಂಡ್ ಆಗಿರೋ ಸಿನಿಮಾ ಆಗಿದ್ದು, ರಿಯಲ್ ಆ್ಯಕ್ಷನ್ ಸೀಕ್ವೆನ್ಸ್‌ಗಳು ಕಾಣಸಿಗಲಿವೆ. ಸ್ವಾಭಾವಿಕ ಹಾಗೂ ಸಹಜ ಭಾವನಾತ್ಮಕ ಅಂಶಗಳು ಕೂಡ ಚಿತ್ರದಲ್ಲಿವೆ. ಅಂದಹಾಗೆ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಆಂಧ್ರದವರಾದ್ರೂ, ಹೀರೋ-ವಿಲನ್‌ಗಳು ಮಾತ್ರ ತಮಿಳು, ಕನ್ನಡದವರು ಅನ್ನೋದು ಇಂಟರೆಸ್ಟಿಂಗ್. ಯೆಸ್.. ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ವಿಜಯ್ ಸೇತುಪತಿ ಹಾಗೂ ನಮ್ಮ ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ ಕುಮಾರ್ ಟಗ್ ಆಫ್ ವಾರ್ ಜೋರಿದೆ.
ಸೇತುಪತಿ ಇಲ್ಲಿ ಭಿಕ್ಷುಕರ ಪರ ನಿಲ್ಲೋ ಹೀರೋ ಆಗಿದ್ದು, ಕೆಲ ಶೇಡ್‌ಗಳಲ್ಲಿ ಮಿಂಚಲಿದ್ದಾರೆ. ಆದ್ರೆ ದುನಿಯಾ ವಿಜಯ್ ರೋಲ್ ಮಾತ್ರ ಸಖತ್ ಟೆರಿಫಿಕ್ ಆಗಿದ್ದು, ಅವ್ರ ಕಾಸ್ಟ್ಯೂಮ್ಸ್, ಲುಕ್ಸ್, ವಿಲನ್ ಖದರ್ ಜಬರ್ದಸ್ತ್ ಆಗಿದೆ. ಶಿವಾಜಿನಗರ ಸಿನಿಮಾದ ಬಳಿಕ ದುನಿಯಾ ವಿಜಯ್ ಆ ತರಹದ ಲುಕ್‌ನಲ್ಲಿ ಕಿಕ್ ಕೊಡ್ತಿದ್ದು, ಖಳನಾಯಕನಿಗೆ ಹೇಳಿ ಮಾಡಿಸಿದಂತಹ ಕಿಲ್ಲಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ.
ನಯನತಾರಾ ಜೊತೆ ಮೂಕುತಿ ಅಮ್ಮನ್-2 ಚಿತ್ರ ಮಾಡಿರೋ ನಮ್ಮ ಭೀಮ, ಅದಾದ ಬಳಿಕ ಈ ಸ್ಲಂ ಡಾಗ್ ಚಿತ್ರ ಅವರ ಎರಡನೇ ತಮಿಳು ಪ್ರಾಜೆಕ್ಟ್ ಆಗ್ತಿದೆ. ಈಗಾಗ್ಲೇ ವೀರಸಿಂಹಾ ರೆಡ್ಡಿ ಅನ್ನೋ ತೆಲುಗು ಚಿತ್ರದಲ್ಲಿ ಬಾಲಯ್ಯ ಜೊತೆ ತೆರೆ ಹಂಚಿಕೊಂಡಿದ್ದ ನಮ್ಮ ವಿಜಯ್ ಕುಮಾರ್, ಆಂಧ್ರ ಮಂದಿಗೂ ಚಿರಪರಿಚಿತರು. ಅಲ್ಲದೆ, ಅವ್ರನ್ನ ನಿರ್ಮಾಪಕಿ ಚಾರ್ಮಿ ಕೌರ್ ಕೊಂಡಾಡಿರೋ ಪರಿ ಇಂಟರೆಸ್ಟಿಂಗ್.
ದುನಿಯಾ ವಿಜಯ್ ಜೆಮ್ ಆಫ್ ಎ ಪರ್ಸನ್.. ಪ್ಯೂರ್ ಗೋಲ್ಡ್ ಹಾರ್ಟ್. ಬೆಂಗಳೂರಿಗೆ ಬಂದು ನಿರೂಪಣೆ ನೀಡಿದ್ವಿ.. ಒಂದು ಮಾತು ಕೂಡ ಆಡಲಿಲ್ಲ. ಪೂರಿ ಅವರ ಜೊತೆ ಕೂತು.. ಸರ್ ನನಗೆ ಕಥೆ ಇಷ್ಟ ಆಯ್ತು. ನಾನು ಮಾಡ್ತಿದ್ದೀನಿ ಅಂದ್ರು. ನಾನು ಇದರಲ್ಲಿ ಏನು ಮಾಡ್ತೀನಿ ಅನ್ನೋದು ವಿಷಯವೇ ಅಲ್ಲ.. ನಿಮ್ಮೊಂದಿಗೆ ಕೆಲಸ ಮಾಡ್ತೀನಿ ಅಷ್ಟೇ ಎಂದು, ಅವರ ಡೇಟ್ಸ್‌ನ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್‌ನಲ್ಲಿ ಭಾಗಿಯಾದ್ರು. ದುನಿಯಾ ವಿಜಯ್ ಕುಮಾರ್ ಸರ್ ಈ ಸಿನಿಮಾನ ಒಪ್ಪಿಕೊಂಡಿದ್ದಕ್ಕೆ ನಾವು ಸದಾ ಆಭಾರಿ ಆಗಿರುತ್ತೇವೆ. ಅವರು ಕನ್ನಡ ಸೇರಿದಂತೆ ಎಲ್ಲೆಡೆ ಬಹುದೊಡ್ಡ ಸ್ಟಾರ್. ನೀವು ಇದರಲ್ಲಿ ಮುಖ್ಯ ವಿಲನ್ ಆಗಿ ಮಾಡಿದ್ದೀರಿ. ಅದಕ್ಕೆ ಧನ್ಯವಾದ ಎಂದ ನಿರ್ಮಾಪಕಿ ಅಂದ್ರು ಚಾರ್ಮಿ ಕೌರ್.
ಇನ್ನೂ ವಿಜಯ್ ಸೇತುಪತಿ ಮಾತಾಡ್ತಾ ದುನಿಯಾ ವಿಜಯ್ ಕುರಿತು ಕೊಂಡಾಡಿದ್ರು. ನಾನು ಬೆಂಗಳೂರಿಗೆ ಒಮ್ಮೆ ಹೋಗಿದ್ದೆ, ಆಗ ದುನಿಯಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಎಂದ ಸೇತು, ನಮ್ಮ ಬ್ಲ್ಯಾಕ್ ಕೋಬ್ರಾ ವ್ಯಕ್ತಿತ್ವ, ಹಾರ್ಡ್ ವರ್ಕ್ ಹಾಗೂ ಡೆಡಿಕೇಷನ್‌ನ ಹಾಡಿ ಹೊಗಳಿದ್ರು.
ಇನ್ನೂ ಕ್ಯಾಪ್ಟನ್ ಆಫ್ ದಿ ಶಿಪ್ ಪೂರಿ ಜಗನ್ನಾಥ್ ಮಾತಾಡ್ತಾ, ದುನಿಯಾ ವಿಜಯ್ ಅವರು ದೊಡ್ಡ ಸೂಪರ್ ಸ್ಟಾರ್. ಆದ್ರೂ ಸಹ ನಮ್ಮ ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡೋಕೆ ಒಪ್ಪಿಕೊಂಡಿದ್ದು ಗ್ರೇಟ್ ಅಂತ ಮೆಚ್ಚುಗೆಯ ಮಾತುಗಳನ್ನಾಡಿದ್ದು ವಿಶೇಷ.
ಒಟ್ಟಾರೆ ಸ್ಲಂ ಡಾಗ್ ಸಿನಿಮಾ ಮೇಕಿಂಗ್, ಪಾತ್ರಗಳು ಹಾಗೂ ಕಾಂಬಿನೇಷನ್‌ನಿಂದ ಸಖತ್ ಸಂಚಲನ ಮೂಡಿಸಿದೆ. ಚಿತ್ರದಲ್ಲಿ ನಾಯಕನಟಿಯಾಗಿ ಸಂಯುಕ್ತಾ ಮೆನನ್ ಬಣ್ಣ ಹಚ್ಚಿದ್ದು, ನಟಿ ಟಬು ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಚಿತ್ರಕ್ಕೆ ಪ್ಲಸ್ ಆಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
