ಅಯೋಗ್ಯ ಟ್ರೈಲರ್ ಬರಲ್ಲ.. ಆದರೆ ಜಗಮಗಿಸಲಿದೆ ಇವೆಂಟ್

ಈಶ್ವರ ಖಂಡ್ರೆ (5)

ಅಯೋಗ್ಯ ಪಾರ್ಟ್-2 ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಪ್ರೀ-ರಿಲೀಸ್ ಇವೆಂಟ್‌ಗೆ ವೇದಿಕೆ ಸಜ್ಜಾಗಿದ್ದು, ಟ್ರೈಲರ್ ಇಲ್ಲದೆ ಸಿನಿಮಾ ಬರ್ತಿರೋದು ಅಚ್ಚರಿ ಮೂಡಿಸಿದೆ. ಇಷ್ಟಕ್ಕೂ ಈ ಸ್ಟ್ರ್ಯಾಟಜಿ ಏನು..? ಇವೆಂಟ್‌ಗೆ ಯಾರೆಲ್ಲಾ ಬರ್ತಿದ್ದಾರೆ..? ಏನು ಅದ್ರ ವಿಶೇಷತೆ ಅನ್ನೋದಕ್ಕೆ ಇಲ್ಲಿದೆ ಉತ್ತರ.

ಎಂಟು ವರ್ಷಗಳ ನಂತ್ರ ಬರ್ತಿರೋ ಅಯೋಗ್ಯ ಚಿತ್ರದ ಸೀಕ್ವೆಲ್ ಅಯೋಗ್ಯ-2 ಬಿಡುಗಡೆಗೆ ಇನ್ನು ಏಳೇ ಏಳು ದಿನ ಬಾಕಿಯಿದೆ. ನಿರ್ದೇಶಕ ಮಹೇಶ್ ಕುಮಾರ್ ಒನ್ಸ್ ಅಗೈನ್ ಅದೇ ಅಭಿನಯ ಚತುರ ನೀನಾಸಂ ಸತೀಶ್ ಹಾಗೂ ಲೇಡಿ ಸೂಪರ್ ಸ್ಟಾರ್ ರಚಿತಾರಾಮ್‌‌ ಜೋಡಿಯೊಂದಿಗೆ ಮೋಡಿ ಮಾಡುವ ಲಕ್ಷಣ ತೋರಿದ್ದಾರೆ. ಪಕ್ಕಾ ಗ್ರಾಮೀಣ ಸೊಗಡಿನ ಈ ಸಿನಿಮಾ ಮಂಡ್ಯದ ಸುತ್ತ ಸೆರೆಹಿಡಿಯಲಾಗಿದ್ದು, ಸಾಂಗ್ಸ್ ಸೂಪರ್ ಹಿಟ್ ಆಗಿವೆ.

ಅರ್ಜುನ್ ಜನ್ಯ ಸಂಗೀತ ಸಿನಿಮಾಗೆ ಪ್ಲಸ್ ಆಗಿದ್ದು, ಆನಂದ್ ಆಡಿಯೋಗೆ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿತ್ತು. ಮೂರು ಹ್ಯಾಟ್ರಿಕ್ ಹಿಟ್ ಸಾಂಗ್ಸ್ ಬಳಿಕ ಇದೀಗ ಮಿಲ್ಕಿ ಬ್ಯೂಟಿ ಅನ್ನೋ ಹೈ ವೋಲ್ಟೇಜ್ ಗ್ಲಾಮರಸ್ ಸಾಂಗ್ ಹೊರಬರ್ತಿದೆ. ಅದ್ರ ಪ್ರೋಮೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದು, ಯಾರು ಆ ಮಿಲ್ಕಿ ಬ್ಯೂಟಿ ಅನ್ನೋ ಚರ್ಚೆಗಳು ಶುರುವಾಗಿವೆ.

ಅಂದಹಾಗೆ ಸಿದ್ದೇಗೌಡ  ಹಾಗೂ ಬಚ್ಚೇಗೌಡರ ನಡುವಿನ ಪಂಚಾಯ್ತಿ ಕಾಳಗ ಇಲ್ಲಿಯೂ ಮುಂದುವರೆಯಲಿದ್ದು, ಈ ಬಾರಿ ನೀನಾಸಂ ಸತೀಶ್ ಏನೆಲ್ಲಾ ಸರ್‌‌ಪ್ರೈಸ್ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಸಿನಿಮಾ ರಿಲೀಸ್‌ಗೆ ಇನ್ನೊಂದೇ ಒಂದು ವಾರ ಬಾಕಿಯಿದೆ. ಆದ್ರೆ ಟ್ರೈಲರ್ ಮಾತ್ರ ರಿಲೀಸ್ ಆಗಿಲ್ಲ. ಹಾಗೆ ನೋಡ್ಬೇಕು ಅಂದ್ರೆ ರಿಲೀಸ್ ಆಗೋದೂ ಇಲ್ಲ. ಹೌದು.. ಪ್ರಮೋಷನ್‌‌‌ನಲ್ಲಿ ಕಿಂಗ್ ಅನಿಸಿಕೊಂಡಿರೋ ಡೈರೆಕ್ಟರ್ ಮಹೇಶ್ ಈ ಬಾರಿ ಅಯೋಗ್ಯ-2 ಟ್ರೈಲರ್ ಇಲ್ಲದೆಯೇ ಸಿನಿಮಾನ ತೆರೆಗೆ ತರ್ತಿರೋದು ಇಂಟರೆಸ್ಟಿಂಗ್. ಈ ಹೊಸ ಸ್ಟ್ರ್ಯಾಟಜಿ ಹಿಂದೆ ಏನೋ ಮ್ಯಾಟರ್ ಕೂಡ ಅಡಗಿದೆ ಅನ್ನೋದು ಅಲ್ಲಗೆಳೆಯೋ ಹಾಗಿಲ್ಲ.

ಅಂದಹಾಗೆ ಆಗಸ್ಟ್ 1, ಇದೇ ಶನಿವಾರ ಸಂಜೆ ಮಂತ್ರಿ ಮಾಲ್‌‌ನಲ್ಲಿ ಅಯೋಗ್ಯ-2 ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್‌ನ ಹಮ್ಮಿಕೊಂಡಿದೆ ಚಿತ್ರತಂಡ. ಅಲ್ಲಿ ಮಿಲ್ಕಿ ಬ್ಯೂಟಿ ಗ್ಲಾಮರ್ ಸಾಂಗ್ ರಿಲೀಸ್ ಆಗೋದ್ರ ಜೊತೆಗೆ ಒಂದೇ ವೇದಿಕೆಯಲ್ಲಿ ಇಡೀ ಚಿತ್ರರಂಗ ಸಮಾಗಮ ಆಗ್ತಿರೋದು ವಿಶೇಷ. ಹೌದು.. ನಟ ಶಿವರಾಜ್‌ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ದೇವರಾಜ್, ಶರಣ್, ಸಾಧು ಕೋಕಿಲಾ, ರವಿಶಂಕರ್, ಡಾರ್ಲಿಂಗ್ ಕೃಷ್ಣ, ನಾಗಭೂಷಣ್, ತರುಣ್ ಸುಧೀರ್, ಅಭಿಷೇಕ್ ಅಂಬರೀಶ್, ಲೂಸ್‌ಮಾದ ಯೋಗಿ, ಪೃಥ್ವಿ ಅಂಬರ್, ರಚಿತಾ ರಾಮ್ ಹಾಗೂ ನೀನಾಸಂ ಸತೀಶ್.. ಹೀಗೆ ಸಾಕಷ್ಟು ಮಂದಿ ತಾರೆಯರ ಕಲರವ ಜೋರಿರಲಿದೆ.

ನಿರ್ಮಾಪಕ ಮುನೇಗೌಡ ನಿರ್ಮಾಣದ ಈ ಅದ್ಧೂರಿ ಸಿನಿಮಾ ಆಗಸ್ಟ್ 7ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದ್ದು, ಲೋಕಲ್ ಪಾಲಿಟಿಕ್ಸ್, ಹೊಸ ಮಡದಿ ನಂದಿನಿ ಜೊತೆ ಸಿದ್ದೇಗೌಡನ ಗುದ್ದಾಟದ ಜೊತೆ ಬೆಣ್ಣೆ-ಮಟನ್-ಸಿದ್ದೇಗೌಡರ ಫ್ರೆಂಡ್ಶಿಪ್‌‌ ಕೂಡ ಅನಾವರಣಗೊಳ್ಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

Exit mobile version