ಚೈತ್ರಾ ಚೈತನ್ಯ.. ಹೇಮಂತ್ ಡೈರೆಕ್ಷನ್.. ಸಿದ್ದಾರ್ಥ್ ಸಂಭ್ರಮ

ಕನ್ನಡ ಗೀತೆ ಹಾಡಿ ಬೊಮ್ಮರಿಲ್ಲು ಸಿದ್ದಾರ್ಥ್ ಕನ್ನಡಾಭಿಮಾನ

11 (58)

ಬೊಮ್ಮರಿಲ್ಲು ಸಿದ್ದಾರ್ಥ್ ತನ್ನ 3BHK ಮೂವಿ ಪ್ರಮೋಷನ್ಸ್‌ಗಾಗಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ರು. ಚೈತ್ರಾ ಆಚಾರ್ ಚೈತನ್ಯ, ಸಪ್ತಸಾಗರದಾಚೆ ಎಲ್ಲೋ ಹೇಮಂತ್ ರಾವ್ ಡೈರೆಕ್ಷನ್‌ ಬಗ್ಗೆ ಕೊಂಡಾಡಿದ ಸಿದ್ದು, ಕನ್ನಡದ ಹಾಡು ಹಾಡಿ ಕನ್ನಡಾಭಿಮಾನ ಮೆರೆದರು. ಈ ಕುರಿತ ಕಲರ್‌ಫುಲ್ ಝಲಕ್ ಇಲ್ಲಿದೆ.

ಬೊಮ್ಮರಿಲ್ಲು ಸಿದ್ದಾರ್ಥ್.. ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದರಲ್ಲಿ ಒಬ್ಬ. ತಮಿಳು ಮೂಲದ ಈತ ನಟ, ನಿರ್ಮಾಪಕ ಹಾಗೂ ಗಾಯಕ ಕೂಡ ಹೌದು. ತಮಿಳು, ತೆಲುಗು ಚಿತ್ರರಂಗಗಳಲ್ಲಿ ಹೆಚ್ಚು ಸಕ್ರಿಯರಾಗಿರೋ ಇವರು, ಬಾಲಿವುಡ್ ಹಾಗೂ ಮಲಯಾಳಂ ಮಂದಿಗೂ ಕೆಲ ಸಿನಿಮಾಗಳಿಂದ ಚಿರಪರಿಚಿತ. ಇನ್ನು ಕನ್ನಡಿಗರಿಗೆ ಇವರನ್ನ ವಿಶೇಷವಾಗಿ ಇಂಟ್ರಡ್ಯೂಸ್ ಮಾಡುವ ಅವಶ್ಯಕತೆ ಇಲ್ಲ. ನಾವು ಕನ್ನಡಿಗರು.. ವಿಶಾಲ ಹೃದಯದವರು. ಅವರನ್ನ ಆಲ್‌ರೆಡಿ ಅಕ್ಸೆಪ್ಟ್ ಮಾಡಿಕೊಂಡು ಆಗಿದೆ.

ಕಳೆದ ಬಾರಿ ತನ್ನದೇ ಚಿತ್ತಾ ಸಿನಿಮಾದ ಪ್ರಮೋಷನ್ಸ್‌ಗೆ ಬಂದಿದ್ದ ಸಿದ್ದಾರ್ಥ್‌ಗೆ ಸುದ್ದಿಗೋಷ್ಠಿಯಲ್ಲಿ ಅವರನ್ನ ಅವಮಾನ ಮಾಡಿ ಕಳುಹಿಸಲಾಗಿತ್ತು. ಆಗ ಕಾವೇರಿ ವಿವಾದ ಭುಗಿಲೆದ್ದ ಹಿನ್ನೆಲೆ ತಮಿಳು ನಟನೊಬ್ಬ ಕನ್ನಡದಲ್ಲಿ ಸುದ್ದಿಗೋಷ್ಠಿ ಮಾಡೋದು ಸರಿ ಅಲ್ಲ ಅಂತ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂದು ಅಪಮಾನಗೊಂಡು ತೆರಳಿದ್ದ ಸಿದ್ದು, ಇದೀಗ ಕನ್ನಡದ ಕಲಾವಿದರ ಜೊತೆಗೇ ಸಿನಿಮಾ ಮಾಡಿ, ಅದನ್ನ ಬೆಂಗಳೂರಿಗೇ ಬಂದು ಭರ್ಜರಿ ಪ್ರಮೋಷನ್ಸ್ ನಡೆಸಿದ್ದಾರೆ.

ಯೆಸ್.. 3BHK ಅನ್ನೋ ಸಿನಿಮಾ ಮಾಡಿರೋ ಸಿದ್ದಾರ್ಥ್, ಅದನ್ನ ಇಡೀ ಚಿತ್ರತಂಡದ ಜೊತೆ ಬಂದು ಬೆಂಗಳೂರಿನ ಕೋರಮಂಗಲದ ಫೋರಂ ಮಾಲ್‌ನಲ್ಲಿ ಪ್ರಚಾರ ಮಾಡಿದ್ರು. ಅದಿಕ್ಕೆ ಡಾಲಿ ಧನಂಜಯ, ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಡೈರೆಕ್ಟರ್ ಹೇಮಂತ್ ರಾವ್ ಕೂಡ ಸಾಥ್ ನೀಡಿದ್ರು.

ಇನ್ನು ಶರತ್ ಕುಮಾರ್ ಹಾಗೂ ದೇವಯಾನಿ ಕೂಡ ಚಿತ್ರದ ತಾರಾಗಣದಲ್ಲಿದ್ದು, ಮಿಡಲ್ ಕ್ಲಾಸ್ ಫ್ಯಾಮಿಲಿಯೊಂದು ಮೂರು ರೂಮಿನ ಮನೆ ಮಾಡೋದ್ರ ಹಿಂದಿನ ಕಷ್ಟ ಕಾರ್ಪಣ್ಯಗಳು ಈ ಚಿತ್ರದಲ್ಲಿ ಅಡಗಿವೆ. ಸಿದ್ದಾರ್ಥ್ ಗೆ ಕನ್ನಡತಿ ಚೈತ್ರಾ ಆಚಾರ್ ಜೋಡಿಯಾಗಿದ್ದು, ಆಕೆಯ ನಟನೆಯನ್ನ ಸಿಕ್ಕಾಪಟ್ಟೆ ಕೊಂಡಾಡಿದ್ರು ಬೊಮ್ಮರಿಲ್ಲು ಸಿದ್ದಾರ್ಥ್. ಅಷ್ಟೇ ಅಲ್ಲ, ಸಪ್ತಸಾಗರದಾಚೆ ಎಲ್ಲೋ ನೋಡಿ ಫಿದಾ ಆಗಿರೋ ಸಿದ್ದು, ಡೈರೆಕ್ಟರ್ ಹೇಮಂತ್ ರಾವ್ ಬಳಿ, ನಿಮ್ಮ ಚಿತ್ರದಲ್ಲಿ ನನಗೊಂದು ಚಾನ್ಸ್ ಕೊಡಿ ಸರ್ ಅಂತ ಬಹುರಂಗವಾಗಿ ಬೇಡಿಕೆ ಇಟ್ಟರು.

ಅಲ್ಲದೆ, ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಹಾಡನ್ನ ಹಾಡುವ ಮೂಲಕ ಸಿದ್ದು, ಕನ್ನಡಿಗರ ಮನಸ್ಸು ಗೆದ್ದರು. ಆ ಮೂಲಕ ಅಂದು ಅವಮಾನ ಮಾಡಿದವರ ಎದುರೇ ಭೇಷ್ ಅನಿಸಿಕೊಂಡಿದ್ದಾರೆ.

ಒಟ್ಟಾರೆ ಇದೇ ಜುಲೈ 4ಕ್ಕೆ 3BHK ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದ್ದು, ಸ್ಯಾಂಪಲ್ಸ್‌ನಿಂದಲೇ ಸಿನಿಮಾ ನೋಡುವ ಕುತೂಹಲ ಹೆಚ್ಚಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version