ಇತ್ತಿಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಗಾಸಿಪ್ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಕೆಲ ದಿನಗಳಿಂದ ಕನ್ನಡದ ನಟಿ, ಕಿಸ್ ಬೆಡಗಿ ಶ್ರೀಲೀಲಾ ಅವರು ಬಾಲಿವುಡ್ ನಟನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಗಾಸಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿವೆ.. ಆದರೆ ಇದಕ್ಕೆ ಇವರಿಬ್ಬರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಕಾರ್ತಿಕ್ ಆರ್ಯನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡು, “ನೀನೇ ನನ್ನ ಜೀವನ” ಎಂದು ಕ್ಯಾಪ್ಶನ್ ಬರೆದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಕಾರ್ತಿಕ್ ಮತ್ತು ಶ್ರೀಲೀಲಾ ಅವರು ಅನುರಾಗ್ ಬಸು ನಿರ್ದೇಶನದ ಸಿನಿಮಾವೊಂದರಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಪಕ್ಕಾ ಲವ್‌ಸ್ಟೋರಿ ಆಗಿದೆ ಎಂದು ಹೇಳಲಾಗುತ್ತಿದ್ದು, ಕೆಲವರು ಇದನ್ನು ‘ಆಶಿಕಿ 3’ ಆಗಿರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಸಿನಿಮಾ ತಂಡದಿಂದ ಇನ್ನೂ ಅಧಿಕೃತ ಘೋಷಣೆ ಬರಬೇಕಿದೆ. ಶೂಟಿಂಗ್ ಡಾರ್ಜೆಲಿಂಗ್‌ನಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಕಾರ್ತಿಕ್ ಆರ್ಯನ್ ತಮ್ಮ ಸಹೋದರಿ ಕೃತಿಕಾ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂದರ್ಭದಲ್ಲಿ ನಡೆದ ಖಾಸಗಿ ಪಾರ್ಟಿಗೆ ಶ್ರೀಲೀಲಾ ಕೂಡ ಹಾಜರಾಗಿದ್ದರು. ಪಾರ್ಟಿಯಲ್ಲಿ ಶ್ರೀಲೀಲಾ ಮತ್ತು ಇತರರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಕಾರ್ತಿಕ್ ಆರ್ಯನ್ ಅವರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ಇವರಿಬ್ಬರ ಸ್ನೇಹ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಕೆಲ ಮಂದಿ, ಸಿನಿಮಾದ ಸಹನಟಿಯಾಗಿ ಪಾರ್ಟಿಗೆ ಬಂದಿರಬಹುದು ಎಂದು ಅಭಿಪ್ರಾಯಪಟ್ಟರೂ, ಹಲವರು ಇವರಿಬ್ಬರು ರಿಯಲ್ ಲವ್‌ನಲ್ಲಿ ಇದ್ದಾರೆ ಎಂದು ಕಾಮೆಂಟ್ ಕೂಡ ಮಾಡಿದ್ದರು.
ಇದಕ್ಕೂ ಮುನ್ನ ಕಾರ್ತಿಕ್ ಆರ್ಯನ್ ಅವರು ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಅವರ ಜೊತೆ ಲಿಂಕ್‌ಅಪ್ ಗಾಸಿಪ್‌ಗಳಿಂದ ಸುದ್ದಿಯಲ್ಲಿ ಇದ್ದರು. ಆದರೆ ಯಾವುದೇ ಸಂಬಂಧವನ್ನು ಅವರು ಅಧಿಕೃತವಾಗಿ ಒಪ್ಪಿಕೊಂಡಿರಲಿಲ್ಲ. ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದ ಕಾರ್ತಿಕ್, “ಪ್ರೀತಿ ಖರೀದಿಸಲು ಸಾಧ್ಯವಿಲ್ಲ. ಕೆಲಸದ ಹಿನ್ನಲೆಯಲ್ಲಿ ಹಲವರನ್ನು ಭೇಟಿಯಾಗಬಹುದು. ಆದರೆ ನನ್ನ ಲವ್ ಲೈಫ್‌ನಲ್ಲಿ ನಾನು ಅದೃಷ್ಟವಂತನಲ್ಲ. ಟೈಮ್ ಬಂದಾಗ ಸರಿಯಾದ ವ್ಯಕ್ತಿಯನ್ನು ಹುಡುಕುತ್ತೇನೆ,” ಎಂದು ಹೇಳಿದ್ದರು.
ಶ್ರೀಲೀಲಾ ವಿಷಯಕ್ಕೆ ಬಂದ್ರೆ, ‘ಕಿಸ್’ ಸಿನಿಮಾದ ನಂತರ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳ ಕಡೆ ಗಮನ ಹರಿಸಿದ್ದಾರೆ. ಅವರು ಈಗ ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಪಾನ್ ಇಂಡಿಯಾ ಮಟ್ಟದಲ್ಲಿ ಹವಾ ಸೃಷ್ಟಿಸಿದ ‘ಪುಷ್ಪ 2’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ, ಅವರು ಪ್ರಸ್ತುತ ಮೂರು ತೆಲುಗು, ಒಂದು ಹಿಂದಿ ಮತ್ತು ಒಂದು ತಮಿಳು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
