ಧ್ರುವ ಸರ್ಜಾ-ಜೋಗಿ ಪ್ರೇಮ್ ಜೋಡಿ ಎಲ್ಲೆಡೆ ಮೋಡಿ ಮಾಡ್ತಿದೆ. ಬಿಗ್‌ಸ್ಕ್ರೀನ್ ಮೇಲೆ ಕೆಡಿ ಕರಾಮತ್ತು ಜೋರಿದ್ದು, ರಿಲೀಸ್ ಆದ ಮರು ದಿನವೇ ಈ ಚಿತ್ರವನ್ನ ಒಬ್ರು ತುಂಬಾ ಸ್ಪೆಷಲ್ ವ್ಯಕ್ತಿ ವೀಕ್ಷಿಸಿದ್ದಾರೆ. ಅವರು ಬರೀ ಸಿನಿಮಾ ನೋಡಿಲ್ಲ. ಕೆಡಿ ನೋಡಿ ಅದ್ರ ಬಗ್ಗೆ ಬೊಂಬಾಟ್ ರಿವ್ಯೂ ಕೂಡ ಕೊಟ್ಟಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವನ ಕೊಂಡಾಡಿದ್ಯಾರು..? ಇದರ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ…
- KD ನೋಡಿ ಧ್ರುವ ಸರ್ಜಾ ಅತ್ತಿಗೆ ಕೊಟ್ಟ ರಿವ್ಯೂ ಏನು..?!
- ಈ ಕೆಡಿ ಪ್ರಿನ್ಸ್ ಬೆಸ್ಟ್ ವರ್ಷನ್.. ಹೆಮ್ಮೆ ಆಗ್ತಿದೆ ಬ್ರದರ್..!
- ಮೈದುನ ಧ್ರುವ ಜೊತೆ ಪ್ರೇಮ್ನ ಕೊಂಡಾಡಿದ ಮೇಘನಾ
- KDಗೆ ಸಖತ್ ಥ್ರಿಲ್ ಆದ ಚಿರು ಸರ್ಜಾ ವೈಫ್ ಹೇಳಿದ್ದೇನು?
ಮಾಸ್ ಕಮ್ ಎಮೋಷನಲ್ ಎಂಟರ್‌ಟೈನರ್ ಕೆಡಿ ಸಿನಿಮಾಗೆ ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ಜೋಗಿ ಪ್ರೇಮ್ ಒನ್ಸ್ ಅಗೈನ್ ಇಂಥಹ ಜಾನರ್ ಸಿನಿಮಾಗಳನ್ನ ಮಾಡೋದ್ರಲ್ಲಿ ಮಾಸ್ಟರ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಎರಡೇ ದಿನಕ್ಕೆ ಕರ್ನಾಟಕವೊಂದರಲ್ಲೇ ಬರೋಬ್ಬರಿ 5 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರೋ ಕೆಡಿ ಚಿತ್ರಕ್ಕೆ ಒಬ್ಬ ಸ್ಪೆಷಲ್ ಗೆಸ್ಟ್ ರಿವ್ಯೂ ನೀಡಿದ್ದಾರೆ.
ರಿಲೀಸ್ ಆದ ಮರು ದಿನವೇ ಅಂದ್ರೆ ಮೇ 1ರಂದು ನಟಿ ಮೇಘನಾ ರಾಜ್ ಕೆಡಿ ಸಿನಿಮಾನ ನೋಡಿದ್ದಾರೆ. ನೋಡಿದಾಕ್ಷಣ ಅದೇ ಎಕ್ಸೈಟ್‌ಮೆಂಟ್‌ನಲ್ಲಿ ಒಂದೊಳ್ಳೆ ಪೋಸ್ಟ್ ಕೂಡ ಹಾಕಿದ್ದಾರೆ. ಕೆಡಿಯನ್ನ ಕಣ್ತುಂಬಿಕೊಂಡ ಮೇಘನಾ ರಾಜ್, ತಮ್ಮ ಮೈದುನನಾದ ಧ್ರುವ ಸರ್ಜಾಗೆ ಮೆಚ್ಚುಗೆಯ ಮಹಾಪೂರವೇ ಹರಿಸಿದ್ದಾರೆ. ಇದು ನಿಮ್ಮ ಬೆಸ್ಟ್ ವರ್ಷನ್ ಬ್ರದರ್. ನಿಜಕ್ಕೂ ಹೆಮ್ಮೆ ಅನಿಸ್ತಿದೆ ಅಂತ ಇನ್ಸ್‌ಟಾ ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲ, ನೀವು ಅದ್ಭುತವಾಗಿ ನಟಿಸಿದ್ದೀರಿ. ಸ್ಕ್ರೀನ್ ಮೇಲೆ ಇಷ್ಟೊಂದು ಎನರ್ಜಿ ಹಾಗೂ ಪ್ರಾಮಾಣಿಕ ಕಠಿಣ ಪರಿಶ್ರಮ ನೋಡಿ ಬಹಳ ಖುಷಿ ಆಯಿತು. ಕೆಡಿ ತರಹದ ಜಾನರ್ ಬಂದಾಗ ಪ್ರೇಮ್ ಸರ್ ಏಕೆ ಅದ್ಭುತ ಅನಿಸ್ತಾರೆ ಅನ್ನೋದನ್ನ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಅಂತ ಧ್ರುವ ಹಾಗೂ ಜೋಗಿ ಪ್ರೇಮ್ ಇಬ್ಬರನ್ನೂ ಕೊಂಡಾಡಿದ್ದಾರೆ ಧ್ರುವ ಅತ್ತಿಗೆ ನಟಿ ಮೇಘನಾ ರಾಜ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
