ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಪಿಚ್ಚರ್ ಅನ್ನೋ ತುಳು-ಕನ್ನಡ ಸಿನಿಮಾದ ಮೂಲಕ ನಿರ್ಮಾಪಕಿ ಆಗಿರೋದು ಎಲ್ಲರಿಗೂ ಗೊತ್ತೇಯಿದೆ. ಇದೀಗ ಆ ಪ್ರೊಡ್ಯೂಸರ್ ಶಿಲ್ಪಾ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಗಾಯಕಿಯಾಗಿಯೂ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹಾಗಾದ್ರೆ ಹೇಗಿದೆ ಅವ್ರ ಕಂಠ..? ಸಾಂಗ್ ಪಿಕ್ಚರೈಸೇಷನ್ ಎಷ್ಟು ಸೊಗಸಾಗಿದೆ..?
ಕಣ್ಣು ಕಣ್ಣು ಕಲೆತಾಯಿತು.. ಆಸೆಯೂ ಕೈ ಗೂಡಿತು. ಭಾವ ನೂರು ಒಳಗೇ ಉಕ್ಕಿದೆ.. ಹದಿಹರೆಯಾನೇ ಹೀಗೆ ಇದೆ. ಇದು ಪಿಚ್ಚರ್ ಅನ್ನೋ ತುಳು ಹಾಗೂ ಕನ್ನಡ ಸಿನಿಮಾದ ಗೋಕುಲದ ರಾಧೆ ಸಾಂಗ್ ಝಲಕ್. ಈ ಹಾಡಿನ ಮೂಲಕ ಇಷ್ಟು ದಿನ ನಿರ್ಮಾಪಕಿ ಅನಿಸಿಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್, ಇದೀಗ ಗಾಯಕಿಯಾಗಿ ಬಡ್ತಿ ಪಡೆದು, ಎಲ್ಲರ ಗಮನ ಸೆಳೆದಿದ್ದಾರೆ. ಗಾಯಕ ಜಸ್ಕರಣ್ ಸಿಂಗ್ ಜೊತೆ ತಮ್ಮ ಗೋಲ್ಡನ್ ಕಂಠದ ಮೂಲಕ ಪ್ರೊಫೆಷನಲ್ ಸಿಂಗರ್ ರೀತಿ ಹಾಡಿಗೆ ಭಾವ ತುಂಬಿದ್ದಾರೆ ಶಿಲ್ಪಾ.
ಶಿಲ್ಪಾ ಗಣೇಶ್ ಗೋಲ್ಡನ್ ಕಂಠ.. ಗಾಯಕಿ ಆದ ಪ್ರೊಡ್ಯೂಸರ್
ಜಸ್ಕರಣ್ ಸಿಂಗ್, ಶಿಲ್ಪಾ ಗಾಯನದಲ್ಲಿ ಗೋಕುಲದ ರಾಧೆ ಗೀತೆ
ಗೋಲ್ಡನ್ ಮೂವೀಸ್ ಬ್ಯಾನರ್‌ನಡಿ ಸಂದೀಪ ಬೆದ್ರ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಿತ್ಯಪ್ರಕಾಶ್ ಬಂಟ್ವಾಳ್ ಹಾಗೂ ಅಮೃತ ಸುದು ನಟಿಸಿದ್ದಾರೆ. ಗೋಕುಲದ ರಾಧೆ ಎಂಬ ಹಾಡಿಗೆ ಶಿಲ್ಪಾ ಗಣೇಶ್ ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲೂ ಹಾಡಿದ್ದಾರೆ. ಈ ಮೂಲಕ ನಿರ್ಮಾಪಕಿಯಾಗಿದ್ದ ಶಿಲ್ಪಾ ಗಣೇಶ್, ಈಗ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಕನ್ನಡದಲ್ಲಿ ಅರಸು ಅಂತಾರೆ ಹಾಗೂ ತುಳುನಲ್ಲಿ ಕೀರ್ತನ್ ಭಂಡಾರಿ ಈ ಹಾಡನ್ನ ರಚಿಸಿದ್ದಾರೆ. ಸ್ಯಾಮ್ಯುಯೆಲ್ ಅಭಿ ಸಂಗೀತವಿದ್ದು, ಕಾಶ್ಮೀರದಲ್ಲಿ ಈ ಹಾಡಿನ ಚಿತ್ರೀಕರಣವಾಗಿದೆ.
ಸ್ಯಾಂಡಲ್‌ವುಡ್‌ಗೆ ಹೊಸ ಗಾಯಕಿ ಆಗಮನ.. ಗಣಿ ಖುಷ್
ಶಿಲ್ಪಾ ಗಣೇಶ್‌ಗೆ ಎಲ್ಲೆಡೆ ಪ್ರಶಂಸೆ, ಪ್ರತಿಕ್ರಿಯೆಗಳ ಮಹಾಪೂರ
ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ ಪಿಚ್ಚರ್ ಚಿತ್ರದ ಈ ಗೀತೆ. ಕೌಟುಂಬಿಕ, ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮನರಂಜನೆಯೇ ಪ್ರಧಾನವಾಗಿದೆ. ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ. ಎಸ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪಿಚ್ಚರ್ ಇದೇ ಜುಲೈ 24ರಂದು ಥಿಯೇಟರ್‌ಗೆ ಎಂಟ್ರಿ ಕೊಡಲಿದೆ.
