ವಿಶ್ವದ ಶ್ರೀಮಂತ ನಟ ಶಾರೂಖ್..ಇಲ್ಲಿದೆ ಪ್ರಾಪರ್ಟಿ ಲಿಸ್ಟ್..!

12 ಸಾವಿರ 490 ಕೋಟಿ ಒಡೆಯ ಬಾಲಿವುಡ್ ಕಿಂಗ್ ಖಾನ್

Untitled design 2025 10 15t191748.173

ಬಾಲಿವುಡ್‌ ಬಾದ್‌‌ಷಾ ಶಾರೂಖ್ ಖಾನ್ ಬಾಲಿವುಡ್‌‌ನ ಅತಿ ಶ್ರೀಮಂತ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಗ್‌‌ಬಿ, ಹೃತಿಕ್, ಜೂಹಿ ಚಾವ್ಲಾನ ಕೂಡ ಹಿಂದಿಕ್ಕಿರೋ ಕಿಂಗ್‌ ಖಾನ್ ನೆಟ್ ವರ್ತ್ ಎಷ್ಟು ಸಾವಿರ ಕೋಟಿ..? ಆತನ ಪ್ರಾಪರ್ಟಿಗಳು ಎಲ್ಲೆಲ್ಲಿ ಎಷ್ಟು ಕೋಟಿ ಬೆಲೆ ಬಾಳುತ್ತವೆ ಅನ್ನೋದನ್ನ ಡಿಟೈಲ್ಡ್ ಆಗಿ ತೋರಿಸ್ತೀವಿ. ಜಸ್ಟ್ ಹ್ಯಾವ್ ಎ ಲುಕ್.

ಶಾರೂಖ್‌ ಖಾನ್.. ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಹಾಗೂ ಅಪರೂಪದ ಕಲಾವಿದರಲ್ಲೊಬ್ಬರು. 1965ರಲ್ಲಿ ಡೆಲ್ಲಿಯಲ್ಲಿ ಜನಿಸಿದ ಇವರು ಅರ್ಧ ಹೈದ್ರಾಬಾದಿ, ಅರ್ಧ ಪಠಾಣ್ ಹಾಗೂ ಸ್ವಲ್ಪ ಕಾಶ್ಮೀರಿ. ಯೆಸ್.. ಅದನ್ನ ಅವರೇ ಹೇಳಿಕೊಂಡಿದ್ದುಂಟು. ಯಾಕಂದ್ರೆ ಶಾರೂಖ್ ಪಾಕಿಸ್ತಾನದಲ್ಲಿರೋ ಪೇಶಾವರದ ಪಠಾಣ್ ಕುಟುಂಬದವರು. ತಾಯಿ ಸೌತ್ ಇಂಡಿಯಾದವರು. ಅಜ್ಜಿ ಕಾಶ್ಮೀರದವರಾಗಿದ್ರು. ಈತ ಹುಟ್ಟಿದ್ದು ಡೆಲ್ಲಿಯಲ್ಲಾದ್ರೂ ತಾತ ಮಂಗಳೂರಿನ ಬಂದರಿನಲ್ಲಿ ಚೀಫ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹಿನ್ನೆಲೆ, ಐದು ವರ್ಷಗಳ ಕಾಲ ಕರಾವಳಿಯ ಮಂಗಳೂರಿನಲ್ಲೇ ಬೆಳೆದರು.

80ರ ದಶಕದಲ್ಲೇ ನಟನೆ ಆರಂಭಿಸಿದ ಶಾರೂಖ್ ಖಾನ್, ಇಂದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ರಾರಾಜಿಸ್ತಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟನೆ, ನಿರ್ಮಾಣ ಸೇರಿದಂತೆ ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ತೊಡಗಿಸಿಕೊಂಡಿರೋ ಶಾರೂಖ್, ಐಪಿಎಲ್‌‌‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಮಾಲೀಕರೂ ಹೌದು. ಹಿಂದೂ ಮತದಲ್ಲಿನ ಗೌರಿಯನ್ನ ಪ್ರೀತಿಸಿ ಮದ್ವೆಯಾದ ಶಾರೂಖ್‌ಗೆ ಮೂವರು ಮಕ್ಕಳು ಕೂಡ ಇದ್ದಾರೆ. ಬಾಲಿವುಡ್‌‌ ಬಾದ್‌ಷಾ ಆಗಿ, ಕಿಂಗ್ ಖಾನ್ ಆಗಿ ಅದೆಷ್ಟೋ ಮಂದಿಗೆ ಈತ ರೋಲ್ ಮಾಡೆಲ್.

ಡಿಡಿಎಲ್‌ಜೆ, ರಬ್ ನೇ ಬನಾದಿ ಜೋಡಿ, ದಿಲ್ ಸೇ, ದೇವದಾಸ್, ಕಭಿ ಖುಷಿ ಕಭಿ ಘಮ್, ಚೆನ್ನೈ ಎಕ್ಸ್‌‌ಪ್ರೆಸ್, ಡಾನ್, ಪಠಾಣ್ ಸೇರಿದಂತೆ ಸಾಕಷ್ಟು ಎವರ್‌‌ಗ್ರೀನ್ ಚಿತ್ರಗಳನ್ನ ನೀಡಿದ್ದಾರೆ. ನ್ಯಾಷನಲ್ ಅವಾರ್ಡ್‌ ಸೇರಿದಂತೆ ಸಾಲು ಸಾಲು ಫಿಲ್ಮ್ ಫೇರ್ ಪ್ರಶಸ್ತಿಗಳನ್ನ ಪಡೆದಿರೋ ಶಾರೂಖ್‌‌, ಪದ್ಮಶ್ರೀ ಗೌರವಕ್ಕೂ ಪಾತ್ರರಾಗಿದ್ದಾರೆ. ಸದ್ಯ ಶಾರೂಖ್ ಇದೀಗ ವಿಶ್ವದ ಅತಿ ಶ್ರೀಮಂತ ನಟ ಅನ್ನೋ ಗರಿಮೆಗೆ ಪಾತ್ರರಾಗಿದ್ದಾರೆ. ಹೌದು.. ಕಿಂಗ್‌ಖಾನ್ ಆಸ್ತಿಯ ಒಟ್ಟು ಮೊತ್ತ ಬರೋಬ್ಬರಿ 12 ಸಾವಿರದ 490 ಕೋಟಿ ರೂಪಾಯಿ ಅಂದ್ರೆ ನೀವು ನಂಬಲೇಬೇಕು.

ಅಂದಹಾಗೆ ಶಾರೂಖ್ ಎಷ್ಟು ದೊಡ್ಡ ಶ್ರೀಮಂತ ಅಂದ್ರೆ, ಬಾಲಿವುಡ್ ಶೆಹೆನ್‌ಷಾ ಬಿಗ್‌ ಬಿ ಅಮಿತಾಬ್ ಬಚ್ಚನ್, ಕರಣ್ ಜೋಹಾರ್, ಹೃತಿಕ್ ರೋಷನ್ ಹಾಗೂ ಜೂಹಿ ಚಾವ್ಲಾನ ಕೂಡ ಹಿಂದಿಕ್ಕಿದ್ದಾರೆ. ಹಾಗಾದ್ರೆ ಯಾರ ನೆಟ್‌‌ವರ್ತ್ ಎಷ್ಟು ಕೋಟಿ ಅಂತೀರಾ..? ಈ ಗ್ರಾಫಿಕಲ್ ಪ್ರೆಸೆಂಟೇಷನ್‌ ಒಮ್ಮೆ ನೋಡಿ.

ಭಾರತದ ಟಾಪ್ ಫೈವ್ ಶ್ರೀಮಂತ ಸೆಲೆಬ್ರಿಟೀಸ್ 

ಹೆಸರು ಆಸ್ತಿಯ ಮೊತ್ತ (ಕೋಟಿ ರೂಪಾಯಿಗಳಲ್ಲಿ)
ಶಾರೂಖ್ ಖಾನ್ 12,490
ಜೂಹಿ ಚಾವ್ಲಾ 7,790
ಹೃತಿಕ್ ರೋಷನ್ 2,160
ಕರಣ್ ಜೋಹರ್ 1,880
ಅಮಿತಾಬ್ ಬಚ್ಚನ್ 1,660
ಸೋ ನೋಡಿದ್ರಲ್ಲಾ.. ಶಾರೂಖ್ ಈ ಮೂಲಕ ತಾನೆಷ್ಟು ಉತ್ತುಂಗಕ್ಕೇರಿದ್ದಾರೆ ಅನ್ನೋದನ್ನ ತೋರಿಸಿದ್ದಾರೆ. ಅಂದಹಾಗೆ ಕಿಂಗ್ ಖಾನ್ ಪ್ರಾಪರ್ಟಿಗಳು ಎಲ್ಲೆಲ್ಲಿ ಎಷ್ಟೆಷ್ಟು ಕೋಟಿ ಬೆಲೆ ಬಾಳುತ್ತೆ ಅನ್ನೋದನ್ನ ಕೂಡ ಗ್ರಾಫಿಕಲ್ ಪ್ರೆಸೆಂಟೇಷನ್ ಮೂಲಕ ತೋರಿಸ್ತೀವಿ ಒಮ್ಮೆ ಕಣ್ತುಂಬಿಕೊಳ್ಳಿ.

ಶಾರೂಖ್ ಖಾನ್ ಬಳಿ ಇರೋ ದುಬಾರಿ ಆಸ್ತಿಗಳ ಪಟ್ಟಿ 

ಪ್ರಾಪರ್ಟಿ ಹೆಸರು (Property Name) ಮೊತ್ತ (ಕೋಟಿಗಳಲ್ಲಿ) (Amount in Crores)
ಪ್ರೈವೇಟ್ ಜೆಟ್ 260 ಕೋಟಿ
ಮುಂಬೈ ಮನ್ನತ್ ಮ್ಯಾನ್ಷನ್ 200 ಕೋಟಿ
ಲಂಡನ್ ಅಪಾರ್ಟ್‌ಮೆಂಟ್ 175 ಕೋಟಿ
ದುಬೈ ಜನ್ನತ್ ಬಂಗಲೆ 100 ಕೋಟಿ
ದುಬಾರಿ ಕೈ ಗಡಿಯಾರಗಳು 78 ಕೋಟಿ
IPL KKR ಫ್ರಾಂಚೈಸ್  55% ಸ್ಟೇಕ್ 
ಡೆಲ್ಲಿ ಬಂಗಲೆ 30 ಕೋಟಿ
ಆಲಿಬಾಗ್ ಫಾರ್ಮ್ ಹೌಸ್ 15 ಕೋಟಿ
 
ರೋಲ್ಸ್ ರಾಯ್ಸ್ ಕಾರು (2) 14 ಕೋಟಿ
BMW ಕಾರು (18) 2.6 ಕೋಟಿ

ನೋಡಿದ್ರಲ್ಲಾ.. ಆಮೀರ್ ಖಾನ್, ಸಲ್ಮಾನ್ ಖಾನ್‌ನ ಕೂಡ ಮೀರಿಸೋ ರೇಂಜ್‌ಗೆ ದೇಶ ವಿದೇಶಗಳಲ್ಲಿ ಐಷಾರಾಮಿ ಬಂಗಲೆಗಳು, ದುಬಾರಿ ಕಾರ್‌‌ಗಳನ್ನ ಕಿಂಗ್ ಖಾನ್ ಶಾರೂಖ್ ಹೊಂದಿದ್ದಾರೆ. ಇಷ್ಟೆಲ್ಲಾ ಇದೆಯಲ್ಲಾ ಅಂತ ಆತ ಎಂದೂ ಕೈ ಕಟ್ಟಿ ಕೂತಿಲ್ಲ. ಇಂದಿಗೂ ಯಂಗ್‌ಸ್ಟರ್‌‌ಗಳನ್ನ ನಾಚಿಸೋ ರೇಂಜ್‌ಗೆ ಮೈಕಟ್ಟು ಹೊಂದಿದ್ದಾರೆ. ಸಿಕ್ಸ್ ಪ್ಯಾಕ್‌ಗಳ ಮೂಲಕ ಎಲ್ಲರ ಹುಬ್ಬೇರಿಸ್ತಿದ್ದಾರೆ 59ರ ಹರೆಯದ ಶಾರೂಖ್ ಖಾನ್. ಅವ್ರ ಸಿನಿಮೋತ್ಸಾಹ ಕೂಡ ಕಿಂಚಿತ್ತೂ ಕುಂದಿಲ್ಲ. ಸೋ.. ಸಾಧಿಸುವ ಛಲ ನಿಮ್ಮಲ್ಲಿರಲಿ. ಜೊತೆಗೆ ಪ್ರಯತ್ನಗಳು ನಿರಂತರವಾಗಿರಲಿ. ಫಲವನ್ನು ಆ ದೇವರಿಗೆ ಬಿಡಿ.. ಒಂದಲ್ಲ ಒಂದು ದಿನ ಆತ ಕೊಟ್ಟೇ ಕೊಡ್ತಾನೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version