ಒಂದೇ ವರ್ಷದಲ್ಲಿ ಮೂರು ಬ್ಲಾಕ್ಬಸ್ಟರ್ ಹಿಟ್ಸ್ ಕೊಟ್ಟು, ಇಂಡಸ್ಟ್ರಿ ಶೇಕ್ ಮಾಡಿದ್ದ ಶಾರೂಖ್ ಖಾನ್, ಇದೀಗ ಮೂರು ವರ್ಷದ ನಂತ್ರ ಬಾಕ್ಸ್ ಆಫೀಸ್ಗೆ ಎಂಟ್ರಿ ಕೊಡ್ತಿದ್ದಾರೆ. ಬಾಲಿವುಡ್ ಮತ್ತೆ ತನ್ನ ಸುವರ್ಣ ಯುಗಕ್ಕೆ ಮರಳಬೇಕಂದ್ರೆ ದೊಡ್ಡ ಹಿಟ್ ಬೇಕಿದೆ. ಆ ಹೊಣೆಗಾರಿಕೆಯನ್ನ ಈ ಬಾರಿ ಸ್ವತಃ ಕಿಂಗ್ ಖಾನ್ ಹೊತ್ತಿದ್ದಾರೆ. ಕಿಂಗ್ ಕಿಂಗ್ ಆಗಿಯೇ ಬರ್ತಿದ್ದಾರೆ.
ಸ್ಟಾರ್ ನಟರ ಸಿನಿಮಾಗಳು ಈಗ ತೆರೆಗೆ ಬರೋದು ಸುಲಭವಲ್ಲ. ಒಂದು ಸಿನಿಮಾ ಹಿಂದೆ ವರ್ಷಗಳ ಪ್ಲಾನಿಂಗ್, ನೂರು ಜನರ ಬೆವರು, ಸಾವಿರ ಕೋಟಿ ಕನಸು ಇರುತ್ತದೆ. ಹಿಟ್ ಕೊಟ್ಟವರು ಸಾಮಾನ್ಯವಾಗಿ ತಕ್ಷಣ ಮುಂದಿನ ಸಿನಿಮಾ ಘೋಷಣೆ ಮಾಡ್ತಾರೆ. ಆದರೆ ಶಾರುಖ್ ಖಾನ್ ಸ್ಟೈಲ್ ಬೇರೆ. ಅವರು ಬರುವಾಗ ಸುಮ್ಮನೆ ಬರೋದಿಲ್ಲ ಇಂಡಸ್ಟ್ರಿಯ ದಿಕ್ಕೇ ಬದಲಿಸುತ್ತಾರೆ. ಜೀರೊ ಸೋಲಿನ ಬಳಿಕ ನಾಲ್ಕು ವರ್ಷಗಳ ಕಾಲ ಸಂಪೂರ್ಣ ಮೌನವಾಗಿದ್ದ ಶಾರುಖ್ ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ, ಟ್ರೋಲ್ ಎದುರಿಸಬೇಕಾಯ್ತು.
ಮೂರು ವರ್ಷಗಳ ಗ್ಯಾಪ್..ಕಿಂಗ್ ಖಾನ್ ರೀ-ಎಂಟ್ರಿ..!
ರೊಮ್ಯಾನ್ಸ್, ಆ್ಯಕ್ಷನ್, ಸ್ಟೈಲ್..ಫ್ಯಾನ್ಸ್ಗೆ ಡಬಲ್ ಡೋಸ್
ಕಿಂಗ್ ಖಾನ್ ಯುಗ ಮುಗಿದೇ ಹೋಯ್ತು ಅನ್ನೋ ಮಾತುಗಳು ಕೇಳಿ ಬಂದ್ವು. ಆದರೆ 2023ರಲ್ಲಿ ಒಂದೇ ವರ್ಷದಲ್ಲಿ ಪಠಾನ್, ಜವಾನ್, ಡಂಕಿ ಸಿನಿಮಾಗಳು ಬಿಡುಗಡೆ ಮಾಡಿ ಬಾಕ್ಸಾಫೀಸ್ಗೆ ಬೆಂಕಿ ಹಚ್ಚಿದರು. ಸಾವಿರ ಕೋಟಿಗಳ ಕ್ಲಬ್ನಲ್ಲಿ ಸಿನಿಮಾ ಒಂದರ ಮೇಲೆ ಒಂದು ಸೇರಿತು. ಆ ಹ್ಯಾಟ್ರಿಕ್ ಹಿಟ್ ಬಳಿಕ ಮತ್ತೆ ಶಾರುಖ್ ಸೈಲೆಂಟ್ ಮೋಡ್ಗೆ ಜಾರಿದ್ರು.
300Cr ಮೆಗಾ ಪ್ರಾಜೆಕ್ಟ್..ಕಿಂಗ್ ರಿಲೀಸ್ ಡೇಟ್ ಫಿಕ್ಸ್
ತಂದೆ ಸಿನಿಮಾ ಮೂಲಕ ಸುಹಾನಾ ಗ್ರ್ಯಾಂಡ್ ಲಾಂಚ್..!
ಸುಮಾರು 300 ಕೋಟಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಶಾರುಖ್ ಖಾನ್ ತಮ್ಮದೇ ಬ್ಯಾನರ್ ಮೂಲಕ ಸಿನಿಮಾ ನಿರ್ಮಿಸುತ್ತಿರುವುದು ವಿಶೇಷ. ಇದು ಕೇವಲ ಸಿನಿಮಾ ಅಲ್ಲ, ಒಂದು ಪವರ್ ಪ್ರಾಜೆಕ್ಟ್. ಮುಂಬೈ ಮತ್ತು ವಿದೇಶಿ ಲೊಕೇಶನ್ಗಳಲ್ಲಿ ಭರ್ಜರಿ ಚಿತ್ರೀಕರಣ ನಡೆದಿದ್ದು, ಕಳೆದ ವರ್ಷ ಮೇ ತಿಂಗಳಲ್ಲೇ ಶೂಟಿಂಗ್ ಆರಂಭವಾಗಿತ್ತು. ಕೆಲವು ಆಕ್ಷನ್ ಸೀಕ್ವೆನ್ಸ್ಗಳಿಗೆ ಅಂತಾರಾಷ್ಟ್ರೀಯ ಸ್ಟಂಟ್ ತಂಡವನ್ನು ಬಳಸಲಾಗಿದೆ ಎನ್ನುವ ಮಾಹಿತಿ ಕೂಡ ಕೇಳಿಬರುತ್ತಿದೆ. ಮತ್ತೊಂದು ಸೆನ್ಸೇಷನಲ್ ಹೈಲೈಟ್ ಏನಂದ್ರೆ ಅಪ್ಪನ ಜೊತೆ ಬೆಳ್ಳಿಪರದೆ ಮೇಲೆ ಪುತ್ರಿ ಸುಹಾನಾ ಖಾನ್ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಇದು ಕೇವಲ ಸುಹಾನಾ ಲಾಂಚ್ ಅಲ್ಲ… ಸ್ಟಾರ್ ಕಿಡ್ಗೆ ರಾಯಲ್ ಇಂಟ್ರೊಡಕ್ಷನ್.
ಇದಕ್ಕೆ ಮೇಲಾಗಿ ದೀಪಿಕಾ ಪಡುಕೋಣೆ ಮತ್ತೆ ಕಿಂಗ್ ಖಾನ್ ಜೋಡಿ. ಇವರ ಕಾಂಬಿನೇಷನ್ ಅಂದರೆ ಬಾಕ್ಸಾಫೀಸ್ಗೆ ಗ್ಯಾರಂಟಿ. ಓಂ ಶಾಂತಿ ಓಂನಿಂದ ಆರಂಭವಾದ ಈ ಜೋಡಿ, ಚೆನ್ನೈ ಎಕ್ಸ್ಪ್ರೆಸ್, ಹ್ಯಾಪಿ ನ್ಯೂ ಇಯರ್ ಮೂಲಕ ಹಿಟ್ ಪೆರೇಡ್ ಮಾಡಿದೆ. ಜವಾನ್ ನಲ್ಲಿ ಕ್ಯಾಮಿಯೋ ಮಾಡಿದ ಡಿಪ್ಪಿ ಈಗ ಕಿಂಗ್ ಮೂಲಕ ಕಿಂಗ್ ಖಾನ್ ಗೆ ನಾಯಕಿಯಾಗಿ ಮಿಂಚಲಿದ್ದಾರೆ.
ಬಾಲಿವುಡ್ ಮತ್ತೆ ಟ್ರ್ಯಾಕ್ಗೆ ಬರುತ್ತಿದೆ ಅನ್ನೋ ಸಿಗ್ನಲ್ ಸಿಕ್ಕಿದೆ. ಆ ಹವಾ ಮಧ್ಯೆ ಇದೆ ವರ್ಷ ಡಿಸೆಂಬರ್ 24ಕ್ಕೆ ಕಿಂಗ್ ಸಿನಿಮಾ ಬಿಡುಗಡೆ ಆಗ್ತಿದ್ದು, ವರ್ಷದ ಕೊನೆಯಲ್ಲಿ ‘ಕಿಂಗ್’ ಎಂಟ್ರಿ – ಇದು ಇಂಡಸ್ಟ್ರಿಯ ಪವರ್ ಶೋ ಆಗಬಹುದು. ಮೂರು ವರ್ಷಗಳ ಬಳಿಕ ಶಾರುಖ್ ತೆರೆಮೇಲೆ ಬರತೊದ್ದು ಫ್ಯಾನ್ಸ್ ಈಗಾಗಲೇ ಕೌಂಟ್ಡೌನ್ ಶುರು ಮಾಡಿದ್ದಾರೆ. ಈ ಬಾರಿ ಕೇವಲ ಹಿಟ್ ಅಲ್ಲ, ಇತಿಹಾಸ ಕ್ರಿಯೇಟ್ ಮಾಡಬೇಕು ಅನ್ನೋ ನಿರೀಕ್ಷೆ ಇಟ್ಟಿದ್ದಾರೆ. ಕಿಂಗ್ ಖಾನ್ ಮತ್ತೆ ಬಾಕ್ಸಾಫೀಸ್ ಸಿಂಹಾಸನಕ್ಕೆ ಏರುತ್ತಾರಾ? ಕ್ರಿಸ್ಮಸ್ ಹಬ್ಬದಲ್ಲಿ ರಾಜನ ರಾಜ್ಯಾಭಿಷೇಕ ಆಗುತ್ತದಾ? ಕಾದುನೋಡಬೇಕು.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
