ಕನ್ನಡ ಕಿರುತೆರೆಯ ಕನ್ನಡತಿ ಸೀರಿಯಲ್ ಮುಕ್ತಾಯಗೊಂಡು ವರ್ಷ ಕಳೆದರೂ, ವೀಕ್ಷಕರ ಮನದಲ್ಲಿ ಅದರ ಛಾಪು ಇನ್ನೂ ಹಸಿರಾಗಿದೆ. ಈ ಸೀರಿಯಲ್‌ನ ಪಾತ್ರಗಳು ಮತ್ತು ಕಲಾವಿದರ ಅದ್ಭುತ ನಟನೆಯ ಬಗ್ಗೆ ಇಂದಿಗೂ ಜನರು ಚರ್ಚಿಸುತ್ತಿದ್ದಾರೆ. ಅದರಲ್ಲೂ ಕನ್ನಡತಿ ಸೀರಿಯಲ್‌ನ ಸಾರಾ ಅಣ್ಣಯ್ಯ, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಗಮನ ಸೆಳೆಯುತ್ತಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಸಾರಾ, ಅಭಿಮಾನಿಗಳ ಮನಸ್ಸಿನಲ್ಲಿ ಯಾವಾಗಲೂ ಚಿರಸ್ಥಾಯಿಯಾಗಿದ್ದಾರೆ. ಅಮೃತಧಾರೆ ಸೀರಿಯಲ್‌ನಿಂದ ಕಿರುತೆರೆಗೆ ವಿದಾಯ ತಿಳಿಸಿರುವ ಈ ನಟಿ, ಈಗ ದೇಶ-ವಿದೇಶ ಸುತ್ತುವುದರಲ್ಲಿ ನಿರತರಾಗಿದ್ದಾರೆ.
ಇತ್ತೀಚೆಗೆ ಸಾರಾ ಅಣ್ಣಯ್ಯ ತಮ್ಮ ಹೊಸ ಬೋಲ್ಡ್ ಲುಕ್‌ನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಅಭಿಮಾನಿಗಳಿಗೆ ಶಾಕ್ ಆಗಿದ್ದು, ಕೆಲವರು ಸಾರಾ ಅವರ ಈ ಲುಕ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನೀವು ಸೀರೆಯಲ್ಲಿ ಕಾಣಿಸಿಕೊಂಡರೆ ಇಷ್ಟವಾಗುತ್ತದೆ, ಈ ರೀತಿಯ ಲುಕ್‌ಗೆ ನಾವು ಒಗ್ಗಿಕೊಳ್ಳಲಾರೆವು” ಎಂದು ಕೆಲ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡತಿಯಲ್ಲಿ ಸಾರಾ ಅಣ್ಣಯ್ಯ ಅವರ ಸೈಕೋ ಪಾತ್ರವು ವೀಕ್ಷಕರ ಮನಸ್ಸಿನಲ್ಲಿ ಗಾಢವಾದ ಗುರುತನ್ನು ಮೂಡಿಸಿತ್ತು. ಈ ಪಾತ್ರದ ಮೂಲಕ ಅವರು ಕಿರುತೆರೆಯಲ್ಲಿ ಸಕತ್ ಫೇಮಸ್ ಆಗಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಫೋಟೋಗಳು ಮತ್ತೊಮ್ಮೆ ಸಂಚಲನ ಸೃಷ್ಟಿಸಿವೆ.