ಕರಿಯ ಪ್ರೊಡ್ಯೂಸರ್‌ಗೆ ಕಂಟಕ.. ಸಾವು ಬದುಕಿನ ಮಧ್ಯೆ ನಟ ಸಂತೋಷ್

ರಸ್ತೆ ಅಪಘಾತದಲ್ಲಿ ತಂದೆ ನಿಧನ.. ಜಾಂಡೀಸ್‌‌ನಿಂದ ಸಂತು ICU

Untitled design 2025 08 02t192001.625

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮೈಲ್‌ಸ್ಟೋನ್ ಸಿನಿಮಾ ಕರಿಯ ನೀಡಿದಂತಹ ಪ್ರೊಡ್ಯೂಸರ್ ಆನೇಕಲ್ ಬಾಲರಾಜ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಅವರ ಮಗ, ಸ್ಯಾಂಡಲ್‌ವುಡ್ ನಟ ಸಂತೋಷ್ ಬಾಲರಾಜ್‌ ಕೂಡ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ. ಇಷ್ಟಕ್ಕೂ ಗಣಪ ಹೀರೋಗೆ ಏನಾಯ್ತು ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ನಟ ದರ್ಶನ್ ನಟನೆಯ ಹಾಗೂ ಪ್ರೇಮ್ ನಿರ್ದೇಶನದ ಕರಿಯ ಸಿನಿಮಾ ಎಷ್ಟು ಫೇಮಸ್ ಆಯ್ತೋ, ಅದ್ರ ನಿರ್ಮಾಪಕರಾದ ಆನೇಕಲ್ ಬಾಲರಾಜ್ ಕೂಡ ಅಷ್ಟೇ ಫೇಮಸ್. ಕನ್ನಡ ಚಿತ್ರರಂಗದ ಪಾಲಿಗೆ ಅನ್ನದಾತನಾಗಿದ್ದ ಬಾಲರಾಜ್, 2022ರ ಮೇ 15ರಂದು ಜೆಪಿ ನಗರದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಅವರ ಮಗ ಸಂತೋಷ್ ಬಾಲರಾಜ್ ಕೂಡ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾರೆ.

ಹೌದು.. ಕರಿಯ-2, ಗಣಪ, ಕೆಂಪ, ಬರ್ಕ್ಲಿ ಸಿನಿಮಾಗಳ ಮೂಲಕ ನಾಯಕನಟನಾಗಿ ಮಿಂಚಿದ್ದ ಆನೇಕಲ್ ಬಾಲರಾಜ್ ಮಗ ಸಂತೋಷ್, ಸ್ಯಾಂಡಲ್‌ವುಡ್‌ನ ಭರವಸೆಯ ನಟ ಅನಿಸಿಕೊಂಡಿದ್ರು. ಆದ್ರೆ ಜಾಂಡೀಸ್ ಆತನ ಬಾಳಲ್ಲಿ ಆಟ ಆಡ್ತಿದೆ. ಜಾಂಡೀಸ್‌‌ನಿಂದ ಬಳಲುತ್ತಿದ್ದ ಸಂತೋಷ್, ಎರಡು ದಿನಗಳ ಹಿಂದೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿರೋ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

34 ವರ್ಷದ ಸಂತೋಷ್ ಬಾಲರಾಜ್, ಮದುವೆ ಕೂಡ ಆಗದೆ ತಾಯಿ ಜೊತೆ ವಾಸವಾಗಿದ್ದರು. ಆದ್ರೆ ಮೈಗೆಲ್ಲಾ ಹರಡಿರೋ ಜಾಂಡೀಸ್ ಕಾಯಿಲೆ, ಆತನನ್ನ ಕೋಮಾ ಸೇರುವಂತೆ ಮಾಡಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರೋ ಸಂತೋಷ್, ಚೇತರಿಕೆಗೆ ಕುಟುಂಬ, ಆತನ ಆಪ್ತರು ಹಾಗೂ ಚಿತ್ರರಂಗದ ಮಂದಿ ಎಲ್ಲಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇನ್ನೂ ಸಾಕಷ್ಟು ಬಾಳಿ, ಬದುಕಬೇಕಿದ್ದ ನಟನ ಬಾಳಲ್ಲಿ ವಿಧಿ ಈ ರೀತಿ ಆಟ ಆಡ್ತಿರೋದು ನಿಜಕ್ಕೂ ದುರಂತ. ಆದಷ್ಟು ಬೇಗ ಸಂತೋಷ್ ಚೇತರಿಸಿಕೊಳ್ಳಲಿ. ಮತ್ತೆ ಆತ ಬೆಳ್ಳಿ ಪರದೆ ಮೇಲೆ ಮಿಂಚುವಂತಾಗಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version