ಶುರುವಾಗ್ತಿದೆ ಧರ್ಮ ರಕ್ಷಣೆಯ ಹೊಣೆ ಹೊತ್ತ ಪರಶುರಾಮನ ಅಧ್ಯಾಯ

ಇದೇ ಸೋಮವಾರದಿಂದ ರಾತ್ರಿ 9 ಗಂಟೆಗೆ ..!

Web (12)

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಇನ್ಮುಂದೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳಲು ಸಜ್ಜಾಗಿದೆ ಸ್ಟಾರ್ ಸುವರ್ಣ.

ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದೆ. ರೇಣುಕೆ ಹಾಗು ಯಲ್ಲಮ್ಮನ ಪಾತ್ರಕ್ಕೆ ಜೀವ ತುಂಬಿದವರು ಅದ್ಭುತವಾಗಿ ನಟಿಸಿ ಅಭಿಮಾನಿಗಳ ಮನಗೆದ್ದು ಮನೆಮಾತಾಗಿದ್ದರು ಆದರೆ ಇನ್ಮುಂದೆ ಈ ಕಥೆಯು “ಪರಶುರಾಮನ ಅಧ್ಯಾಯ”ವನ್ನು ಹೇಳಲು ತಯಾರಾಗಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳುತ್ತಿರುವ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.

ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತಾ ಬಂದಿರುವ ರೇಣುಕಾ-ಯಲ್ಲಮ್ಮರ ಬಾಳಿನಲ್ಲಿ 10 ವರ್ಷಗಳ ಬಳಿಕ ಏನೆಲ್ಲಾ ಆಗಲಿದೆ? ಪರಶುರಾಮನ ಜನನ, ಬಾಲ್ಯ, ವಿದ್ಯಾಭ್ಯಾಸ ಹೇಗೆಲ್ಲ ಸಾಗಲಿದೆ? ಕಾರಾಗೃಹದಿಂದ ಹೊರ ಬಂದಿರೋ ಯಲ್ಲಮ್ಮನ ಜೀವನದ ದಿಕ್ಕು ಯಾವೆಲ್ಲ ಸವಾಲಿನಿಂದ ಕೂಡಿರಲಿದೆ? ಮೊದಲಿನಂತೆ ರೇಣುಕಾ ಯಲ್ಲಮ್ಮರ ಸ್ನೇಹ ಮುಂದುವರಿಯಲಿದೆಯಾ? ಎಂಬುದೇ ಈ ಧಾರಾವಾಹಿಯ ಮುಂದಿನ ರೋಚಕ ಕಥಾಹಂದರ.

ಈಗಾಗಲೇ ಹೊಸ ಅಧ್ಯಾಯದ ಚಿತ್ರೀಕರಣ ಶುರುವಾಗಿದ್ದು, ರೇಣುಕೆಯಾಗಿ ವರ್ಷ, ಯಲ್ಲಮ್ಮನ ಪಾತ್ರದಲ್ಲಿ ಮಾನಸ ಅಭಿನಯಿಸುತ್ತಿದ್ದಾರೆ. ಅಮೋಘ ವಿನ್ಯಾಸದ ಸೆಟ್‌ ಮತ್ತು ಗ್ರಾಫಿಕ್ಸ್‌ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ವಿಷ್ಣುವಿನ ಮಹಾವತಾರ ಪರಶುರಾಮನ ಅಧ್ಯಾಯದ ಜೊತೆ, ಹೊಸ ಉತ್ಸಾಹದೊಂದಿಗೆ ಬರ್ತಿದ್ದಾರೆ ರೇಣುಕಾ-ಯಲ್ಲಮ್ಮ.”ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ-ಪರಶುರಾಮ ಅಧ್ಯಾಯ” ಇದೇ ಸೋಮವಾರದಿಂದ ರಾತ್ರಿ 9 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

Exit mobile version