ಸ್ಯಾಂಡಲ್‌ವುಡ್‌ನ ಸೆನ್ಸಿಬಲ್ & ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ನಿರ್ದೇಶನದ ಯುವ ಸಿನಿಮಾ ತೆರೆಕಂಡು ಎರಡು ವರ್ಷಗಳಾಗ್ತಿದೆ. ಅವರು ಸೈಲೆಂಟ್ ಆಗಿದ್ದಾರೆ ಅಂದ್ರೆ ಯಾವುದೋ ಒಳ್ಳೆಯ ಸಿನಿಮಾಗೆ ಕಥೆ, ಚಿತ್ರಕಥೆ ಸಿದ್ಧಗೊಳಿಸ್ತಿದ್ದಾರೆ ಅನ್ನೋದು ಪಕ್ಕಾ. ಯಶ್ ಜೊತೆ ರಾಮಾಚಾರಿ, ಅಪ್ಪು ಜೊತೆ ರಾಜಕುಮಾರ ಬಳಿಕ ಭಿನ್ನ ಅಲೆಯ ಸಿನಿಮಾಗಳನ್ನ ಮಾಡಿರೋ ಸಂತೋಷ್, ಸದ್ಯ ಬಹುದೊಡ್ಡ ಹಾಗೂ ಮಹತ್ವದ ಸಿನಿಮಾಗೆ ಕೈ ಹಾಕಿದ್ದಾರೆ.
ಗ್ಯಾರಂಟಿ ನ್ಯೂಸ್‌ನಲ್ಲಿ ಸಂತೋಷ್ ಆನಂದ್‌ರಾಮ್
ನೆಕ್ಟ್ಸ್ ವೆಂಚರ್ EXCLUSIVE ಖಬರ್
ಸ್ಯಾಂಡಲ್‌ವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ಡೈರೆಕ್ಟರ್‌ಗಳಲ್ಲಿ ಸಂತೋಷ್ ಆನಂದ್‌ರಾಮ್ ಕೂಡ ಒಬ್ರು. ಪ್ರಶಾಂತ್ ನೀಲ್, ನರ್ತನ್, ಜಡೇಶ್, ತರುಣ್ ಸುಧೀರ್ ರೀತಿ ಬರವಣಿಗೆ, ಪಾತ್ರಗಳು ಹಾಗೂ ಮೇಕಿಂಗ್‌ನಿಂದ ವ್ಹಾವ್ ಫೀಲ್ ತರಿಸೋ ಬೆಸ್ಟ್ ಡೈರೆಕ್ಟರ್. ಅವ್ರ ಚೊಚ್ಚಲ ನಿರ್ದೇಶನದ ಯಶ್ ಜೊತೆಗಿನ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಅದಾದ ಬಳಿಕ ಬಂದಂತಹ ರಾಜರತ್ನ ಪುನೀತ್ ರಾಜ್‌ಕುಮಾರ್‌ರ ರಾಜಕುಮಾರ ಸಿನಿಮಾಗಳ ಗೆಲುವೇ ಅದಕ್ಕೆ ಸಾಕ್ಷಿ.
ಯಶ್-ರಾಧಿಕಾ ಪಂಡಿತ್ ನಡುವಿನ ರಾಕಿಂಗ್ ಪ್ರೇಮ್ ಕಹಾನಿಗೆ ದೃಶ್ಯರೂಪ ನೀಡಿದಂತಹ ಸಂತೋಷ್ ಆನಂದ್‌ರಾಮ್, ರಿಯಲ್ ಕಥೆಗಳನ್ನ ಮಾಡೋದ್ರಲ್ಲಿ ಪಂಟರ್ ಅನಿಸಿದ್ರು. ರಾಜಕುಮಾರ ಸಿನಿಮಾದ ಮೂಲಕ ಎಮೋಷನ್ಸ್‌ನ ಬ್ಲೆಂಡ್ ಮಾಡಿ, ಭಾವನಾತ್ಮಕ ಕಥೆ ಕಟ್ಟೋದ್ರಲ್ಲಿ ಮಾಸ್ಟರ್ ಅನಿಸಿಕೊಂಡ್ರು. ಅದರಲ್ಲೂ ಬೊಂಬೆ ಹೇಳುತೈತೆ ಸಾಂಗ್ ಅಂತೂ ಅಪ್ಪು ಆ್ಯಂಥೆಮ್ ಆಗಿದ್ದು ಇತಿಹಾಸ. ಇಂದಿಗೂ ಅದು ಎವರ್‌ಗ್ರೀನ್ ಹಾಡುಗಳಲ್ಲೊಂದು. ಅದಕ್ಕೆ ಸಾಹಿತ್ಯ ಒದಗಿಸಿ, ಆ ಅದ್ಭುತ ಪದಪುಂಜ ಪೋಣಿಸಿದ್ದು ಕೂಡ ಇದೇ ಸಂತೋಷ್ ಆನಂದ್‌ರಾಮ್.
ನಂತ್ರ ಅಪ್ಪು ಜೊತೆ ಯುವರತ್ನ ಸಿನಿಮಾ ಮಾಡಿ, ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದರು. ನವರಸ ನಾಯಕ ಜಗ್ಗೇಶ್ ಜೊತೆಗೂಡಿ ರಾಘವೇಂದ್ರ ಸ್ಟೋರ್ಸ್ ಅನ್ನೋ ಹಾಸ್ಯ ಪ್ರಧಾನ ಸಿನಿಮಾ ಕೂಡ ಮಾಡಬಲ್ಲೆ ಅನ್ನೋದನ್ನ ತೋರಿಸಿದ್ರು. ದೊಡ್ಮನೆಯ ಮೂರನೇ ತಲೆಮಾರಿನ ಮತ್ತೊಬ್ಬ ಹೀರೋ ಯುವರಾಜ್‌ಕುಮಾರ್‌ನ ಯುವ ಚಿತ್ರದಿಂದಲೇ ಇಂಟ್ರಡ್ಯೂಸ್ ಕೂಡ ಮಾಡಿದ್ರು ಸಂತೋಷ್.
ಆದ್ರೀಗ ಸಂತೋಷ್ ಆನಂದ್‌ರಾಮ್ ಡೈರೆಕ್ಷನ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳಿ ಬರೋಬ್ಬರಿ 2 ವರ್ಷಗಳಾಗ್ತಿದೆ. ಇಷ್ಟು ದಿನ ಗ್ಯಾಪ್ ತಗೊಂಡಿದ್ದಾರೆ ಅಂದ್ರೆ ಯಾವುದೋ ಒಳ್ಳೆಯ ಸ್ಕ್ರಿಪ್ಟ್‌ಗೆ ಕೈ ಹಾಕಿದ್ದಾರೆ ಅನ್ನೋದು ಓಪನ್ ಸೀಕ್ರೆಟ್. ಸದಾ ಸಿನಿಮಾಗಾಗಿಯೇ ತುಡಿಯುವಂತಹ ಸಂತೋಷ್ ಮನ, ಮುಂದಿನ ಸಿನಿಮಾಗಾಗಿ ಸಿಕ್ಕಾಪಟ್ಟೆ ವರ್ಕ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಮೆಗಾ ಕಾಂಬೋನಲ್ಲಿ ಸಿನಿಮಾ ಮಾಡೋಕೆ ಯೋಜನೆ ರೂಪಿಸಿದ್ದಾರೆ. ಅವ್ರ ನೆಕ್ಸ್ಟ್ ವೆಂಚರ್ ಯಾವ ಸ್ಟಾರ್ ಜೊತೆ..? ಯಾವ ಪ್ರೊಡಕ್ಷನ್ ಬ್ಯಾನರ್ ಜೊತೆ ..?
ತಮಿಳಿನ ಶಿವಕಾರ್ತಿಕೇಯನ್‌ಗೆ ಸಂತು ಆ್ಯಕ್ಷನ್ ಕಟ್..!
ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೆಗಾ ಕಾಂಬೋ
ತಮಿಳಿನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಶಿವಕಾರ್ತಿಕೇಯನ್‌ಗೆ ಈ ಬಾರಿ ಆಕ್ಷನ್ ಕಟ್ ಹೇಳಲಿದ್ದಾರೆ ಸಂತೋಷ್. ಈಗಾಗ್ಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದ್ದು, ಸಂತೋಷ್ ಹೇಳಿರೋ ಕಥೆಯ ಲೈನ್ ಶಿವಕಾರ್ತಿಕೇಯನ್‌ರನ್ನ ಬಹಳ ಕಾಡಿದೆಯಂತೆ. ಕೂಡಲೇ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಒನ್ಸ್ ಅಗೈನ್ ಸಂತೋಷ್ ಜೊತೆ ಕೈ ಜೋಡಿಸ್ತಿರೋದು ಕನ್ನಡದ ಪ್ರತಿಷ್ಠಿತ ಹಾಗೂ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಹಾಗೂ ವಿಜಯ್ ಕಿರಗಂದೂರು-ಚೆಲುವೆ ಗೌಡರು.
ಸದಾ ತನ್ನನ್ನ ತಾನು ಭಿನ್ನ ವಿಭಿನ್ನ ಪಾತ್ರಗಳಿಗೆ ಒಗ್ಗಿಸಿಕೊಳ್ಳುವ, ಪ್ರಯೋಗಾತ್ಮಕ ಸಿನಿಮಾಗಳನ್ನ ಮಾಡ್ತಾ ಬರ್ತಿರೋ ಶಿವಕಾರ್ತಿಕೇಯನ್, ಸಾಮಾನ್ಯ ಆ್ಯಂಕರ್‌ನಿಂದ ಸ್ಟಾರ್ ಪಟ್ಟದ ವರೆಗೆ ಬೆಳೆದ ಪರಿಯೇ ಇಂಟರೆಸ್ಟಿಂಗ್. ಇತ್ತೀಚೆಗಿನ ಅವ್ರ ಅಮರನ್, ಮದರಾಸಿ, ಪರಾಶಕ್ತಿ ಸಿನಿಮಾಗಳ ಜಾನರ್‌ಗಳನ್ನ ನೋಡಿದ್ರೆ ಗೊತ್ತಾಗುತ್ತೆ ಎಂತಹ ಅತ್ಯದ್ಭುತ ಕಲಾವಿದ ಶಿವಕಾರ್ತಿಕೇಯನ್ ಅನ್ನೋದು. ಸದ್ಯ ಸಿನಿಮಾ ಯಾವ ಜಾನರ್, ಬೇರೆ ಯಾರೆಲ್ಲಾ ಇರಲಿದ್ದಾರೆ ಅನ್ನೋದ್ರ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.
ಮೂಲತಹ ಬರಹಗಾರನಾಗಿದ್ದ ಸಂತೋಷ್ ಆನಂದ್‌ರಾಮ್ ಅವ್ರ ಸ್ಟ್ರೆಂಥ್ ಬರವಣಿಗೆ. ಹಾಗಾಗಿಯೇ ಅವರಿಗೆ ಸಿನಿಮಾ ಕಥೆ, ಚಿತ್ರಕಥೆ, ಡೈಲಾಗ್ಸ್ ಮೇಲೆ ಒಳ್ಳೆಯ ಹಿಡಿತವಿದೆ. ಮಿಗಿಲಾಗಿ ಕನ್ನಡ ನೆಲ, ಜಲ, ಭಾಷೆ ಬಗ್ಗೆ ಅತೀವ ಅಭಿಮಾನ, ಗೌರವ. ಹೊಂಬಾಳೆ ಫಿಲಂಸ್ ಸಂತೋಷ್‌ರ ಬಹುತೇಕ ಚಿತ್ರಗಳಿಗೆ ಬಂಡವಾಳ ಹೂಡಿತ್ತು. ಅವ್ರ ಕನಸುಗಳನ್ನ ನನಸು ಮಾಡಿತ್ತು. ಸದ್ಯ ಕಲಾವಿದ ಹಾಗೂ ತಂತ್ರಜ್ಞರಿಗೆ ಭಾಷೆಯ ಗಡಿ ಇಲ್ಲ. ಹಾಗಾಗಿ ಶಿವಕಾರ್ತಿಕೇಯನ್ ಜೊತೆ ಸಂತೋಷ್ ಒಂದೊಳ್ಳೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಂತೂ ಕಾತರಿ ಆಗಿದೆ. ಪ್ರಶಾಂತ್ ನೀಲ್ ಇಲ್ಲಿ ಕೆಜಿಎಫ್ ಮಾಡಿ, ಪಕ್ಕದ ಟಾಲಿವುಡ್‌ಗೆ ಸಲಾರ್‌ಗೆ ಶಿಫ್ಟ್ ಆದ್ರು. ಸದ್ಯ ಆನಂದ್‌ರಾಮ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದು, ಕನ್ನಡಿಗರ ಗತ್ತು ಭಾರತೀಯ ಚಿತ್ರರಂಗಕ್ಕೆ ಗೊತ್ತು ಮಾಡ್ತಿರೋದು ಖುಷಿ ಹಾಗೂ ಹೆಮ್ಮೆಯ ವಿಷಯ.
