ಸಂಗೀತಾ ಭಟ್ ಭರ್ಜರಿ ಕಂಬ್ಯಾಕ್.. ರಮ್ಯಾ, ದಚ್ಚು ಬಗ್ಗೆ ಟಾಕ್

ಕರ್ನಾಟಕಕ್ಕೆ ದುಬೈ ಕಾನೂನು ಬರಬೇಕು.. ಅಲ್ಲಿ ಹೆಣ್ಣು ಸೇಫ್..!

Untitled design 2025 08 02t201636.645

ಎರಡನೇ ಸಲ ಖ್ಯಾತಿಯ ನಟಿ ಸಂಗೀತಾ ಭಟ್, ವೈಯಕ್ತಿಕ ಕಾರಣಗಳಿಗೆ ನಟನೆಯಿಂದ ಒಂದು ಬ್ರೇಕ್ ಪಡೆದಿದ್ರು. ಆದ್ರೀಗ ಕಮಲ್ ಶ್ರೀದೇವಿ ಮೂಲಕ ಭರ್ಜರಿ ಕಂಬ್ಯಾಕ್ ಮಾಡ್ತಿದ್ದು, ಇತ್ತೀಚೆಗೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ಆಗ್ತಿರೋ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ಹಾಗೂ ದರ್ಶನ್ ಬಗ್ಗೆ ಸಂಗೀತಾ ಹೇಳಿದ್ದೇನು..? ಇಲ್ಲಿದೆ ನೋಡಿ.

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ನಡುವಿನ ಗಲಾಟೆ ತಾರಕಕ್ಕೇರಿದ್ದು, ಈ ಬಗ್ಗೆ ಚಿತ್ರರಂಗದ ಬಹುತೇಕ ಮಂದಿ ಬಹಿರಂಗವಾಗಿ ಮಾತನಾಡ್ತಿದ್ದಾರೆ. ಇದು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡೋ ಪ್ರತಿಯೊಬ್ಬರ ವಿರುದ್ಧದ ದನಿ ಕೂಡ ಆಗಿದೆ. ಸಣ್ಣದೊಂದು ಬ್ರೇಕ್‌ನ ಬಳಿಕ ಭರ್ಕರಿ ಕಂಬ್ಯಾಕ್ ಮಾಡ್ತಿರೋ ಸಂಗೀತಾ ಭಟ್, ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್‌ಗೆ ಕಡಿವಾಣ ಬೀಳಬೇಕು. ದುಬೈನಲ್ಲಿ ಹೆಣ್ಣು ಮಕ್ಕಳು ಸೇಫ್. ಅಲ್ಲಿರೋ ದುಬೈ ಕಾನೂನು ಕರ್ನಾಟಕದಲ್ಲೂ ಬರಬೇಕು ಎಂದಿದ್ದಾರೆ.

ರಮ್ಯಾ ಅನುಭವಿಸುತ್ತಿರೋ ಅಶ್ಲೀಲ ಕಮೆಂಟ್ಸ್‌‌ನ ನಾನು ಕೂಡ ಫೇಸ್ ಮಾಡಿದ್ದೀನಿ. ದೊಡ್ಡ ಸ್ಟಾರ್‌ಗಳು ತಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಬೇಕು. ಚಿತ್ರರಂಗದಲ್ಲಿ ದೊದ್ದೋರು ಬುದ್ದಿ ಹೇಳಿದಾಗ ಚಿಕ್ಕವರು ತಿದ್ದಿಕೊಳ್ತಾರೆ. ಸೆಲೆಬ್ರಿಟೀಸ್‌ಗೆ ಸೇಫ್ ಇಲ್ಲ. ಅದ್ರಲ್ಲೂ ಹೀರೋಯಿನ್ಸ್‌‌ ಥಿಯೆಟರ್ ವಿಸಿಟ್ ವೇಳೆ ಬೇಕು ಅಂತ ಮೈ ಮುಟ್ಟಿತ್ತಾರೆ. ಸೆಲ್ಫಿ ನೆಪದಲ್ಲಿ ಟಚ್ ಮಾಡ್ತಾರೆ. ಆ ರೀತಿಯ ಕೆಟ್ಟ ಅನುಭವ ನನಗೂ ಆಗಿದೆ ಅಂತ ಅಹಿತಕರ ಘಟನೆಗಳನ್ನ ನೆನೆದರು.

ಇನ್ನು ಇತ್ತೀಚೆಗೆ ಗೃಹ ಪ್ರವೇಶ ಮಾಡಿ, ಹೊಸ ಮನೆಗೆ ಕಾಲಿಟ್ಟಿರೋ ಕಿರುತೆರೆಯ ಸ್ಟಾರ್ ನಟ ಸುದರ್ಶನ್ ಹಾಗೂ ಸಂಗೀತಾ ಭಟ್, ಸಿನಿಮಾ ಸೀರಿಯಲ್ ಮಾಡೋದೇ ನಮಗೆ ಮಕ್ಕಳು ಅಂತ ಖುಷಿಯ ಕ್ಷಣಗಳನ್ನು ಹಂಚಿಕೊಂಡರು.

ಕಮಲ್ ಶ್ರೀದೇವಿ ಚಿತ್ರದಿಂದ ಮತ್ತೆ ಕನ್ನಡ ಚಿತ್ರರಂಗದಲ್ಲಿ ಮಿಂಚಲು ಬರ್ತಿರೋ ಸಂಗೀತಾಗೆ ಶುಭವಾಗಲಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version