ನಿರ್ದೇಶಕ ನರಸಿಂಹರಾಜು ಮೇಲೆ ಮಸಿ ಬಳಿದು ಹಲ್ಲೆ: FIR ದಾಖಲು

Untitled design 2025 03 08t123059.507

ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ನರಸಿಂಹರಾಜು ಮೇಲೆ ಮಸಿ ಬಳಿದು ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಬೆಂಗಳೂರಿನ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫಿಲ್ಡ್ ಚೇಂಬರ್ ಬಳಿ ಕೆಲವರು ನರಸಿಂಹರಾಜು ಅವರ ಮುಖಕ್ಕೆ ಮಸಿ ಬಳಿದು, ಅವರ ಶರ್ಟ್ ಹಿಡಿದು ಎಳೆದಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದು ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಹಲ್ಲೆಗೆ ಸಂಬಂಧಿಸಿದಂತೆ ಸಾರಾ ಗೋವಿಂದು ಬೆಂಬಲಿಗರ ವಿರುದ್ಧ ಆರೋಪ ಕೇಳಿಬಂದಿದ್ದು, ನರಸಿಂಹರಾಜು ಅವರು ಹೈಗೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

Exit mobile version