ರಮ್ಯಾ VS ಡಿ ಫ್ಯಾನ್ಸ್ ಯೋಗಿ, ರಾಕ್ ಲೈನ್, ಧ್ರುವ ರಿಯಾಕ್ಷನ್..!

ರಮ್ಯಾಗೆ ಬೆಂಬಲ ದರ್ಶನ್ ಗೆ ಟಾಂಗ್ ಕೊಟ್ರಾ ರಾಕ್ ಲೈನ್..?

Web 2025 07 31t192205.324

ಕನ್ನಡ ಸಿನಿಮಾ ಇಂಡಸ್ಟ್ರಿ ಒಟೆದ ಮನೆಯಾಗಿದೆ ಅನ್ನೋದು ಈಗ ಮತ್ತೆ ಪ್ರೂವ್ ಆಗಿದೆ. ರಮ್ಯಾ ಮಾತಿಗೆ ಹಲವರು ಸಾಥ್ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾ ಜಟಾಪಟಿ ಎಲ್ಲಿಗೆ ಬಂತು.

ನಟಿ ರಮ್ಯಾ ಹಾಗು ಡಿ ಫ್ಯಾನ್ಸ್ ನಡುವಿನ ಸೋಶಿಯಲ್‌‌ ಮೀಡಿಯಾ ಜಟಾಪಟಿ ಈಗ ಜಗಜ್ಜಾಹಿರಾಗಿದೆ. ಅಶ್ಲೀಲ‌‌ ಮೆಸೇಜ್ ಮಾಡಿರೋ ಯಾರೇ ಇದ್ರೂ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಅಂತ ಸ್ಯಾಂಡಲ್ ವುಡ್ ನ ಹಲವು ಗಣ್ಯರು ಪಟ್ಟು ಹಿಡಿದಿದ್ದಾರೆ. ಸದ್ಯ ಲೂಸ್ ಮಾದ ಯೋಗಿ ಕೂಡ ಮಾತನಾಡಿ. ರಮ್ಯಾ ಅವರಿಗೆ ಮೆಸೇಜ್ ಮಾಡಿದವರಿಗೆ ಎಚ್ಚರಿಕೆ ಕೊಡಬೇಕು ಅಂತವರಿಗೆ ಚಪ್ಲಿಯಲ್ಲಿ ಹೊಡೀಬೇಕು ಅಂತ ಹೇಳಿದ್ದು ಮಾತ್ರವಲ್ಲ. ಥಿಯೇಟರ್ ನಲ್ಲಿ ತಮ್ಮ ಕೈಗೂ ಬ್ಲೇಡ್ ಹಾಕಿದ್ ಘಟನೆ ಕೂಡ ನಡೆದಿತ್ತು ಅಂತ ಹೇಳಿದ್ದಾರೆ.

ಅಂದ‌ಹಾಗೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲವೂ ಸರಿ ಇಲ್ಲ. ಇಂದು ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಗೆ ಮಾಜಿ ಫಿಲಂ ಚೇಂಬರ್ ಅಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಅವರಿಗೆ ಮನವಿ ಮಾಡಿದ್ರು. ಕಲಾವಿದರನ್ನ ಕರೆದು ಮಾತನಾಡಬೇಕು ಅಂತ ಹೇಳಿದ್ರು. ಇದೆ ವೇಳೆ ರಾಕ್ ಲೈನ್ ವೆಂಕಟೇಶ್ ಮಾತನಾಡಿ.ಯಾರೇ ಸ್ಟಾರ್ ಆಗ್ಲಿ ಅವರು ತಮ್ಮ ಅಭಿಮಾನಿಗಳಿಗೆ ಮನವರಿಕೆ‌ಮಾಡಬೇಕು. ಎಚ್ಚರಿಕೆ ಕೊಡಬೇಕು ಅಂತ ಹೇಳಿದ್ರು.

ಸದ್ಯ ಸ್ಟಾರ್ ನಟರ ವರ್ತನೆಗೆ ರಾಕ್ ಲೈನ್ ವೆಂಕಟೇಶ್ ಕೂಡ ಬೇಸರ ವ್ಯಕ್ತಪಡಿಸಿದ್ರು. ಸಿನಿಮಾಡೋಕೆ ಭಯ ಆಗ್ತಿದೆ. ಸ್ಟಾರ್ ಗಳು ಒಬ್ಬರನ್ನೊಬ್ಬರು ಕಾಲೆಳೆಯೋ ಕೆಲಸಕ್ಕೆ ರೆಡಿಯಾಗ್ತಿದ್ದಾರೆ. ಅತ್ಯಂತ ಕೆಟ್ಟ ಬೆಳವಣಿಗೆ ಆಗ್ತಿದೆ ಅಂತ ಕನ್ನಡ ಸಿನಿಮಾ‌‌ ಇಂಡಸ್ಡ್ರಿ ಒಡೆದ ಮನೆಯಾಗಿದೆ ಅನದನೋದನ್ನ ಒಪ್ಪಿಕೊಂಡ್ರು. ಪರೋಕ್ಷವಾಗಿ ದರ್ಶನ್ ಅವರ ಫ್ಯಾನ್ಸ್ ಮಾಡಿರೋ ಕೆಲಸಕ್ಕೂ ಬೇಸರ ವ್ಯಕ್ತಪಡಿಸಿದ್ರು.

ಇನ್ನು ರಮ್ಯಾ ಹಾಗು ದರ್ಶನ್ ಫ್ಯಾನ್ಸ್ ವಾರ್ ಬಗ್ಗೆ ರಿಯಾಕ್ಟ್ ಮಾಡಿದ ಧ್ರುವ ಸರ್ಜಾ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ಪ್ರಥಮ್ ಮಾತನಾಡೋದನ್ನ ಕಲಿಬೇಕು. ರಮ್ಯಾ ನಡೆ ಸರಿ ಇದೆ ಎಂದಿದ್ದಾರೆ. ದರ್ಶನ್ ಧ್ರುವ ನಡುವೆ ಏನೇ ಮನಸ್ತಾಪ ಇದ್ರೂ ಸದ್ಯ ದರ್ಶನ್ ಪರ ಧ್ರುವ ನಿಂತಿರೋದು ಇಬ್ಬರ ಫ್ಯಾನ್ಸ್ ಗೂ ಖುಷಿ ತಂದಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಗಳು ಕೆಲವೊಮ್ಮೆ ಸಿನಿಮಾ ಮಾಡಿ ಸುದ್ದಿ ಆಗೋದಕ್ಕಿಂತ. ಕೆಲವು ಘಟನೆಗಳಿಂದ ಸದ್ದು ಮಾಡ್ತಿದ್ದಾರೆ. ಹಾಗಾದ್ರೆ ಮುಂದೆ ಏನಾಗುತ್ತೆ ಸಿನಿಮಾ‌ ಇಂಡಸ್ಡ್ರಿ ಪರಿಸ್ಥಿತಿ ಅನ್ಮೋದನ್ನ ಕಾದು ನೋಡಬೆಕಿದೆ.

Exit mobile version