ಸದಾ ಸಿನಿಮಾ ಶೂಟಿಂಗ್, ಡಬ್ಬಿಂಗ್ ಅಂತ ಬ್ಯುಸಿ ಇರೋ ಗ್ಲಾಮರ್ ಡಾಲ್ಸ್, ಆಗಾಗ ವಿದೇಶಗಳಿಗೆ ಹಾರುತ್ತಾರೆ. ಅಲ್ಲಿ, ತಮಗಿಷ್ಟ ಬಂದಂತೆ ಬಟ್ಟೆ ಧರಿಸಿ, ಸಖತ್ ಎಂಜಾಯ್ ಕೂಡ ಮಾಡ್ತಾರೆ. ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತೆ ಬಿಕಿನಿ ತೊಟ್ಟು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸ್ತಾರೆ. ಶ್ರದ್ಧಾ ಹಾಗೂ ಶಾನ್ವಿಯ ಹಾಟ್ ಝಲಕ್ ನಿಮ್ಮ ಮುಂದೆ.
- ಮೊನ್ನೆ ಶ್ರದ್ಧಾ.. ಇಂದು ಶಾನ್ವಿ.. ಸಖತ್ ಹಾಟ್ ಮಗಾ..!
- ಸ್ಯಾಂಡಲ್‌ವುಡ್ ಗ್ಲಾಮರ್ ಡಾಲ್ಸ್‌ನಿಂದ ಬಿಕಿನಿ ದರ್ಶನ
- ಶೂಟಿಂಗ್ಗೆ ಬಿಗ್ ಬ್ರೇಕ್.. ಐಲ್ಯಾಂಡ್ನಲ್ಲಿ ಜಾಲಿ ಜಾಲಿ
- ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿಯರು ಮಾಡಿದ್ದೇನು ?
ಕಲಾವಿದರು ಸದಾ ಶೂಟಿಂಗ್, ಡಬ್ಬಿಂಗ್, ಫಿಲ್ಮ್ ಪ್ರಮೋಷನ್ಸ್ ಅಂತ ಬ್ಯುಸಿ ಇರ್ತಾರೆ. ಆದ್ರೆ ಕೊಂಚ ಗ್ಯಾಪ್ ಸಿಕ್ರೆ ಸಾಕು, ಈ ಬ್ಯುಸಿ ಲೈಫ್‌ನಿಂದ ದೂರ ಹೋಗೋಣ ಅಂತ ಗಂಟು ಮೂಟೆ ಕಟ್ಟಿಕೊಂಡು ಫ್ಲೈಟ್ ಹತ್ತಿ ದೂರ ಹೋಗಿಬಿಡ್ತಾರೆ. ಅದ್ರಲ್ಲೂ ಜನಸಂಖ್ಯೆ ಕಡಿಮೆ ಇರೋ ಅಂತಹ, ಪ್ರೈವಸಿ ಇರೋ ಅಂತಹ ಐಲ್ಯಾಂಡ್‌ಗಳಿಗೆ ಹೋಗೋದು ಸರ್ವೇ ಸಾಮಾನ್ಯ. ನಟಿಮಣಿಯರಾದ್ರೆ ಅಂತೂ ಅವ್ರ ಮೊದಲ ಆಯ್ಕೆ ಐಲ್ಯಾಂಡ್ಸ್ ಆಗಿರುತ್ತೆ.
ಬಿಕಿನಿ ತೊಟ್ಟು, ಇಷ್ಟ ಬಂದಿದ್ದು ಉಂಡು, ಕುಡಿದು ಕುಪ್ಪಳಿಸೋಕೆ ಪ್ರೈವಸಿ ನಿರೀಕ್ಷಿಸ್ತಾರೆ. ಸದ್ಯ ಹಾಗೆ ಶೂಟಿಂಗ್ ನಡುವೆ ಬ್ರೇಕ್ ಪಡೆದು, ಮಸ್ತ್ ಮಜಾ ಮಾಡೋಕೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿಯರಲ್ಲಿ ಶ್ರದ್ಧಾ ಶ್ರೀನಾಥ್ ಹಾಗೂ ಶಾನ್ವಿ ಶ್ರೀವಾಸ್ತವ್ ಫುಲ್ ಮಿಂಚುತ್ತಿದ್ದಾರೆ. ಅಬ್ಬಬ್ಬಾ.. ಮಳೆಗಾಲ ಶುರುವಾಗಿ ಚಳಿ ಆವರಿಸಿದ್ರೂ ಹೀಟ್ ಹೆಚ್ಚಾಗುವಂತಹ ಫೋಟೋಸ್ ಹಾಗೂ ವಿಡಿಯೋಸ್ ತಮ್ಮ ಪೇಜ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಯೆಸ್.. ರಾಕಿಂಗ್ ಸ್ಟಾರ್ ಯಶ್ ಜೊತೆ ಕಮಾಲ್ ಮಾಡಿದ್ದ ಮಾಸ್ಟರ್‌ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ್, ಇತ್ತೀಚೆಗೆ ಕೋಪಾಂಗನ್ ಐಲ್ಯಾಂಡ್ ನಲ್ಲಿ ಮೋಜು, ಮಸ್ತಿ ಮಾಡಿದ್ದಾರೆ. ಗಲ್ಫ್‌ನ ಥಾಯ್ಲೆಂಡ್‌ನಲ್ಲಿರೋ ಈ ದ್ವೀಪ ಸಖತ್ ಬ್ಯೂಟಿಫುಲ್ ಆಗಿದೆ. ಆಕೆಯ ಚೆಲುವು ಅದಕ್ಕಿಂತ ಕಲರ್‌ಫುಲ್ ಆಗಿದ್ದು, ನೋಡುಗರ ಕಣ್ಮನ ತಣಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದ ಶಾನ್ವಿ, ಬಿಕಿನಿ ದರ್ಶನ ನೀಡಿದ್ರು.
ಅಂದಹಾಗೆ ಶ್ರದ್ಧಾ ಶ್ರೀನಾಥ್ ಕೂಡ ಕಳೆದ ಮೇ ತಿಂಗಳಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ರು. ಕನ್ನಡದ ಜೊತೆ ತಮಿಳು, ಮಲಯಾಳಂ ಹಾಗೂ ಬಾಲಿವುಡ್‌ನಲ್ಲೂ ಬ್ಯುಸಿ ಇರೋ ಈ ಪ್ಯಾನ್ ಇಂಡಿಯಾ ಬ್ಯೂಟಿ, ಬಿಕಿನಿಯಲ್ಲಿ ತನ್ನ ಪರ್ಸನಲ್ ಲೈಫ್‌ನ ಕಳೆದಿರೋ ಕ್ಷಣಗಳನ್ನ ಫೋಟೋ ಹಾಗೂ ವಿಡಿಯೋಗಳ ಮೂಲಕ ಸೆರೆ ಹಿಡಿದಿದ್ದಾರೆ. ಅದನ್ನ ತಮ್ಮದೇ ಇನ್ಸ್‌ಟಾ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಪಡ್ಡೆ ಹುಡುಗರು ದಿಲ್‌ಖುಷ್ ಆಗಿದ್ದಾರೆ.
ಬಾಲಯ್ಯ ಜೊತೆಗಿನ ಢಾಕು ಮಹಾರಾಜ್ ಸಿನಿಮಾದ ಬಳಿಕ ಕಲಿಯುಗಂ ಹಾಗೂ ಆರ್ಯನ್ ಅನ್ನೋ ಎರಡು ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ ಶ್ರದ್ಧಾ. ಯುಟರ್ನ್ ಚೆಲುವೆ ಕನ್ನಡಕ್ಕೆ ಯುಟರ್ನ್ ಹೊಡೆಯದೆ ಹೀಗೆ ಪರಭಾಷೆಗಳಲ್ಲಿ ಮಿಂಚ್ತಿರೋದು ಇಂಟರೆಸ್ಟಿಂಗ್. ಆಗಾಗ ಹೀಗೆ ಹುಡುಗರ ಕಣ್ಣು ತಂಪು ಮಾಡ್ತಿರೋ ಶ್ರದ್ಧಾ ಮತ್ತೆ ಯಾವಾಗ ಕನ್ನಡಕ್ಕೆ ವಾಪಸ್ ಆಗ್ತಾರೋ ಗೊತ್ತಿಲ್ಲ. ಆದ್ರೆ ಈ ತರಹ ಬೋಲ್ಡ್ ಬ್ಯೂಟಿಯನ್ನ ತೋರುವ ಧೈರ್ಯ ಮಾಡಿರೋ ಕನ್ನಡ ನಟಿಯರ ಧೈರ್ಯ ಮೆಚ್ಚಲೇಬೇಕು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
