155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್

Untitled design (21)

ಕೆಜಿಎಫ್, ಸಲಾರ್ ನಂತ್ರ ಮತ್ತೊಮ್ಮೆ ಬಾಕ್ಸ್ ಆಫೀಸ್ ಧೂಳೆಬ್ಬಿಸೋಕೆ ಬರ್ತಿದ್ದಾರೆ ಮಾನ್‌ಸ್ಟರ್ ಪ್ರಶಾಂತ್ ನೀಲ್. ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್‌ಟಿಆರ್ ಡ್ರ್ಯಾಗನ್ ಲೋಕ ಊಹೆಗೆ ನಿಲುಕದಂತಿದೆ. ಇವರಿಬ್ಬರ ಕಾಂಬೋದಲ್ಲಿ ಬರ್ತಿರೋ ಡ್ರ್ಯಾಗನ್ ಈಗ ರಿಲೀಸ್‌ಗೂ ಮೊದಲೇ ಮಾಡಿರೋ ರೆಕಾರ್ಡ್ ಬ್ಯುಸಿನೆಸ್ ಕೇಳಿದ್ರೆ ಶಾಕ್ ಆಗ್ತೀರಾ.

ಇಂಡಿಯನ್ ಸಿನಿಮಾ ರಂಗದಲ್ಲಿ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ ಡ್ರ್ಯಾಗನ್ ಅಂದ ತಕ್ಷಣವೇ ಹೈಪ್ ನೆಕ್ಸ್ಟ್ ಲೆವೆಲ್‌ಗೆ ತಲುಪಿತ್ತು. RRR ಹಾಗೂ ದೇವರ ಹಿಟ್ ಸಿನಿಮಾಗಳ ನಂತರ ಜೂನಿಯರ್ ಎನ್‌ಟಿಆರ್ ಕ್ರೇಜ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸ್ತಿದ್ರೆ, ಉಗ್ರಂನಿಂದ ಸಲಾರ್‌ವರೆಗೂ ಮಾಸ್ ಆಕ್ಷನ್ ಅವತಾರವನ್ನೇ ಉಣಬಡಿಸಿರೋ ಪ್ರಶಾಂತ್ ನೀಲ್ ಕಡೆಯಿಂದ ಮತ್ತೊಂದು ಭರ್ಜರಿ ಆಕ್ಷನ್ ಸ್ಪೆಕ್ಟಾಕಲ್ ಬರ್ತಿದೆ ಅಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ ಈಗ ಹೊರಬಿದ್ದಿರೋ ಸುದ್ದಿ ಮಾತ್ರ ಪಕ್ಕಾ ಮಾಸ್. ಈ ಸಿನಿಮಾ ಥಿಯೇಟರ್‌ಗೆ ಬರೋಕು ಮುನ್ನವೇ OTT ಮಾರುಕಟ್ಟೆಯಲ್ಲಿ ಇತಿಹಾಸ ಬರೆಯೋಕೆ ಹೊರಟಿದೆ.

ಸಾಮಾನ್ಯವಾಗಿ ಸಿನಿಮಾಗಳು ರಿಲೀಸ್ ಆದ್ಮೇಲೆ ಬಿಜಿನೆಸ್ ಲೆಕ್ಕಾಚಾರ ಶುರುವಾಗುತ್ತೆ, ಆದ್ರೆ ಇಲ್ಲಾಗುತ್ತಿರೋದು ಉಲ್ಟಾ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಸುಮಾರು 300 ರಿಂದ 500 ಕೋಟಿ ರೂ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರೋ ಈ ಬಿಗ್ ಬಜೆಟ್ ಆಕ್ಷನ್ ಸಿನಿಮಾ, ರಿಲೀಸ್ ಆಡಳಿತಕ್ಕೆ ಮುಂಚೆಯೇ ಅರ್ಧ ಬಜೆಟ್ ವಾಪಸ್ ತಂದಿದೆ. ಹೌದು, ಪ್ರಸಿದ್ಧ ಡಿಜಿಟಲ್ ಪ್ಲಾಟ್‌ಫಾರ್ಮ್ Netflix ಡ್ರ್ಯಾಗನ್ ಚಿತ್ರದ ಪೋಸ್ಟ್-ಥಿಯೇಟ್ರಿಕಲ್ ಡಿಜಿಟಲ್ ಹಕ್ಕುಗಳನ್ನು ಬರೋಬಾರಿ ₹155 ಕೋಟಿಗೆ ಖರೀದಿ ಮಾಡಿದೆ ಅನ್ನೋ ಸುದ್ದಿ  ಫಿಲ್ಮ್ ನಗರ್‌ದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ತೆಲುಗು ಚಿತ್ರರಂಗದಲ್ಲೇ ಇದು ಅತ್ಯಂತ ದೊಡ್ಡ OTT ಡೀಲ್‌ಗಳಲ್ಲಿ ಒಂದಾಗಿದೆ

ಎನ್‌ಟಿಆರ್ ಗೆ ಆದ ಸಣ್ಣ ಗಾಯದ ಕಾರಣದಿಂದ ಸುಮಾರು ಎರಡು ತಿಂಗಳ ಕಾಲ ಕಡ್ಡಾಯ ವಿಶ್ರಾಂತಿ ಪಡೆಯಬೇಕಾಗಿ ಬಂದಿದೆ. ಸದ್ಯ 2027 ಜೂನ್ ನಲ್ಲಿ ಡ್ರ್ಯಾಗನ್ ದರ್ಶನ ಆಗಲಿದೆ ಎಂದು ವರದಿಯಾಗಿದೆ. ಕಾಂತಾರ ಬೆಡಗಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರೋ ಈ ಸಿನಿಮಾ ಮುಂದೆ ಯಾವ್ಯಾವ ಸ್ಯಾಟಲೈಟ್ ಹಾಗೂ ಥಿಯೇಟ್ರಿಕಲ್ ರೆಕಾರ್ಡ್ ಬ್ರೇಕ್ ಮಾಡುತ್ತೋ ಅಂತ ಇಡೀ ಸೌತ್ ಇಂಡಿಯಾ ಕಣ್ಣಿಟ್ಟು ಕಾಯ್ತಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version