ಕಿಚ್ಚ-ದಚ್ಚು..ಉಪ್ಪಿ-ಶಿವಣ್ಣ..ಡಿಸೆಂಬರ್‌ನಲ್ಲಿ‌ ಸ್ಟಾರ್‌ ‌ವಾರ್..!

ಸ್ಟಾರ್ ವಾರ್ ಜೊತೆ ಫ್ಯಾನ್ಸ್ ವಾರ್..1 ತಿಂಗಳು 3 ಸಿನಿಮಾ

Web (47)

ಈ ವರ್ಷ ಮೊದಲ ಆರು ತಿಂಗಳು ಸ್ಟಾರ್ ಸಿನಿಮಾಗಳೇ ಇಲ್ಲ. ಇದೀಗ ಇಯರ್ ಎಂಡ್‌ಗೆ ಸೂಪರ್ ಸ್ಟಾರ್‌ಗಳ‌‌ ಸಿನಿಮಾಗಳಿಂದ ಸ್ಯಾಂಡಲ್‌ವುಡ್‌‌ನಲ್ಲಿ ಫುಲ್ ಟ್ರಾಫಿಕ್. ಕಿಚ್ಚ-ದಚ್ಚು, ಶಿವಣ್ಣ-ಉಪೇಂದ್ರ ಅಂತಹ ಬಿಗ್ ಸ್ಟಾರ್‌‌ಗಳೇ ಒಟ್ಟೊಟ್ಟಿಗೆ ಬಾಕ್ಸ್ ಆಫೀಸ್ ದಂಗಲ್‌ಗೆ ನಾಂದಿ ಹಾಡ್ತಿದ್ದಾರೆ. ಇಷ್ಟಕ್ಕೂ ಏನಾಗಿದೆ ಈ ಸ್ಯಾಂಡಲ್‌ವುಡ್‌ಗೆ..? ಆರೋಗ್ಯಕರ ಕಾಂಪಿಟೇಷನ್ ಯಾಕಿಲ್ಲ ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

ನಾಲ್ಕು ತಿಂಗಳು ಕಳೆದರೆ ಈ 2025ನೇ ವರ್ಷ ಮುಗಿದು, 2026ಗೆ ನಾವೆಲ್ಲಾ ವೆಲ್ಕಮ್ ಹೇಳಬೇಕಾಗುತ್ತೆ. ಕಳೆದ ಈ ಎಂಟು ತಿಂಗಳಲ್ಲಿ ಕನ್ನಡದಲ್ಲಿ 170ಕ್ಕೂ ಅಧಿಕ ಚಿತ್ರಗಳು ಬಂದಿವೆ. ಆದ್ರೆ ಸ್ಟಾರ್‌‌ಗಳೆಲ್ಲಾ ಇಷ್ಟು ದಿನ ಸೈಲೆಂಟ್ ಆಗಿದ್ರು. ಇದೀಗ ದಿಢೀರ್ ಅಂತ ವರ್ಷಾಂತ್ಯಕ್ಕೆ ನಾ ಮುಂದು ತಾ ಮುಂದು ಅಂತ ಒಟ್ಟೊಟ್ಟಿಗೆ ಬರೋಕೆ ಸಜ್ಜಾಗ್ತಿದ್ದಾರೆ. ಇದ್ರಿಂದ ಸಿನಿಮಾ ಟ್ರಾಫಿಕ್ ಹೆಚ್ಚಾಗಲಿದ್ದು, ಬಾಕ್ಸ್ ಆಫೀಸ್ ಕ್ಲ್ಯಾಶ್ ಜೊತೆ ಥಿಯೇಟರ್‌‌ ಸೆಟಪ್‌ಗೂ ಸಮಸ್ಯೆ ಆಗಲಿದೆ.

ಕಿಚ್ಚ-ದಚ್ಚು..ಉಪ್ಪಿ-ಶಿವಣ್ಣ..ಡಿಸೆಂಬರ್‌ನಲ್ಲಿ‌ ಸ್ಟಾರ್‌ ‌ವಾರ್..!

ಸ್ಟಾರ್ ವಾರ್ ಜೊತೆ ಫ್ಯಾನ್ಸ್ ವಾರ್.. 1 ತಿಂಗಳು 3 ಸಿನಿಮಾ

ಡಿಸೆಂಬರ್ ಒಂದೇ ತಿಂಗಳಲ್ಲಿ ದರ್ಶನ್ ನಟನೆಯ ಡೆವಿಲ್, ಶಿವಣ್ಣ-ಉಪೇಂದ್ರ-ರಾಜ್ ಬಿ ಶೆಟ್ಟಿ ತಾರಾಗಣದ ಮೆಗಾ ಮಲ್ಟಿಸ್ಟಾರರ್ 45 ಹಾಗೂ ಕಿಚ್ಚ ಸುದೀಪ್‌ರ ಮಾರ್ಕ್ ಚಿತ್ರಗಳು ಬಿಡುಗಡೆ ಆಗ್ತಿವೆ. ಹೀಗೆ ಮೂರು ಬಿಗ್ ಬಜೆಟ್‌ನ ಬಿಗ್ ಸ್ಟಾರ್ ಸಿನಿಮಾಗಳು ಒಂದೇ ತಿಂಗಳಲ್ಲಿ ರಿಲೀಸ್ ಆಗ್ತಿರೋದ್ರಿಂದ ಚಿತ್ರರಂಗಕ್ಕೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಆಗಲಿದೆ. ವರ್ಷವಿಡೀ ಪರಭಾಷಾ ಸ್ಟಾರ್‌‌ಗಳ ಸಿನಿಮಾಗಳಿಗೆ ಥಿಯೇಟರ್‌‌ಗಳನ್ನ ಬಿಟ್ಟುಕೊಡೋ ನಮ್ಮ ಸ್ಟಾರ್ಸ್‌, ಈಗ ನಮ್ಮ ನಮ್ಮಲ್ಲೇ ಬಡಿದಾಡಿಕೊಳ್ಳುವಂತಹ ಪರಿಸ್ಥಿತಿ ತಂದಿಟ್ಟುಕೊಳ್ತಿದ್ದಾರೆ.

ಅಂದಹಾಗೆ ಅರ್ಜುನ್ ಜನ್ಯ ನಿರ್ದೇಶನದ ಹಾಗೂ ರಮೇಶ್ ರೆಡ್ಡಿ ನಿರ್ಮಾಣದ ಬಹುಕೋಟಿ ಮಲ್ಟಿಸ್ಟಾರರ್ 45 ಚಿತ್ರ ಡಿಸೆಂಬರ್ 25ಕ್ಕೆ ಬರೋದು ಮೊದಲೇ ನಿಶ್ಚಯವಾಗಿತ್ತು. ಆದ್ರೆ ಡಿಸೆಂಬರ್ 25ಕ್ಕೆ ಶಿವಣ್ಣ-ಉಪ್ಪಿ-ರಾಜ್ ಶೆಟ್ಟಿಯ ಟ್ರಯೋ ಕಾಂಬೋ ಚಿತ್ರ ಬರ್ತಿರೋದು ಅನೌನ್ಸ್ ಆದ ಬಳಿಕವೇ ದರ್ಶನ್‌ರ ಡೆವಿಲ್ ಸಿನಿಮಾದ ಬಿಡುಗಡೆ ದಿನಾಂಕ ಲಾಕ್ ಮಾಡಲಾಯಿತು. ಹೌದು.. ಪ್ರಕಾಶ್ ವೀರ್ ನಿರ್ದೇಶಿಸಿ, ನಿರ್ಮಿಸಿರೋ ಡೆವಿಲ್ ಚಿತ್ರ ದರ್ಶನ್ ಅನುಪಸ್ಥಿತಿಯಲ್ಲೂ ರಿಲೀಸ್ ಆಗ್ತಿದೆ. ಡಿಸೆಂಬರ್ 12ಕ್ಕೆ ಬರೋದಾಗಿ ಚಿತ್ರತಂಡ ಅಧಿಕೃತವಾಗಿ ದಿನಾಂಕ ಘೋಷಿಸಿತು.

ಅತಿವೃಷ್ಟಿ ಇಲ್ಲ ಅನಾವೃಷ್ಟಿ..ಏನಾಗಿದೆ ಸ್ಯಾಂಡಲ್‌ವುಡ್‌ಗೆ..?!

8 ತಿಂಗಳು ಸ್ಟಾರ್ ಚಿತ್ರಗಳಿಲ್ಲ..ಈಗ ಥಿಯೇಟರ್ಸ್‌ ಸಾಲಲ್ಲ

ಅರೇ ಎರಡು ವಾರಗಳ ಅಂತರ ಸಾಕಾಗುತ್ತದೆಯೇ..? ನೋ ವೇ ಚಾನ್ಸೇ ಇಲ್ಲ. ಕನಿಷ್ಟ ಒಂದು ತಿಂಗಳ ಅಂತರ ಇರಬೇಕಿತ್ತು ಅನ್ನೋದು ಹಲವರ ವಾದವಾಗಿದೆ. ಆದ್ರೀಗ 45 ಸಿನಿಮಾಗೆ ಮತ್ತೊಂದು ಆಘಾತ ಎದುರಾಗಿದೆ. ಅದಕ್ಕೆ ಕಾರಣ ಸುದೀಪ್‌ರ ಮಾರ್ಕ್. ಮ್ಯಾಕ್ಸ್ ಚಿತ್ರದ ಬಳಿಕ ಅದೇ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಜೊತೆ ಬಾದ್‌ಷಾ ನಟಿಸ್ತಿರೋ ಮಾರ್ಕ್‌ ಕೂಡ ಕ್ರಿಸ್‌ಮಸ್‌‌ಗೆ ಅಂದ್ರೆ ಡಿಸೆಂಬರ್ 25ಕ್ಕೆ ಬರೋದಾಗಿ ಅನೌನ್ಸ್ ಆಗಿದೆ. ಅಲ್ಲಿಗೆ ಒಂದೇ ದಿನ ಶಿವಣ್ಣ, ಉಪೇಂದ್ರ, ಸುದೀಪ್ ಚಿತ್ರಗಳು ಬಂದ್ರೆ ಥಿಯೇಟರ್‌‌ ಸೆಟಪ್ ಹೇಗೆ ಮಾಡಲು ಸಾಧ್ಯ..? ಇದು ಸ್ಟಾರ್ ವಾರ್‌‌ಗಷ್ಟೇ ಸೀಮಿತ ಆಗಲ್ಲ, ಸ್ಟಾರ್‌ಗಳ ಫ್ಯಾನ್ಸ್ ವಾರ್‌ಗೂ ಪ್ರತ್ಯಕ್ಷವಾಗಿ ಕುಮ್ಮಕ್ಕು ಕೊಟ್ಟಂತಾಗಲಿದೆ.

ಇದೊಂಥರಾ ಅತಿವೃಷ್ಟಿ ಹಾಗೂ ಅನಾವೃಷ್ಟಿ ಅನ್ನಬಹುದು. ಹೌದು.. ಬಂದ್ರೆ ಒಟ್ಟೊಟ್ಟಿಗೆ ಎಲ್ಲರೂ ಬರ್ತಾರೆ. ಇಲ್ಲ ಅಂದ್ರೆ ಎಲ್ಲರೂ ಸೈಲೆಂಟ್ ಆಗಿ ಇರ್ತಾರೆ. ಏನಾಗಿದೆ ಈ ಸ್ಯಾಂಡಲ್‌ವುಡ್‌ಗೆ..? ಕಲಾವಿದರ ಸಂಘ, ನಿರ್ಮಾಪಕರುಗಳು, ವಿತರಕರುಗಳು, ಫಿಲ್ಮ್ ಚೇಂಬರ್ ಇರೋದ್ಯಾಕೆ..? ಪರಸ್ಪರ ಮಾತುಕತೆ ಮೂಲಕ ಶಿಸ್ತಿನಿಂದ ತಿಂಗಳಿಗೆ ಒಬ್ಬರಂತೆ ಬಂದ್ರೆ ಎಲ್ಲವೂ ಸುಲಲಿತವಾಗಿ ಆಗುವುದಿಲ್ಲವೇ..? ಮನೆಯೊಂದು ಮೂರು ಬಾಗಿಲು ಕಥೆ ಕೇಳಿರ್ತೀರಾ. ಆದ್ರೆ ನಮ್ಮ ಚಂದನವನದ ಸದ್ಯದ ಪರಿಸ್ಥಿತಿ ಮೊನೆಯೊಂದು ನೂರು ಬಾಗಿಲಾಗಿದೆ. ಈಗಲಾದ್ರೂ ಎಚ್ಚೆತ್ತುಕೊಂಡು, ಯಾರಾದ್ರೂ ಈ ಬಗ್ಗೆ ಒಂದೊಳ್ಳೆ ನಿರ್ಧಾರ ತೆಗೆದುಕೊಳ್ತಾರಾ..? ಕೋಟ್ಯಂತರ ರೂಪಾಯಿ ಸುರಿದಿರೋ ಅನ್ನದಾತರನ್ನ ಉಳಿಸೋ ಕಾರ್ಯ ಮಾಡ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

Exit mobile version