ನಾಗಚೈತನ್ಯ ಜೊತೆ ವೈವಾಹಿಕ ಜೀವನ ಕಡಿದುಕೊಂಡಿದ್ದ ಬಹುಭಾಷಾ ನಟಿ ಸಮಂತಾ, ಕೊನೆಗೂ ಎರಡನೇ ಮದ್ವೆ ಆಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಡೈರೆಕ್ಟರ್ ರಾಜ್ ಕೈ ಹಿಡಿದು, ಎಲ್ಲಾ ಅಂತೆ ಕಂತೆಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ ಸ್ಯಾಮ್. ಇಷ್ಟಕ್ಕೂ ಮದ್ವೆ ನಡೆದದ್ದು ಎಲ್ಲಿ..? ಯಾರೆಲ್ಲಾ ಭಾಗಿಯಾಗಿದ್ರು..? ರಹಸ್ಯವಾಗಿ ಮದ್ವೆ ಆಗಿದ್ದಾದ್ರೂ ಏಕೆ ಅನ್ನೋದ್ರ ಕಂಪ್ಲೀಟ್ ಕಹಾನಿ ಹೇಳ್ತೀವಿ, ಈ ಸ್ಟೋರಿ ನೋಡಿ.
ಸಿನಿಮಾ ಸ್ಟಾರ್‌ಗಳ ಪರ್ಸನಲ್ ಲೈಫ್‌ನಲ್ಲಿ ಏನೇನಾಗ್ತಿದೆ ಅನ್ನೋದ್ರ ಬಗ್ಗೆ ಅವರುಗಳ ಫ್ಯಾನ್ಸ್ ಜೊತೆಗೆ ಶ್ರೀಸಾಮಾನ್ಯರಿಗೂ ಒಂದು ಸಣ್ಣ ಕುತೂಹಲ ಇದ್ದೇ ಇರುತ್ತೆ.
ಅದ್ರಲ್ಲೂ ಬಹುಭಾಷಾ ಸ್ಟಾರ್‌ಗಳು ಅನಿಸಿಕೊಂಡವ್ರ ಮೇಲೆ ಆ ನಿರೀಕ್ಷೆ ಕೊಂಚ ಜಾಸ್ತಿನೇ ಇರುತ್ತೆ. ಯಾಕಂದ್ರೆ ಈ ಸೆಲೆಬ್ರಿಟಿಗಳಿಗೆ ಯಾವಾಗ ಯಾರ ಮೇಲೆ ಲವ್ ಆಗುತ್ತೆ..? ಮದ್ವೆ ಆಗ್ತಾರೆ..? ನಂತ್ರ ಡಿವೋರ್ಸ್ ಆಗುತ್ತೆ ಅನ್ನೋದು ಬಹುಶಃ ಅವರುಗಳಿಗೇನೇ ಗೊತ್ತಿರಲ್ಲ. ಹಾಗಾಗಿ ಜನ ಬಯಸಿದಂತೆ ಅನಿರೀಕ್ಷಿತಗಳನ್ನ ನಿರೀಕ್ಷಿಸಿ ಅಂತ ಆಗಾಗ ಒಂದಷ್ಟು ಮಂದಿ ಸ್ಟಾರ್ಸ್ ಶಾಕ್ ಕೊಡ್ತಿರ್ತಾರೆ.
ಸಮಂತಾ 2ನೇ ಮದುವೆ.. ರಾಜ್ ಜೊತೆ ದಾಂಪತ್ಯ ಜೀವನ
ಇಶಾ ಫೌಂಡೇಷನ್‌ನ ಲಿಂಗ ಭೈರವಿ ಆಲಯದಲ್ಲಿ ಕಲ್ಯಾಣ
ಬಹುಭಾಷಾ ನಟಿ ಸಮಂತಾ ಕೂಡ ಅದ್ರಿಂದ ಹೊರತಾಗಿಲ್ಲ. ಯೆಸ್.. ದ ಫ್ಯಾಮಿಲಿಮ್ಯಾನ್ ಡೈರೆಕ್ಟರ್ ರಾಜ್ ಜೊತೆ ಕದ್ದು ಮುಚ್ಚಿ ಡೇಟ್ ಮಾಡ್ತಿದ್ದ ಸಮಂತಾ, ಇಂದು ದಿಢೀರ್ ಅಂತ ಮದುವೆ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಯೆಸ್.. ಕೊಯಂಬತ್ತೂರಿನ ಇಶಾ ಫೌಂಡೇಷನ್‌ನಲ್ಲಿರೋ ಲಿಂಗ ಭೈರವಿ ಆಲಯದಲ್ಲಿ ಸಮಂತಾ-ರಾಜ್ ಅಗ್ನಿಸಾಕ್ಷಿಯಾಗಿ ಸತಿ-ಪತಿ ಆಗಿದ್ದಾರೆ.
ಇಂದು ಬೆಳಗ್ಗೆಯಿಂದ ಸಮಂತಾ ಮದ್ವೆ ಬಗ್ಗೆ ಹರಿದಾಡ್ತಿದ್ದ ಎಲ್ಲಾ ಅಂತೆ ಕಂತೆಯ ಸುದ್ದಿಗಳಿಗೆ ಸ್ವತಃ ಆಕೆಯೇ ತಮ್ಮ ಇನ್ಸ್‌ಟಾ ಪೇಜ್‌ನಲ್ಲಿ ಮದ್ವೆ ಫೋಟೋಸ್ ಪೋಸ್ಟ್ ಮಾಡುವ ಮೂಲಕ ಇತಿಶ್ರೀ ಹಾಡಿದ್ದಾರೆ. ಅಂದಹಾಗೆ ಸಮಂತಾ ಎರಡನೇ ಮದ್ವೆ ಆಗುವ ಮೂಲಕ ತಮ್ಮ ಲೈಫ್‌ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಕುಟುಂಬಸ್ಥರು ಹಾಗೂ ಆಪ್ತರಷ್ಟೇ ಅದಕ್ಕೆ ಸಾಕ್ಷಿ ಆಗಿದ್ದಾರೆ. ಸ್ಯಾಮ್ ಮದ್ವೆ ವಿಷಯ ತಿಳಿಯುತ್ತಿದ್ದಂತೆ ಫ್ಯಾನ್ಸ್ ಎಲ್ಲಾ ವಿಶ್ ಮಾಡ್ತಿದ್ದಾರೆ. ಚಿತ್ರರಂಗದ ಸ್ಟಾರ್ಸ್, ಟೆಕ್ನಿಷಿಯನ್ಸ್ ಕೂಡ ನೂತದ ದಂಪತಿಗೆ ಶುಭಾಶಯಗಳನ್ನ ಕೋರುತ್ತಿದ್ದಾರೆ.
ನವೆಂಬರ್ ಪ್ರೈವೇಟ್ ಪಾರ್ಟಿಯಲ್ಲಿ ಲವ್ ಬರ್ಡ್ಸ್ ಹಿಂಟ್
ಮತ್ತೊಬ್ಬಳ ಕೈ ಹಿಡಿದ ಮಾಜಿ ಗಂಡನಿಗೆ ಸ್ಯಾಮ್ ಟಾಂಗ್..!
ಅಂದಹಾಗೆ ಸಮಂತಾಗೆ ಇದು ಎರಡನೇ ಮದ್ವೆ. 2017ರಲ್ಲೇ ಕಿಂಗ್ ನಾಗಾರ್ಜುನ್ ಪುತ್ರ ಅಕ್ಕಿನೇನಿ ನಾಗಚೈತನ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಏ ಮಾಯ ಚೇಸಾವೆ ಚಿತ್ರದಿಂದ ಇವರಿಬ್ಬರೂ ಪ್ರೇಮ ಮಾಯೆಯಲ್ಲಿ ಬಿದ್ದು, ಸಹ ಜೀವನ ಆರಂಭಿಸಿದ್ರು. ಆದ್ರೆ ಚೈತು-ಸ್ಯಾಮ್ ವೈವಾಹಿಕ ಜೀವನ ಮೂರೇ ವರ್ಷಕ್ಕೆ ಮುರಿದು ಬಿತ್ತು. 2021ರಲ್ಲಿ ಇಬ್ಬರೂ ಪರಸ್ಪರ ವಿಚ್ಚೇದನ ಪಡೆದಿದ್ದರು. ಕಳೆದ ವರ್ಷ ನಾಗಚೈತನ್ಯ, ಶೋಭಿತಾ ದ್ಹುಲಿಪಾಲಾ ಕೈ ಹಿಡಿದು ಅದ್ರಿಂದ ಮೂವಾನ್ ಆಗಿದ್ರು.
ಸಮಂತಾ ಅದ್ರಿಂದ ಹೊರಬರಲಾಗದೆ ಸ್ವಲ್ಪ ದಿನ ಕೊರಗಿ, ಸೊರಗಿ, ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಂಡ ಬಳಿಕ ದ ಫ್ಯಾಮಿಲಿಮ್ಯಾನ್ ಡೈರೆಕ್ಟರ್ ರಾಜ್ ನಿಡಿಮೋರು ಜೊತೆ ಸ್ನೇಹ ಬೆಳೆಸಿದ್ರು. ಅದಕ್ಕೆ ಕಾರಣ ದ ಫ್ಯಾಮಿಲಿಮ್ಯಾನ್ ಸೀಸನ್-2 ಕೂಡ ಹೌದು. ಅದ್ರಲ್ಲಿ ಸ್ಯಾಮ್ ಲೀಡ್‌ನಲ್ಲಿ ನಟಿಸಿದ್ರು. ಹಾಗಾಗಿಯೇ ಅವರಿಬ್ಬರ ನಡುವೆ ಒಂದೊಳ್ಳೆ ಬಾಂಡಿಂಗ್ ಏರ್ಪಟ್ಟಿತ್ತು. ಜಿಮ್ ಸೇರಿದಂತೆ, ಏರ್‌ಪೋರ್ಟ್‌ಗಳಲ್ಲೂ ಸಹ ರಾಜ್-ಸ್ಯಾಮ್ ಒಟ್ಟೊಟ್ಟಿಗೆ ಕಾಣಿಸಿಕೊಳ್ತಿದ್ರು.
ಇತ್ತೀಚೆಗೆ ನವೆಂಬರ್ ತಿಂಗಳಲ್ಲಿ ಪ್ರೈವೇಟ್ ಪಾರ್ಟಿಯೊಂದರಲ್ಲಿ ಸಮಂತಾ ಸೊಂಟ ಹಿಡಿದು ನಿಂತಿದ್ದ ರಾಜ್ ಫೋಟೋವೊಂದನ್ನ ಸಮಂತಾನೇ ಶೇರ್ ಮಾಡಿದ್ರು. ಅದ್ರಿಂದ ಅವರ ರಿಲೇಷನ್‌ಶಿಪ್ ಬಗ್ಗೆ ಇದ್ದ ಊಹಾಪೋಹಗಳಿಗೆ ಒಂದು ಕ್ಲ್ಯಾರಿಟಿ ಕೊಟ್ಟಿದ್ರು. ಸದ್ಯದಲ್ಲೇ ಮದ್ವೆ ಆಗ್ತೀವಿ ಅನ್ನೋ ಮುನ್ಸೂಚನೆ ಕೂಡ ನೀಡಿದ್ರು. ಅದ್ರಂತೆ ಇಂದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಸಮಂತಾಗೇನೋ ಇದು ಸೆಕೆಂಡ್ ಮ್ಯಾರೇಜ್. ನಿರ್ದೇಶಕ ರಾಜ್‌ಗೂ ಇದು ಎರಡನೇ ಮದ್ವೆ. ಯೆಸ್.. ಈ ಹಿಂದೆ ಶ್ಯಾಮಲಿ ಡಿ ಅನ್ನೋರನ್ನ ಮದ್ವೆ ಆಗಿದ್ದ ರಾಜ್, ಆಕೆಗೆ 2022ರಲ್ಲಿ ಡಿವೋರ್ಸ್ ನೀಡಿದ್ರು. ಅದಕ್ಕೆ ಕಾರಣ ಸಮಂತಾ ರಾಜ್ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟಿದ್ದು ಎನ್ನಲಾಗಿತ್ತು.
ಆದ್ರೀಗ ಅಫಿಶಿಯಲಿ ಸಮಂತಾ ಸಿಂಗಲ್ ಅಲ್ಲ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಸೋ.. ಸ್ಯಾಮ್-ರಾಜ್ ಕಾಂಬೋದಲ್ಲಿ ಸಿನಿಮಾ, ಸೀರೀಸ್‌ಗಳು ಸಾಕಷ್ಟು ಬರಲಿವೆ ಅಂತಿದ್ದಾರೆ ಅಭಿಮಾನಿಗಳು.
