ಬಿಗ್‌ಬಾಸ್ ವೇದಿಕೆ ಮೇಲೆಯೇ ಕುಸಿದು ಬಿದಿದ್ಯಾಕೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್..? ಎದೆ ಹಿಡಿದು ಕೆಳಗುರುಳಿದ ಸಲ್ಲುಗೆ ಹಾರ್ಟ್ ಅಟ್ಯಾಕ್ ಆಗಿದ್ದು ನಿಜಾನಾ..? ಅಥ್ವಾ ಶೋ ಗಿಮಿಕ್ಕಾ..? ಶರ್ಟ್ ಬಿಚ್ತೀರಾ… ಕೆಳಗೆ ಬೀಳ್ತಿರಾ.. ಏನ್ ಸಲ್ಲು ಭಾಯ್ ಇದೆಲ್ಲಾ..? ಅಂತ ನೆಟ್ಟಿಗರು ನೇರವಾಗಿ ಪ್ರಶ್ನೆ ಮಾಡ್ತಿರೋದು ಯಾಕೆ..? ಬಿಗ್ ಬಾಸ್ ಅಂಗಳದಲ್ಲಿ ಆ ಬಿಗ್ ಹೈಡ್ರಾಮಾದ ಅಸಲಿ ಕಥೆ ನಿಮಗಾಗಿ.
- ಶರ್ಟ್ ಬಿಚ್ತೀರಾ.. ಕೆಳಗೆ ಬೀಳ್ತೀರಾ.. ಏನ್ ಸಲ್ಲು ಇದೆಲ್ಲಾ?
- ಬಿಗ್‌ಬಾಸ್ ಪ್ರೋಮೋದಲ್ಲಿ ಹೈಡ್ರಾಮಾ.. ನೆಟ್ಟಿಗರು ಗರಂ..!
- ಸಲ್ಲು ಆರೋಗ್ಯದ ಬಗ್ಗೆ ಗೊಂದಲ.. ಕೊನೆಗೂ ಕೊಟ್ರು ಕ್ಲ್ಯಾರಿಟಿ
- ಎಡಿಟಿಂಗ್‌ನಲ್ಲಿ ಬಿಗ್ ಎಡವಟ್.. ಕ್ಷಮೆ ಕೇಳಿದ ಭಾಯಿಜಾನ್
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್‌ಗೆ ವೇದಿಕೆ ಮೇಲೆಯೇ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿರಾ..? ವೈದ್ಯರು ಓಡೋಡಿ ಬಂದು ಟ್ರೀಟ್‌ಮೆಂಟ್ ಕೊಡುವ ಪರಿಸ್ಥಿತಿ ಬಂದಿತ್ತಾ..? ಹೌದು,ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 20ರ ಸೆಟ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಲ್ಲು ಅಭಿಮಾನಿಗಳ ಎದೆಬಡಿತವೇ ನಿಂತುಹೋದಂತಾಗಿತ್ತು. 62 ವರ್ಷದ ಭಾಯ್ ಜಾನ್ ಸಲ್ಮಾನ್ ರಾತ್ರಿ-ಹಗಲೆನ್ನದೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇ ಇದಕ್ಕೆ ಕಾರಣ ಇರಬಹುದು ಅಂತ ಅಭಿಮಾನಿಗಳು ಆತಂಕದಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡಲು ಶುರು ಮಾಡಿದ್ದರು.
ಆದರೆ, ಕಥೆಗೆ ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿ. ಶೋ ರೇಟಿಂಗ್‌ಗಾಗಿ ನಡೆಸಿದ ಪಬ್ಲಿಸಿಟಿ ಸ್ಟಂಟ್ ಇದು ಅಂತ ಒಂದಷ್ಟು ಜನ ಟ್ರೋಲ್ ಮಾಡಲು ಶುರುಮಾಡಿದಾಗ, ಸಲ್ಮಾನ್ ಫ್ಯಾನ್ಸ್ ಅವರ ಮೇಲೆ ಸಿಟ್ಟಿನಿಂದ ತಿರುಗಿಬಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವಾಗಲೇ ಖುದ್ದು ಸಲ್ಮಾನ್ ಖಾನ್ ಅಖಾಡಕ್ಕೆ ಇಳಿದು ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ಪಷ್ಟನೆ ನೀಡಿರುವ ಸಲ್ಮಾನ್, ನನಗೆ ಏನೂ ಆಗಿಲ್ಲ, ದೇವರ ದಯೆಯಿಂದ ಆರೋಗ್ಯವಾಗಿ ಇದ್ದೇನೆ. ಪ್ರೋಮೋ ಎಡಿಟಿಂಗ್‌ನಲ್ಲಿ ಆದ ಎಡವಟ್ಟಿನಿಂದ ಹೀಗೆ ಕಾಣಿಸಿದೆ ಅಷ್ಟೇ ಎಂದು ಹೇಳಿ ಪ್ರೇಕ್ಷಕರಲ್ಲಿ ಕ್ಷಮೆ ಕೇಳಿದ್ದಾರೆ ಸಲ್ಮಾನ್ ಖಾನ್
ಶರ್ಟ್ ಬಿಚ್ಚಿ ಬಾಡಿ ತೋರಿಸ್ತೀರಾ, ವೇದಿಕೆ ಮೇಲೆ ಬಿದ್ದು ಡ್ರಾಮಾ ಮಾಡ್ತೀರಾ, ಅಂತ ನೆಟ್ಟಿಗರು ಈಗ ಬಿಗ್ ಬಾಸ್ ತಂಡವನ್ನು ಹಾಗು ಸಲ್ಮಾನ್ ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ತಮ್ಮ ಅಭಿಮಾನಿಗಳು ಆತಂಕಕ್ಕೆ ಒಳಗಾಗಬಾರದು ಎನ್ನುವ ಒಂದೇ ಒಂದು ಕಾರಣಕ್ಕೆ ಸಲ್ಮಾನ್ ಸ್ವತಃ ಮುಂದೆ ಬಂದು ಸತ್ಯ ತೆರೆದಿಟ್ಟಿದ್ದು ಅವರ ದೊಡ್ಡತನ ಮತ್ತು ಜವಾಬ್ದಾರಿಯನ್ನು ಎತ್ತಿಹಿಡಿಯುತ್ತದೆ. ಬಿಗ್ ಬಾಸ್ ಟೀಂ ಮಾಡಿದ ಎಡಿಟಿಂಗ್ ಎಡವಟ್ಟಿಗೆ ತಾವೇ ಕಳಕಳಿಯಿಂದ ಕ್ಷಮೆ ಕೋರುವ ಮೂಲಕ, ತಮ್ಮ ಮೇಲೆ ಕೋಟ್ಯಂತರ ಅಭಿಮಾನಿಗಳು ಇಟ್ಟಿರುವ ಪ್ರೀತಿ ಮತ್ತು ನಂಬಿಕೆಗೆ ಸೂಕ್ತ ಗೌರವ ನೀಡಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
