ಸ್ಯಾಂಡಲ್‌ವುಡ್‌ನಿಂದ ಇತ್ತೀಚೆಗೆ ಒಬ್ಬರಲ್ಲ, ಇಬ್ಬರಲ್ಲ ನಾಲ್ಕೈದು ಮಂದಿ ಡೈರೆಕ್ಟರ್‌ಗಳು ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಆ ಸಾಲಿಗೆ ಅವನೇ ಶ್ರೀಮನ್ನಾರಾಯಣ ಸಾರಥಿ ಸಚಿನ್ ಕೂಡ ಸೇರಿಕೊಳ್ತಿದ್ದಾರೆ. ಕನ್ನಡಿಗರು ಹೆಮ್ಮೆ ಪಡುವಂತಹ ಈ ಸ್ಟೋರಿಯಲ್ಲಿ ಸಚಿನ್ ಯಾವ ಸ್ಟಾರ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.
- ಬಾಲಿವುಡ್‌ನತ್ತ ASN ಸಾರಥಿ.. ಟೈಗರ್ ಶ್ರಾಫ್‌ಗೆ ಆ್ಯಕ್ಷನ್ ಕಟ್
- ರಕ್ಷಿತ್ ಶೆಟ್ಟಿ ಬಳಗದ ಟ್ಯಾಲೆಂಟ್.. ಸಚಿನ್ ಬಾಲಿವುಡ್ ಇನ್ನಿಂಗ್ಸ್
- ಮೇಕಿಂಗ್ ಹಂತದಲ್ಲಿ ‘ಭಾಗಿ-4’.. ‘ಭಜರಂಗಿ’ ಹರ್ಷ ಡೈರೆಕ್ಷನ್
- ಸಂತು, ಒಡೆಯರ್, ಹರ್ಷ ಬೆನ್ನಲ್ಲಿ ಸಚಿನ್ ರವಿ ಮಹತ್ವದ ಹೆಜ್ಜೆ !
ಬಾಲಿವುಡ್ ಡೈರೆಕ್ಟರ್‌ಗಳ ಕಣ್ಣು ನಮ್ಮ ಸೌತ್ ಡೈರೆಕ್ಟರ್‌ಗಳ ಮೇಲೆ ಬಿದ್ದಿದೆ. ಶಾರೂಖ್ ಖಾನ್, ಸಲ್ಮಾನ್ ಖಾನ್, ರಣ್‌ಬೀರ್ ಕಪೂರ್, ಶಾಹಿದ್ ಕಪೂರ್ ಅಂತಹ ಸೂಪರ್ ಸ್ಟಾರ್‌ಗಳು ಅಟ್ಲೀ, ಎ ಆರ್ ಮುರುಗದಾಸ್, ಪ್ರಭುದೇವ, ಸಂದೀಪ್ ರೆಡ್ಡಿ ವಂಗಾದಂತಹ ಸೌತ್ ಟ್ಯಾಲೆಂಟೆಡ್ ಡೈರೆಕ್ಟರ್‌ಗಳ ಮೊರೆ ಹೋಗ್ತಿದ್ದಾರೆ. ಇದೀಗ ಅವರುಗಳ ಸಾಲಿಗೆ ಜಾಕಿಶ್ರಾಫ್ ಮಗ ಟೈಗರ್ ಶ್ರಾಫ್ ಕೂಡ ಸೇರಿಕೊಂಡಿದ್ದಾರೆ.
ಹೌದು.. ಸದ್ಯ ಟೈಗರ್ ಶ್ರಾಫ್ ನಟನೆಯ ಭಾಗಿ ಫ್ರಾಂಚೈಸ್‌ನ ಭಾಗಿ-4 ಸಿನಿಮಾ ತಯಾರಾಗ್ತಿದ್ದು, ಅದಕ್ಕೆ ನಮ್ಮ ಭಜರಂಗಿ ಹರ್ಷ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅದು ಮುಗೀತಾ ಇದ್ದಂತೆ ಮತ್ತೊಂದು ಮೆಗಾ ಆ್ಯಕ್ಷನ್ ವೆಂಚರ್ ಸೆಟ್ಟೇರಲಿದೆಯಂತೆ. ಅದಕ್ಕೂ ಸಹ ಮತ್ತೊಬ್ಬ ಕನ್ನಡಿಗನೇ ನಿರ್ದೇಶಕ ಅನ್ನೋದು ಇಂಟರೆಸ್ಟಿಂಗ್. ಯೆಸ್.. ರಕ್ಷಿತ್ ಶೆಟ್ಟಿಗೆ ಅವನೇ ಶ್ರೀಮನ್ನಾರಾಯಣ ಅನ್ನೋ ಭಿನ್ನ ಅಲೆಯ ಸಿನಿಮಾನ ನಿರ್ದೇಶಿಸಿದ್ದ ಸಚಿನ್ ರವಿಗೆ ಟೈಗರ್ ಶ್ರಾಫ್ ಡೇಟ್ಸ್ ನೀಡಿದ್ದಾರೆ ಎನ್ನಲಾಗ್ತಿದೆ.
ಮೂಲತಹ ಸಂಕಲನಕಾರನಾಗಿರೋ ಸಚಿನ್ ರವಿ, ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರೋ ಪ್ರತಿಭೆ. ಅಶ್ವತ್ಥಾಮ ಸಿನಿಮಾನ ಮಾಡೋಕೆ ತಯಾರಿ ನಡೆಸ್ತಿದ್ದ ಸಚಿನ್, ಇದೀಗ ಅದನ್ನ ಕೈಬಿಟ್ಟು, ಬಾಲಿವುಡ್‌ಗೆ ಫ್ಲೈಟ್ ಹತ್ತುತ್ತಿದ್ದಾರೆ. ಮೂಲಗಳ ಪ್ರಕಾರ ಅವನೇ ಶ್ರೀಮನ್ನಾರಾಯಣ ನೋಡಿ ಇಂಪ್ರೆಸ್ ಆಗಿರೋ ಟೈಗರ್ ಶ್ರಾಫ್, ತಮಗೊಂದು ಚಿತ್ರ ನಿರ್ದೇಶಿಸುವಂತೆ ಹೇಳಿದ್ದಾರಂತೆ. ಮಾರ್ಷಲ್ ಆರ್ಟ್ಸ್‌ನಲ್ಲಿ ಪಂಟರ್ ಆಗಿರೋ ಟೈಗರ್, ಒಂಥರಾ ಮಸಲ್ ಮ್ಯಾನ್. ಡ್ಯಾನ್ಸ್ ಮತ್ತು ಫೈಟ್ಸ್ ಇವರ ಫೇವರಿಟ್. ಹಾಗಾಗಿ ಅಂತಹ ಸ್ಟಾರ್‌ಗೆ ನಮ್ಮ ಕನ್ನಡಿಗ ನಿರ್ದೇಶನ ಮಾಡ್ತಿರೋದು ಖುಷಿಯ ವಿಚಾರ.
ಅಲೆಮಾರಿ ಸಂತು, ಪವನ್ ಒಡೆಯರ್ ಹಾಗೂ ಹರ್ಷ ಇತ್ತೀಚೆಗೆ ಕನ್ನಡದಿಂದ ಬಾಲಿವುಡ್‌ಗೆ ಹಾರಿ, ಅಲ್ಲಿ ಹಿಂದಿ ಚಿತ್ರಗಳನ್ನ ನಿರ್ದೇಶಿಸಿದ ಡೈರೆಕ್ಟರ್‌ಗಳು ಅನಿಸಿಕೊಂಡಿದ್ದಾರೆ. ಅವರ ಸಾಲಿಗೆ ಸಚಿನ್ ರವಿ ಸೇರ್ತಿದ್ದು, ಇವ್ರ ಕಾಂಬೋ ಸಿನಿಮಾ ಹೇಗಿರಲಿದೆ ಅನ್ನೋ ಕ್ಯೂರಿಯಸಿಟಿ ಹೆಚ್ಚಿದೆ.
ವಾರ್ ಸಿನಿಮಾದಲ್ಲಿ ಹೃತಿಕ್ ರೋಷನ್, ಬಡೇಮಿಯಾ ಚೋಟೆಮಿಯಾ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅಂತಹ ಬಿಗ್ ಸ್ಟಾರ್ಸ್ ಜೊತೆ ತೆರೆ ಹಂಚಿಕೊಂಡ ಟೈಗರ್ ಶ್ರಾಫ್‌ಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಆ ಮಸಲ್ ಮ್ಯಾನ್ ನಟಿಸೋ ನೆಕ್ಸ್ಟ್ ವೆಂಚರ್ ಬಗ್ಗೆ ಸಾಕಷ್ಟು ಲೆಕ್ಕಾಚಾರಗಳು ನಡೆಯುತ್ತಿವೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್