ಕಾಂತಾರ ಕ್ವೀನ್ ರುಕ್ಮಿಣಿ ವಸಂತ್‌ಗೆ ಅದೃಷ್ಟ ಖುಲಾಯಿಸಿದಂತಿದೆ. ಇತ್ತೀಚೆಗೆ ಸಾಲು ಸಾಲು ಸ್ಟಾರ್ ಚಿತ್ರಗಳಲ್ಲಿ ಬ್ಯುಸಿ ಇರೋ ಈಕೆ, ಇದೀಗ ಸ್ಟಾರ್‌ಗಳ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರಕ್ಕೆ ನಾಯಕಿ ಎನ್ನಲಾಗ್ತಿದೆ. ಅದ್ಯಾವ ಮೂವಿ..? ಏನಿದರ ಅಸಲಿಯತ್ತು ಅನ್ನೋದಕ್ಕೆ ಈ ಕಲರ್‌ಫುಲ್ ಸ್ಟೋರಿ ಒಮ್ಮೆ ನೋಡಿ..
- ರಜನಿಕಾಂತ್ಗೆ ಕನ್ನಡತಿ ರುಕ್ಮಿಣಿ ವಸಂತ್ ನಾಯಕನಟಿ
- ಕಮಲ್-ರಜನಿ ಧರ್ಮನ್ನಲ್ಲಿ ಕಾಂತಾರ ಕ್ವೀನ್ ನಟನೆ..?
ಕಾಂತಾರ ಚಾಪ್ಟರ್-1 ಬಳಿಕ ಅಪ್ಪಟ ಕನ್ನಡ ಚೆಲುವೆ ರುಕ್ಮಿಣಿ ವಸಂತ್ ನಸೀಬು ಕಂಪ್ಲೀಟ್ ಆಗಿ ಬದಲಾಗಿ ಹೋಯ್ತು. ಯೆಸ್.. ಕಾಂತಾರ ಕ್ವೀನ್ ಸದ್ಯ ಜೂನಿಯರ್ ಎನ್‌ಟಿಆರ್ ಜೊತೆಗಿನ ಡ್ರ್ಯಾಗನ್ ಹಾಗೂ ಯಶ್ ನಟನೆಯ ಟಾಕ್ಸಿಕ್ ಚಿತ್ರಗಳಲ್ಲಿ ನಟಿಸ್ತಿದ್ದಾರೆ. ಇದೀಗ ಮತ್ತೊಂದು ಮೆಗಾ ಪ್ರಾಜೆಕ್ಟ್ ರುಕ್ಕು ಪಾಲಿಗೆ ಒಲಿದಿದೆ ಎನ್ನಲಾಗ್ತಿದೆ.
ಯೆಸ್.. ರಜನಿಕಾಂತ್ ನಟನೆಯ ತಲೈವಾರ್-173 ಸಿನಿಮಾ ಧರ್ಮನ್‌ಗೆ ನಮ್ಮ ರುಕ್ಮಿಣಿ ವಸಂತ್ ನಾಯಕನಟಿ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ಈಗಾಗ್ಲೇ ಹಿರಿಯನಟಿ ಸಿಮ್ರಾನ್ ಹಾಗೂ ರಾಶಿ ಖನ್ನಾ ಚಿತ್ರದ ತಾರಾಗಣದಲ್ಲಿದ್ದು, ರುಕ್ಕಮ್ಮ ನ್ಯೂ ಎಂಟ್ರಿ ಅನ್ನೋದು ಲೇಟೆಸ್ಟ್ ಬಝ್.
ಧರ್ಮನ್ ಚಿತ್ರದಲ್ಲಿ ಇದೇ ತಮ್ಮ ಜೀವಮಾನದಲ್ಲಿ ಮೊದಲ ಬಾರಿಗೆ ಡಾಕ್ಟರ್ ರೋಲ್‌ನಲ್ಲಿ ನಟಿಸ್ತಿರೋ ತಲೈವಾ ರಜನಿಗೆ ಅಶ್ವತ್ ಮಾರಿಮುತ್ತು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಸಿನಿಮಾಗೆ ಕಮಲ್ ಹಾಸನ್ ತಮ್ಮ ಪ್ರೊಡಕ್ಷನ್ ಬ್ಯಾನರ್‌ನಡಿ ಬಂಡವಾಳ ಹೂಡುತ್ತಿರೋದು ವಿಶೇಷ. ಇತ್ತೀಚೆಗೆ ರಜನಿ-ಕಮಲ್ ಇಬ್ಬರೂ ತಮ್ಮ ಡೈರೆಕ್ಟರ್ ಜೊತೆ ಫಸ್ಟ್‌ಲುಕ್ ಲಾಂಚ್ ಮಾಡಿ, ಸುದ್ದಿಗೋಷ್ಠಿ ಕೂಡ ನಡೆಸಿದ್ರು.
ಒಟ್ಟಾರೆ ನಾನು ಒಂದು ಚಿತ್ರದಲ್ಲಾದ್ರೂ ರಜನಿಕಾಂತ್ ಜೊತೆ ನಟಿಸಬೇಕು ಅನ್ನೋ ಆಸೆ, ಆಕಾಂಕ್ಷೆ ಎಲ್ಲಾ ಕಲಾವದರಿಗೂ ಇದ್ದೇ ಇರುತ್ತೆ. ಆದ್ರೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಆರೇಳು ವರ್ಷಗಳಲ್ಲೇ ಅದು ನಮ್ಮ ರುಕ್ಕಮ್ಮನ ಪಾಲಾಗ್ತಿರೋದು ಖುಷಿಯ ವಿಚಾರ. ರಜನಿ ಜೊತೆ ರುಕ್ಕಿಣಿ ಅನ್ನೋ ಸುದ್ದಿಯನ್ನ ಕೇಳೋದೇ ಚೆಂದ. ಆದ್ರೆ ಇದು ಅಫಿಶಿಯಲಿ ಎಲ್ಲೂ ಅನೌನ್ಸ್ ಆಗಿಲ್ಲ. ಆದ್ರೆ ಕನ್ನಡಿಗರೆಲ್ಲಾ ಖುಷಿ ಪಡೋ ವಿಷಯವಾಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
