ಸಪ್ತ ಸಾಗರದ ಪುಟ್ಟಿ ರುಕ್ಮಿಣಿ ವಸಂತ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ. ಅದಕ್ಕೆ ಕಾರಣ ಅವ್ರ ಹಚ್ಚ ಹಸಿರಾಗಿರೋ ಹಾಟ್ ಅಂಡ್ ಬೋಲ್ಡ್ ಲುಕ್‌ನಲ್ಲಿರೋ ಬಿಕಿನಿ ಫೋಟೋಸ್ & ವಿಡಿಯೋಸ್. ಅರೇ.. ರುಕ್ಕಮ್ಮ ಇಷ್ಟು ಬೋಲ್ಡ್ ಬ್ಯೂಟಿ ಆಗಿಬಿಟ್ರಾ..? ಅಸಲಿಗೆ ಅದು ನಿಜಾನಾ ಅಥ್ವಾ ಎಐ ಕ್ರಿಯೇಟೆಡ್ಡಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಐದೇ ವರ್ಷದಲ್ಲಿ ಸ್ಯಾಂಡಲ್‌ವುಡ್‌ನ ಉತ್ತುಂಗಕ್ಕೇರಿದ ನಟಿ ರುಕ್ಮಿಣಿ ವಸಂತ್, ಕನ್ನಡ ಅಲ್ಲದೆ, ಹಿಂದಿ, ತೆಲುಗು, ತಮಿಳು ಚಿತ್ರರಂಗಗಳಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಅದರಲ್ಲೂ ಕಾಂತಾರ-1 ಚಿತ್ರದ ಬಿಗ್ಗೆಸ್ಟ್ ಸಕ್ಸಸ್, ಸದ್ಯ ಬರ್ತಿರೋ ಎನ್‌ಟಿಆರ್ ಜೊತೆಗಿನ ಡ್ರ್ಯಾಗನ್ ಸಿನಿಮಾದ ಹೈಪ್ ರುಕ್ಕು ಬಾಳು ಮತ್ತಷ್ಟು ಬಂಗಾರವಾಗುವಂತೆ ಮಾಡಿವೆ. ಆದ್ರೀಗ ಎಲ್ಲೆಲ್ಲೂ ಈ ಕ್ಲಾಸಿಕ್ ಬ್ಯೂಟಿ ರುಕ್ಮಿಣಿ ವಸಂತ್‌ದೇ ಸದ್ದು.
ರುಕ್ಮಿಣಿ ವಸಂತ್ ‘ಬಿಕಿನಿ’ ಬಾಂಬ್.. AI or ರಿಯಲ್..?!
ಸೋಶಿಯಲ್ ಮೀಡಿಯಾ ಹೀಟ್ ಹೆಚ್ಚಿಸಿದ ಹಾಟ್ ಪಿಕ್ಸ್
ಇದೇ ಮೊದಲ ಬಾರಿಗೆ ಬಿಕಿನಿ ತೊಟ್ಟಿರೋ ರುಕ್ಮಿಣಿ ವಸಂತ್ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿವೆ. ತಮಿಳು ಜರ್ನಲಿಸ್ಟ್‌ಗಳ ಎಕ್ಸ್ ಖಾತೆಗಳಿಂದ ಹೊರಬಿದ್ದ ಆ ಫೋಟೋ, ವಿಡಿಯೋಗಳು ಕ್ಷಣಾರ್ಧದಲ್ಲೇ ನಿರೀಕ್ಷೆಗೂ ಮೀರಿದ ರೇಂಜ್‌ನಲ್ಲಿ ವೈರಲ್ ಆಗಿಬಿಟ್ಟವು. ಹಚ್ಚ ಹಸಿರಾಗಿರೋ ಆ ಗ್ರೀನ್ ಕಲರ್ ಬಿಕಿನಿಯಲ್ಲಿ ಸಿಕ್ಕಾಪಟ್ಟೆ ಬೋಲ್ಡ್ & ಬ್ಯೂಟಿಫುಲ್ ಆಗಿ ಕಾಣ್ತಿದ್ದಾರೆ ರುಕ್ಕಮ್ಮ.
ಸೋಶಿಯಲ್ ಮೀಡಿಯಾ ಹೀಟ್ ಹೆಚ್ಚಿಸಿದ ರುಕ್ಮಿಣಿ ವಸಂತ್ ಹಾಟ್ ಪಿಕ್ಸ್‌ನ ಪಡ್ಡೆ ಹುಡುಗರು ಕಣ್ಣು, ಬಾಯಿ ಬಿಟ್ಕೊಂಡು, ಕದ್ದು ಮುಚ್ಚಿ ನೋಡ್ತಿದ್ದಾರೆ. ಎಕ್ಸ್‌ನಲ್ಲಿ ನಿನ್ನೆ ರಾತ್ರಿ ರುಕ್ಕಮ್ಮ ಹಾಗೂ ಅವ್ರ ಆ ಹಾಟ್ ಫೋಟೋಸ್ ಪೋಸ್ಟ್‌ಗಳು ಟ್ರೆಂಡಿಂಗ್‌ನಲ್ಲಿದ್ದವು. ಆದ್ರೆ ಈ ಡಿಜಿಟಲ್ ಯುಗದಲ್ಲಿ ಅದನ್ನೆಲ್ಲಾ ನಂಬುವುದು ಹೇಗೆ..? ಅವು ರಿಯಲ್ಲಾ ಅಥ್ವಾ AI ಜನರೇಟೆಡ್ ಫೋಟೋಸಾ ಅನ್ನೋದು ಯಕ್ಷ ಪ್ರಶ್ನೆಯಾಗಿತ್ತು. ನಮ್ಮ ಗ್ಯಾರಂಟಿ ನ್ಯೂಸ್ ಸೇರಿದಂತೆ ಸಾಕಷ್ಟು ಮಂದಿ ಫೋನ್ ಕರೆಗಳು ಹಾಗೂ ಮೆಸೇಜ್‌ಗಳ ಮೂಲಕ ನೇರವಾಗಿ ಅವರನ್ನೇ ಪ್ರಶ್ನಿಸಿದ್ರು.
ಬಿಕಿನಿ ಫೋಟೋಸ್ ಬಗ್ಗೆ ಮೌನ ಮುರಿದ ರುಕ್ಮಿಣಿ..!!
ಅವು ಫೇಕ್.. ಶೇರ್ ಮಾಡ್ಬೇಡಿ ಪ್ಲೀಸ್ ಎಂದ ಚೆಲುವೆ
ಕಳ್ಳರು ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೊನೆಯಲ್ಲಿ ಪೊಲೀಸರು ಬಂದ್ರಂತೆ ಅಂತಾರಲ್ವಾ.. ಅದೇ ರೀತಿ ಫೋಟೋಸ್, ವಿಡಿಯೋಸ್ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಇಂದು ಬೆಳಗ್ಗೆ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ ನಟಿ ರುಕ್ಮಿಣಿ ವಸಂತ್. ಹೌದು.. ತಮ್ಮ ಸಾಮಾಜಿಕ ಜಾಲತಾಣಗಳ ಪೇಜ್‌ಗಳಲ್ಲಿ ಈ ಬಿಕಿನಿ ಫೋಟೋಸ್ ಹಾಗೂ ವಿಡಿಯೋಸ್ ಬಗ್ಗೆ ಮೌನ ಮುರಿದಿರೋ ರುಕ್ಮಿಣಿ, ಅವು ನಕಲಿ ಫೋಟೋಗಳು. ದಯವಿಟ್ಟು ಯಾರೂ ಶೇರ್ ಮಾಡಬೇಡಿ ಎಂದಿದ್ದಾರೆ. ಮಾರ್ಫ್ ಮಾಡಿರೋ ಫೋಟೋಗಳ ಸೃಷ್ಠಿ ಹಾಗೂ ಅವುಗಳ ಹಂಚಿಕೆ ವೈಯಕ್ತಿಕ ಗೌಪ್ಯತೆಗೆ ಗಂಭೀರ ಧಕ್ಕೆ ತರುವ ವಿಷಯ ಎಂದಿದ್ದಾರೆ.
AI ಜನರೇಟೆಡ್ ಫೋಟೋಸ್ ಕ್ರಿಯೇಟ್ ಮಾಡಿರೋ ಆ ಫೇಕ್ ಕಂಟೆಂಟ್ ಕ್ರಿಯೇಟರ್ಸ್ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿ, ಕಾನೂನು ಕ್ರಮಕ್ಕೆ ಮುಂದಾಗ್ತಿದ್ದಾರೆ. ಈ ನಕಲಿ ಫೋಟೋ, ವಿಡಿಯೋಗಳನ್ನ ಶೇರ್ ಮಾಡಬೇಡಿ, ಪ್ರೋತ್ಸಾಹಿಸಬೇಡಿ ಅಂದಿರೋ ಅವರು, ಇದು ಬೇಜವಾಬ್ದಾರಿತನದ ಪರಮಾವಧಿ ಅಂತ ಕಿಡಿ ಕಾರಿದ್ದಾರೆ.
ಫೇಕ್ ಕಂಟೆಂಟ್ ಕ್ರಿಯೇಟರ್ಸ್ ವಿರುದ್ಧ ಗುಡುಗಿದ ನಟಿ
ಇದು ಬೇಜವಾಬ್ದಾರಿ ತನದ ಪರಮಾವಧಿ ಎಂದ ರುಕ್ಕು..!
ಅಂದಹಾಗೆ ಗ್ಲಾಮರ್ ಲೋಕದಲ್ಲಿ ಇದೆಲ್ಲಾ ಸರ್ವೇ ಸಾಮಾನ್ಯ. ಯಾಕಂದ್ರೆ ತಂತ್ರಜ್ಞಾನ ಮುಂದುವರೆದಿರೋ ಈ ಕಾಲದಲ್ಲಿ ನಟಿಮಣಿಯರನ್ನ ಟಾರ್ಗೆಟ್ ಮಾಡಿಕೊಂಡು. ವೀವ್ಸ್‌ಗಾಗಿ ಕೆಲ ಕಿಡಿಗೇಡಿಗಳು ಮಾಡಬಾರದ್ದನ್ನ ಮಾಡ್ತಿದ್ದಾರೆ. ನಮ್ಮ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸೇರಿದಂತೆ ಸಾಕಷ್ಟು ಮಂದಿ ನಟಿಯರು ರುಕ್ಮಿಣಿ ವಸಂತ್ ರೀತಿ ಕಿರುಕುಳ ಅನುಭವಿಸಿದ್ದಾರೆ.
ಮಿಲಿಟರಿ ಆಫೀಸರ್ ಮಗಳಾಗಿ ಇಲ್ಲಿಯ ತನಕ ಸಭ್ಯವಾಗಿ ಕಾಣಿಸಿಕೊಂಡಿರೋ ಈ ಕ್ಲಾಸಿಕ್ ಬ್ಯೂಟಿ ರುಕ್ಮಿಣಿ ವಸಂತ್.. ದಿಢೀರ್ ಅಂತ ಬಿಕಿನಿಯಲ್ಲಿ ಅಂದಾಗ ಅವ್ರ ಅಭಿಮಾನಿಗಳಿಗಾಗಲಿ ಅಥ್ವಾ ಕನ್ನಡಿಗರಿಗಾಗಲಿ ಅರಗಿಸಿಕೊಳ್ಳೋಕೆ ಆಗಲ್ಲ. ಹಾಗಂತ ಅವರು ಬಿಕಿನಿ ಹಾಕಲೇಬಾರದು ಅನ್ನೋ ಯಾವ ರೂಲ್ ಕೂಡ ಇಲ್ಲ. ಬಣ್ಣದ ಲೋಕದಲ್ಲಿ ಪಾತ್ರಕ್ಕೆ ಜೀವ ತುಂಬುವ ಕಾರ್ಯ ಕಲಾವಿದರು ಮಾಡಬೇಕಾಗುತ್ತೆ. ಹಾಗಂತ ನೋಡಿದ್ರೆ ಕನ್ನಡದಲ್ಲಿ ಬ್ಲ್ಯಾಕ್ & ವೈಟ್ ಕಾಲದಲ್ಲೇ ಮೊಟ್ಟ ಮೊದಲ ಬಾರಿಗೆ ಸ್ವಿಮ್ ಸೂಟ್ ಧರಿಸಿದ ಮೊದಲ ನಟಿ ಅನಿಸಿಕೊಂಡವರು ಅಭಿನಯ ಶಾರದೆ ಜಯಂತಿ. ಸೋ.. ಈ ಕೃತ್ಯವನ್ನ ರುಕ್ಮಿಣಿ ಕಂಡಿಸುತ್ತಿದ್ದಾರೆ. ಸೃಷ್ಠಿಕರ್ತರಿಗೆ ಕಾದಿದೆ ಕಂಟಕ.
