ಕೆಜಿಎಫ್-1 ಮುಗಿಸಿ ಕಿರಾತಕ ಸೀಕ್ವೆಲ್‌ಗಾಗಿ ಲಾಂಗ್ ಹೇರ್ ಹಾಗೂ ಉದ್ದನೆಯ ಗಡ್ಡಕ್ಕೆ ಕತ್ತರಿ ಹಾಕಿದ್ದ ರಾಕಿಂಗ್ ಸ್ಟಾರ್ ಯಶ್, ಮತ್ತೆ ರಾಕಿಭಾಯ್ ಲುಕ್‌ಗೆ ಹಿಂತಿರುಗಿದ್ರು. ಆದ್ರೀಗ ಟಾಕ್ಸಿಕ್ ಟಿಕೆಟ್‌ಗಾಗಿ ವಿಂಟೇಜ್ ಲುಕ್‌ಗೆ ಮರಳಿದ್ದಾರೆ. ಗೂಗ್ಲಿ ಹೇರ್‌ಸ್ಟೈಲ್, ಕ್ಲೀನ್ ಶೇವ್ ಮಾಡ್ಕೊಂಡು ಕಿಕ್ ಕೊಡ್ತಿದ್ದಾರೆ ಯಶ್. ಈ ಲುಕ್ ಹಿಂದಿನ ಅಸಲಿ ಮಾಸ್ಟರ್ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.
ಟಾಕ್ಸಿಕ್ ‘ಟಿಕೆಟ್’ಗಾಗಿ ವಿಂಟೇಜ್ ಲುಕ್‌ಗೆ ಮರಳಿದ ಯಶ್
ನ್ಯೂ ಗೆಟಪ್ ಹಿಂದಿನ ಮಾಸ್ಟರ್ ಅಲೆಕ್ಸ್ ವಿಜಯ್ ಕಾಂತ್..!!
ರೀಸೆಂಟ್ ಆಗಿ ರಿಲೀಸ್ ಆದ ಟಾಕ್ಸಿಕ್ ಟೀಸರ್‌ನಲ್ಲಿ ಯಶ್ ಯಂಗೆಸ್ಟ್ ಯಶ್ ಆಗಿ ಕಾಣಿಸಿಕೊಂಡಿದ್ರು. ಆ ಕ್ಯಾರೆಕ್ಟರ್ ನೇಮ್ ಟಿಕೆಟ್ ಅನ್ನೋದನ್ನ ಕೂಡ ಖುದ್ದು ರಾಕಿಂಗ್ ಸ್ಟಾರ್ ಯಶ್ ಅವರೇ ರಿವೀಲ್ ಮಾಡಿದ್ರು. ಕಿಕ್ ಕೊಡೋ ಟ್ರೆಂಡಿ, ಯೂತ್‌ಫುಲ್ ಲುಕ್‌ಗೆ ಎಲ್ರೂ ಫಿದಾ ಆಗಿದ್ರು. ಆದ್ರೆ ಆ ಹೇರ್ ಸ್ಟೈಲ್ ಹಿಂದಿನ ಮಾಸ್ಟರ್ ಯಾರು ಅನ್ನೋದು ರಿವೀಲ್ ಆಗಿದೆ. ಆತ ಅಲೆಕ್ಸಾಂಡರ್ ವಿಜಯ್ ಕಾಂತ್. ಭಾರತದ ಫೇಮಸ್ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ವಿಜಯ್ ಕಾಂತ್, ಸೌತ್‌ನಿಂದ ಬಾಲಿವುಡ್‌ವರೆಗೆ ಬಹುತೇಕ ಎಲ್ಲಾ ಸ್ಟಾರ್ಸ್‌ಗೆ ಹೇರ್ ಡಿಸೈನ್ ಮಾಡ್ತಾರೆ. ಸದ್ಯ ಯಶ್ ಟಾಕ್ಸಿಕ್ ಲುಕ್ಸ್ ಹಿಂದಿನ ಮಾಸ್ಟರ್ ಕೂಡ ಇವರೇ.
ಅಂದಹಾಗೆ ಟಿಕೆಟ್ ಪಾತ್ರಕ್ಕಾಗಿ ಯಶ್ ಹೇಗೆಲ್ಲಾ ಲಾಂಗ್ ಹೇರ್ ಹಾಗೂ ಉದ್ದನೆಯ ಗಡ್ಡವನ್ನ ಕಟ್ ಮಾಡಿದ್ರು ಅನ್ನೋದ್ರ ಝಲಕ್ ಸಖತ್ ವೈರಲ್ ಆಗ್ತಿದೆ. ಅಂದಹಾಗೆ ಬರೀ ಟಿಕೆಟ್ ರೋಲ್‌ಗಾಗಿ ಮಾತ್ರ ವಿಜಯ್ ಕಾಂತ್ ಡಿಸೈನ್ ಮಾಡಿಲ್ಲ. ಟಾಕ್ಸಿಕ್ ಚಿತ್ರದ ಬಹುತೇಕ ಎಲ್ಲಾ ಲುಕ್ಸ್‌ಗೂ ಇವರದ್ದೇ ಕೈಚಳಕವಿದೆ.
KGF ನಂತ್ರ ಕಿರಾತಕ ಸೀಕ್ವೆಲ್.. KGF2 ನಂತ್ರ ಟಾಕ್ಸಿಕ್ ಕಿಕ್
ಗಡ್ಡ, ಲಾಂಗ್ ಹೇರ್ ಇಲ್ಲದೆ ಮಾಸ್ಕ್‌ಮ್ಯಾನ್ ಆಗಿದ್ದ ಯಶ್
ಕೆಜಿಎಫ್ ಮೊದಲ ಭಾಗದ ನಂತ್ರ ಕಿರಾತಕ ಸೀಕ್ವೆಲ್‌ಗಾಗಿ ಲುಕ್ ಬದಲಿಸಿದ್ರು ಯಶ್. ಆದ್ರೆ ಆ ಸಿನಿಮಾ ಕಾರಣಾಂತರಗಳಿಂದ ನಿಂತು ಹೋಯ್ತು. ಆದ್ರೀಗ ಮತ್ತೆ ರಾಕಿಭಾಯ್ ಖದರ್‌ಗೆ ಮರಳಿದ್ದ ಯಶ್, ಕೆಜಿಎಫ್-2 ಬಳಿಕ ಒನ್ಸ್ ಅಗೈನ್ ಲಾಂಗ್ ಹೇರ್, ಉದ್ದನೆಯ ಗಡ್ಡ ಕಳೆದುಕೊಂಡಿದ್ದಾರೆ.
ಈ ವಿಂಟೇಜ್ ಲುಕ್ ನೋಡಿ ಒಂದಷ್ಟು ಮಂದಿ ಗೂಗ್ಲಿ ಹೇರ್ ಸ್ಟೈಲ್‌ನಂತಿದೆ ಅಂತೆಲ್ಲಾ ಕಮೆಂಟ್ ಮಾಡ್ತಿದ್ದಾರೆ. ಅದೇನೇ ಇರಲಿ ಇಷ್ಟು ದಿನ ಯಶ್ ಮುಸುಕುಧಾರಿಯಾಗಿ ಓಡಾಡ್ತಾ ಇದ್ದಿದ್ದು ಇದೇ ಕಾರಣಕ್ಕೆ ಅನ್ನೋದು ಮಾತ್ರ ಪಕ್ಕಾ ಆಗಿದೆ.
