ಕಿಚ್ಚ-ದಚ್ಚು ರೀತಿ ಇದ್ದಂತಹ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ, ಸದ್ಯ ನಾನೊಂದು ತೀರಾ, ನೀನೊಂದು ತೀರಾ ಅನ್ನುವಂತಾಗಿದೆ. ಯೆಸ್.. ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡ್ತಿತ್ತು. ಆದ್ರೀಗ ಅದು ಖಾತರಿ ಆಗಿದೆ. ಅದನ್ನ ಸ್ವತಃ ಡಿವೈನ್ ಸ್ಟಾರ್ ರಿಷಬ್ ಅವರೇ ಅಂಥದ್ದೊಂದು ಹಿಂಟ್ ನೀಡಿದ್ದಾರೆ.
- ರಿಷಬ್-ರಾಜ್ ನಡುವೆ ಬಿರುಕು.. ಆಪ್ತಮಿತ್ರನನ್ನೇ ಮರೆತರೇಕೆ?
- 45 ಟ್ರೈಲರ್‌ಗೆ ರಿಷಬ್ ಪ್ರತಿಕ್ರಿಯೆ.. ರಾಜ್ ಹೆಸರೇಳದ ರಿಷಬ್
- ಕಾಂತಾರ ಚಿತ್ರದಲ್ಲಿದ್ದ ರಾಜ್ ಶೆಟ್ಟಿ ಕಾಂತಾರ ಚಾಪ್ಟರ್-1ಗೆ ಇಲ್ಲ
- ಶೆಟ್ರ ನಡುವೆ ಏನಾಯ್ತು..? ಅಂತೆ ಕಂತೆಗಳಿಗೆ ಈಗ ಸಿಕ್ತು ಪುಷ್ಠಿ..!
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ.. ಸದ್ಯ ಪರಭಾಷೆಗಳಲ್ಲೂ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ ಹೆಮ್ಮೆಯ ಕನ್ನಡದ ಕಲಾವಿದರುಗಳು. ಇವರು ಪ್ಯಾನ್ ಇಂಡಿಯಾ ತಲುಪೋಕೆ ಮೊದಲು ಕನ್ನಡಿಗರ ದಿಲ್ ದೋಚಿದವರು. ಮನೋಜ್ಞ ಅಭಿನಯ, ನಿರ್ದೇಶನ, ನಿರ್ಮಾಣ, ಬರವಣಿಗೆಗಳಿಂದ ಎಲ್ಲರ ಮನೆ, ಮನಗಳನ್ನ ತಲುಪಿದವರು. ಬರೀ ಸಿನಿಮಾದ ವಿಷಯಕ್ಕಷ್ಟೇ ಅಲ್ಲ, ಸ್ನೇಹ-ಸಂಬಂಧಗಳ ವಿಚಾರಕ್ಕೂ ಇವರು ಫೇಮಸ್ ಆದರು.
ಆದ್ರೀಗ ಕಾಂತಾರ ಚಾಪ್ಟರ್-1 ಚಿತ್ರದಿಂದ ಈಚೆಗೆ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ವೈಯಕ್ತಿಕ ವಿಚಾರಗಳಿಗಾಗಿ ಮನಸ್ತಾಪಗಳಿವೆ. ಒಬ್ಬರನ್ನೊಬ್ಬರು ಮಾತಾಡ್ತಿಲ್ಲ ಅನ್ನೋ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡ್ತಿವೆ. ಇನ್ ಫ್ಯಾಕ್ಟ್ ಕಾಂತಾರ-1 ರಿಲೀಸ್ ವೇಳೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ ಪ್ರಗತಿ ರಿಷಬ್ ಶೆಟ್ಟಿ, ರಾಜಣ್ಣನ ಕುರಿತು ಒಳ್ಳೆಯ ಮಾತುಗಳನ್ನೇ ಆಡಿದ್ರು.
ಕಾಂತಾರ ಚಿತ್ರದವರೆಗೂ ಚೆನ್ನಾಗಿದ್ದ ರಿಷಬ್-ರಾಜ್ ಆಪ್ತಮಿತ್ರರ ನಡುವೆ ದೊಡ್ಡದೊಂದು ಕಂದಕ ಉಂಟಾಗಿದೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡುವಂತೆ ಸ್ವತಃ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯೇ ಮಾತನಾಡಿದ್ದಾರೆ. ಇತ್ತೀಚೆಗೆ 45 ಚಿತ್ರದ ಟ್ರೈಲರ್ ವೀಕ್ಷಿಸಿದ ರಿಷಬ್, ನಂತ್ರ ಆ ಬಗ್ಗೆ ಪ್ರತಿಕ್ರಿಯಿಸಿದ್ದು, ಶಿವಣ್ಣ-ಉಪೇಂದ್ರ ಬಗ್ಗೆ ಮಾತ್ರ ಪ್ರಸ್ತಾಪ ಮಾಡಿ, ರಾಜ್ ಶೆಟ್ಟಿ ಅವರ ಹೆಸರನ್ನ ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿರೋದು ಎದ್ದು ಕಾಣ್ತಿದೆ.
ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿನ ಶಿವ-ಹರಿ ಇದೀಗ ಉತ್ತರ ಧ್ರುವ, ದಕ್ಷಿಣ ಧ್ರುವ ಅಂತ ದೂರವಾಗಿದ್ದಾರೆ. ಕಾಂತಾರ ಚಿತ್ರದ ಪಂಜುರ್ಲಿ ದೈವದ ಸೀನ್‌ಗಳನ್ನ ಸ್ವತಃ ರಾಜ್ ಬಿ ಶೆಟ್ಟಿ ಅವರೇ ನಿರ್ದೇಶಿಸಿದ್ದನ್ನ ರಿಷಬ್ ಕೂಡ ಹೇಳಿಕೊಂಡಿದ್ರು. ಆದ್ರೀಗ ಇವರಿಬ್ಬರ ನಡುವೆ ಬಿರುಕು ಉಂಟಾಗೋಕೆ ಅಸಲಿ ಕಾರಣ ಏನು ಅನ್ನೋದು ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಒಂದಷ್ಟು ಮಂದಿ ಅದು ಪ್ರೊಫೆಷನಲ್ ಜಲಸಿ ಅಂತಿದ್ದಾರೆ. ಆದ್ರೆ ಅಸಲಿ ರೀಸನ್ ಸ್ವತಃ ಅವರೇ ಬಹಿರಂಗಪಡಿಸಬೇಕಿದೆ.
ಇಬ್ಬರು ಟ್ಯಾಲೆಂಟೆಡ್ ಆ್ಯಕ್ಟರ್ ಕಮ್ ಡೈರೆಕ್ಟರ್ಸ್ ಹೀಗೆ ದಿವೈಡ್ ಆಗೋದ್ರಿಂದ ಚಿತ್ರರಂಗಕ್ಕೆ ಲಾಭಕ್ಕಿಂತ ಲಾಸ್ ಜಾಸ್ತಿ. ಹಾಗಾಗಿ ಇವರಿಬ್ಬರ ನಡುವೆ ಏನೇ ವೈಮನಸ್ಸು ಇರಲಿ. ಅದು ಬೇಗ ಶಮನವಾಗಿ ಜೊತೆಯಾಗಲಿ ಅನ್ನೋದಷ್ಟೇ ನಮ್ಮ ಆಶಯ. ಅದು ಅವರಿಗೂ ಒಳ್ಳೆಯದು, ಚಿತ್ರರಂಗಕ್ಕೂ ಹಿತ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
