ಸಿಎಂ ಡಿಕೆಶಿ ಜೊತೆ ಶೆಟ್ರು..ಸರ್ಕಾರಕ್ಕೆ ರಿಷಬ್ ಶೆಟ್ಟಿ ಸಾಥ್

ಬ್ರ್ಯಾಂಡ್ ಅಂಬಾಸಿಡರ್ ಆಗಲಿರೋ ಡಿವೈನ್ ಸ್ಟಾರ್ ರಿಷಬ್

Untitled design 2026 06 23T162955.510

ರಾಹುಲ್ ಗಾಂಧಿ ಬಗ್ಗೆ ಕೇಳಿದ್ದಕ್ಕೆ ನೋ ಕಮೆಂಟ್ಸ್ ಎಂದಿದ್ದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಇದೀಗ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಜೊತೆ ಕೈ ಜೋಡಿಸಿರೋದು ಅಚ್ಚರಿ ತಂದಿದೆ. ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಅಂದವ್ರ ಜೊತೆಗೇ ಶೆಟ್ರು ಹೆಜ್ಜೆ ಹಾಕ್ತಿರೋದು ಕುತೂಹಲ. ಕಾಂತಾರ ಚಿತ್ರಗಳಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿರೋ ಶೆಟ್ರಿಗೆ ರಾಜಕೀಯ ಪಕ್ಷಗಳು ಗಾಳ ಹಾಕ್ತಿರೋ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಕಾಂತಾರ ಹಾಗೂ ಕಾಂತಾರ-1 ಚಿತ್ರಗಳ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ನೇಮು-ಫೇಮು ವಿಶ್ವದ ಮೂಲೆ ಮೂಲೆಗೂ ತಲುಪುವಂತಾಯ್ತು. ಸದ್ಯ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಕಮಿಟ್ ಆಗಿರೋ ಶೆಟ್ರನ್ನ ರಾಜಕೀಯ ಪಕ್ಷಗಳು ಸೆಳೆಯಲು ನಾನಾ ಪ್ರಯತ್ನಗಳನ್ನ ಮಾಡ್ತಿವೆ. ಒಂದ್ಕಡೆ ಬಿಜೆಪಿ ವರಿಷ್ಠರುಗಳು ಅವ್ರನ್ನ ಬಿಜೆಪಿ ಪಕ್ಷಕ್ಕೆ ಕರೆತರಲು ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಶೆಟ್ರನ್ನ ಡೆಲ್ಲಿಗೆ ಕರೆಸಿ ದೀರ್ಘ ಸಮಾಲೋಚನೆ ನಡೆಸಿದ್ರು ಹೋಮ್ ಮಿನಿಸ್ಟರ್ ಅಮಿತ್ ಶಾ.

ಇದೀಗ ಜೈ ಹನುಮಾನ್ ಸಿನಿಮಾದ ಶೂಟಿಂಗ್ ನಡುವೆ ನಮ್ಮ ಸಿಎಂ ಡಿ. ಕೆ. ಶಿವಕುಮಾರ್ ನಟ ರಿಷಬ್ ಶೆಟ್ಟಿಯವರನ್ನ ಕರಾವಳಿ ಭಾಗಕ್ಕೆ ರಾಯಭಾರಿ ಮಾಡಲು ಮುಂದಾಗಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಮಾಧ್ಯಮದವರ ಕೇಳಿದ ಪ್ರಶ್ನೆಗೆ ನೋ ಕಮೆಂಟ್ಸ್ ಎಂದಿದ್ದ ರಿಷಬ್, ಇದೀಗ ಡಿಕೆಶಿ ಕರೆಗೆ ಓಗೊಟ್ಟು, ಅವರೊಟ್ಟಿಗೆ ಕೈ ಜೋಡಿಸ್ತಿರೋದು ಇಂಟರೆಸ್ಟಿಂಗ್. ಇತ್ತೀಚೆಗೆ ವಿಧಾನಸೌಧಕ್ಕೆ ನಟ ರಿಷಬ್ ಶೆಟ್ರನ್ನ ಕರೆಸಿ ಒಂದು ದೊಡ್ಡ ಮೀಟಿಂಗ್ ಕೂಡ ನಡೆಸಿದ್ರು ಸಿಎಂ ಡಿಕೆ ಶಿವಕುಮಾರ್.

ಕರಾವವಳಿಯಲ್ಲಿ ಕ್ಯಾಬೆನೆಟ್‌ ಕೂಡ ನಡೆಸಲು ಯೋಜನೆ ರೂಪಿಸ್ತಿದ್ದಾರೆ ಸಿಎಂ. ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜೊತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಲು ಸೂಚಿಸಿದ್ದಾರೆ ಸಿಎಂ. ಸದ್ಯ ಅನುಮೋದಿಸಿರುವ 45 ಯೋಜನೆಗಳಿಂದ 4500 ಉದ್ಯೋಗ ಸೃಷ್ಟಿಯಾಗುತ್ತದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು. ಅತಿ ಉದ್ದದ ಸಮುದ್ರ ತೀರಗಳು ಇರುವ ಪ್ರದೇಶಗಳಿಗೆ ರಾಜ್ಯದ ಕರಾವಳಿಯೂ ಸೇರಿದೆ. ನಮ್ಮ ಪರಿಸರಕ್ಕೆ ಧಕ್ಕೆ ಆಗದಂತೆ ಸಮುದ್ರ ತೀರಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ  ಪರಿಗಣಿಸಲು ಸೂಚಿಸಿದ್ರು.

ಕಲೆಗೆ ಪ್ರಾಶಸ್ತ್ಯ ಹೆಚ್ಚಿಸಬೇಕು ಎಂದ ಡಿವೈನ್ ಸ್ಟಾರ್ ರಿಷಬ್, ಕರಾವಳಿಯ ಜಾನಪದ ಕಲೆ ಹಾಗೂ ಸಂಗೀತಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವುದರಿಂದ ಕೇರಳ-ಗೋವಾ-ಕರ್ನಾಟಕದ ಸಿನಿಮಾ ಜಗತ್ತಿಗೆ ಹೆಚ್ಚು ಅನುಕೂಲವಾಗಲಿದೆ ಅಂತ ಅಭಿಪ್ರಾಯ ಪಟ್ಟರು ರಿಷಬ್‌ ಶೆಟ್ಟಿ. ಬೃಹತ್‌ ಪ್ರವಾಸೋದ್ಯಮ ಯೋಜನೆಗಳು, ಅದರಡಿ ಕರಾವಳಿ ಮೇಳಗಳು, ಉತ್ಸವವಗಳು ಮತ್ತು ಮಾರ್ಕೆಟಿಂಗ್‌ ಸೇರಿದಂತೆ ಕರಾವಳಿಯ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮತ್ತು ಪ್ರಚಾರ ಮಾಡುವುದರ ಬಗ್ಗೆ ಚರ್ಚಿಸಲಾಯಿತು.

ಕರಾವಳಿ ಟೂರಿಸಂ ಹಾಗೂ ಕಲೆಗೆ ಪ್ರೋತ್ಸಾಹ ನೀಡಲು ಸಿಎಂ ಕೈಗೊಂಡಿರೋ ನಿರ್ಣಯಗಳಿಗೆ ರಿಷಬ್ ಶೆಟ್ಟಿ ಸಾಥ್ ನೀಡೋದಾಗಿ ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರೆ. ಸೋ.. ಶೆಟ್ರನ್ನ ಸದ್ಯದಲ್ಲೇ ಕರಾವಳಿ ಟೂರಿಸಂ ಹಾಗೂ ಆರ್ಟ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಮಾಡಲಿದೆ ಕರ್ನಾಟಕ ಸರ್ಕಾರ. ಒಂದ್ಕಡೆ ಬಿಜೆಪಿ, ಮತ್ತೊಂದ್ಕಡೆ ಕಾಂಗ್ರೆಸ್.. ಒಟ್ಟಾರೆ ಶೆಟ್ರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರೋದಂತೂ ಗ್ಯಾರಂಟಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version