ನ್ಯಾಚುರಲ್ ಸ್ಟಾರ್ ನಾನಿ ಅಂದ್ರೆನೆ ಫ್ಯಾಮಿಲಿ ಆಡಿಯನ್ಸ್ ಫೇವರೆಟ್. ಬಾಯ್ ನೆಕ್ಸ್ಟ್ ಡೋರ್ ಕ್ಯಾರೆಕ್ಟರ್‌ಗಳಿಂದಲೇ ಮಿಂಚುತ್ತಿದ್ದ ನಾನಿ, ಈ ಬಾರಿ ‘ದಿ ಪ್ಯಾರಡೈಸ್’ ಅಂತ ರಗಡ್, ಶರ್ಟ್‌ಲೆಸ್ ಅವತಾರದಲ್ಲಿ ಬಂದು ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ.ಆದ್ರೆ ‘ಪ್ಯಾರಡೈಸ್’ಗೆ ಟ್ರೋಲ್ಸ್ ಕಾಟ ತಪ್ಪಿಲ್ಲ. ಹೀಗಾಗಿ ನಾನಿ ಕೊಟ್ಟ ಪವರ್‌ಫುಲ್ ರಿಯಾಕ್ಷನ್ ಈಗ ಟಾಲಿವುಡ್‌ನಲ್ಲಿ ಸಖತ್ ವೈರಲ್ ಆಗ್ತಿದೆ. ಹಾಗಾದ್ರೆ ಟ್ರೋಲರ್ಸ್ ಗೆ ನಾನಿ ಕೊಟ್ಟ ಎಮೋಷನಲ್ ಕೌಂಟರ್ ಏನು..? ಇಲ್ಲಿದೆ ನೋಡಿ….
- ಪ್ಯಾರಡೈಸ್ ಡಿಸಾಸ್ಟರ್..ಟೀಕೆಗಳಿಗೆ ನಾನಿ ಎಮೋಷನಲ್ ರಿಯಾಕ್ಷನ್
- ‘ದಿ ಪ್ಯಾರಡೈಸ್’ಗೆ ಟ್ರೋಲ್ಸ್ ಕಾಟ.. ಟೀಕೆಯಿಂದ ಪಾಠ ಕಲಿತ ನಾನಿ
- ‘ಪ್ಯಾರಡೈಸ್’ ಟ್ರೋಲ್ಸ್ನ ಎಂಜಾಯ್ ಮಾಡಿದ ನಾನಿ..!
- ವೈಲೆನ್ಸ್ ಬಗ್ಗೆ ನೆಟ್ಟಿಗರ ತಕರಾರು ‘ಪ್ಯಾರಡೈಸ್’ ಬಗ್ಗೆ ಮಿಕ್ಸ್ಡ್ ರೆಸ್ಪಾನ್ಸ್
ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳಿಂದ ಕ್ರೇಜ್ ಗಿಟ್ಟಿಸಿಕೊಂಡಿದ್ದ ನಾನಿ, ಶ್ರೀಕಾಂತ್ ಒಡೆಲ ನಿರ್ದೇಶನದ ‘ದಿ ಪ್ಯಾರಡೈಸ್’ ಚಿತ್ರದಲ್ಲಿ ‘ಜಾದಲ್’ ಅನ್ನೋ ರಗಡ್ ಪಾತ್ರದಲ್ಲಿ ಧೂಳೆಬ್ಬಿಸಿದ್ದಾರೆ. 1980ರ ಸಿಕಂದರಾಬಾದ್ ಹಿನ್ನೆಲೆಯ ಹೈ-ವೋಲ್ಟೇಜ್ ಆಕ್ಷನ್ ಕಥೆಯಲ್ಲಿ, ಎರಡು ಜಡೆ, ಶರ್ಟ್‌ಲೆಸ್ ಮಾಸ್ ಲುಕ್‌ನಲ್ಲಿ ನಾನಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಪಕ್ಕಾ ಪೈಸಾ ವಸೂಲ್ ಎನಿಸಿದೆ. ಅನಿರುದ್ಧ್ ರವಿಚಂದರ್ ಅವರ ಮ್ಯೂಸಿಕ್ ಹಾಗೂ ಆಕ್ಷನ್ ಸೀನ್‌ಗಳಿಗೆ ಥಿಯೇಟರ್‌ನಲ್ಲಿ ಮಾಸ್ ಆಡಿಯನ್ಸ್ ಸೀಟಿ ಹೊಡೆಯುತ್ತಿದ್ದಾರೆ.
ಆದರೆ ಸಿನಿಮಾ ರಿಲೀಸ್ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಕಮೆಂಟ್ಸ್ ಮತ್ತು ಟ್ರೋಲ್ಸ್ ಪ್ರವಾಹವೇ ಹರಿದುಬಂದಿದೆ. ಮೊದಲ ಭಾಗ ಸಖತ್ ಆಗಿದ್ದರೂ, ಸೆಕೆಂಡ್ ಹಾಫ್ ಬೋರ್, ಬಿಜಿಎಂ ಓವರ್, ವೈಲೆನ್ಸ್ ಜಾಸ್ತಿ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೌಟುಂಬಿಕ ಪ್ರೇಕ್ಷಕರಿಗೆ ನಾನಿ ಅವರ ಈ ತೀವ್ರ ಮಟ್ಟದ ವೈಲೆನ್ಸ್ ಅವತಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದ್ದು, ಟ್ವಿಟರ್ ನಲ್ಲಿ ಸಿನಿಮಾ ಬಗ್ಗೆ ಪರ-ವಿರೋಧ ಚರ್ಚೆಗಳು ಜೋರಾಗಿವೆ.
ಸಾಮಾನ್ಯವಾಗಿ ಸಣ್ಣ ಟೀಕೆ ಬಂದರೂ ಗರಂ ಆಗುವ ಚಿತ್ರರಂಗದ ಮಧ್ಯೆ, ನಾನಿ ಮಾತ್ರ ತಮ್ಮ ಸಹಜ ಶೈಲಿಯಲ್ಲೇ ಟೀಕೆಗಳಿಗೆ ತಣ್ಣನೆಯ ಕೌಂಟರ್ ಕೊಟ್ಟಿದ್ದಾರೆ. ಬಂದಿರುವ ಎಲ್ಲ ವಿಮರ್ಶೆಗಳನ್ನು ಸ್ವೀಕರಿಸಿರುವ ನಾನಿ, ನನ್ನ ಮೇಲಿನ ಪ್ರೀತಿಯಿಂದ ಬಂದ ಮೀಮ್‌ಗಳು ಮತ್ತು ಹಾಸ್ಯಮಯ ಟ್ರೋಲ್‌ಗಳನ್ನು ನಾನು ಎಂಜಾಯ್ ಮಾಡಿದ್ದೇನೆ, ಪ್ರೇಕ್ಷಕರ ವಿಮರ್ಶೆಯಿಂದ ಹೊಸ ಪಾಠ ಕಲಿತಿದ್ದೇನೆ ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ನಾನಿ ಅವರ ಈ ಸ್ಪೋರ್ಟಿವ್ ಉತ್ತರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಬ್ಲಾಕ್‌ಬಸ್ಟರ್ ನಿರ್ದೇಶಕ ಶ್ರೀಕಾಂತ್ ಒಡೆಲ ಜೊತೆಗಿನ ಈ ಸಾಹಸದ ತೀರ್ಪನ್ನು ಈಗ ಪ್ರೇಕ್ಷಕರ ಅಂಗಳಕ್ಕೇ ಬಿಟ್ಟಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
