ರಿಷಬ್ ಶೆಟ್ಟಿಯ ಬಹುನಿರೀಕ್ಷಿತ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಶೂಟಿಂಗ್ ಆರಂಭಕ್ಕೂ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಯೆಸ್.. ತಂಡಕ್ಕೆ ಒಬ್ಬೊಬ್ಬರೇ ಕಲಾವಿದರು ಆ್ಯಡ್ ಆನ್ ಆಗ್ತಿದ್ದು, ಸದ್ಯ ವೀರ ವನಿತೆ ಬೆಳವಾಡಿ ಮಲ್ಲಮ್ಮನ ಪಾತ್ರಕ್ಕೊಬ್ಬ ಖಡಕ್ ಲೇಡಿ ಬಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇಷ್ಟಕ್ಕೂ ಯಾರದು..? ಶಿವಾಜಿ ಮಹಾರಾಜಗೂ ಆಕೆಗೂ ಏನು ಸಂಬಂಧ..? ಇಲ್ಲಿದೆ ಐತಿಹಾಸಿಕ ಇಂಟರೆಸ್ಟಿಂಗ್ ಸ್ಟೋರಿ.
- ‘ಛತ್ರಪತಿ’ ರಿಷಬ್ v/s ಬೆಳವಾಡಿ ಮಲ್ಲಮ್ಮ.. ಸಮರಕ್ಕೆ ಸಿದ್ದ
- ವೀರ ರಾಣಿ ಮಲ್ಲಮ್ಮ-ಶಿವಾಜಿ ಮಹಾರಾಜ ನಡುವೆ ಯುದ್ಧ
- ಟಾಕ್ ಆಫ್ ದಿ ಟೌನ್ ಆದ ಬಿಟೌನ್ ಭೂಮಿ ಪಡ್ನೇಕರ್
- ಶೂಟಿಂಗ್ಗೂ ಮೊದ್ಲೇ ರಿಷಬ್ ಶೆಟ್ಟಿ ಚಿತ್ರ ಸಖತ್ ಸೆನ್ಸೇಷನ್
ಮರಾಠ ಸಾಮ್ರಾಜ್ಯದ ಸಂಸ್ಥಾಪಕ, ದಕ್ಷ ಆಡಳಿತಗಾರ, ಸುಪ್ರಸಿದ್ಧ ವೀರ ಛತ್ರಪತಿ ಶಿವಾಜಿ ಮಹಾರಾಜ ಕುರಿತು ಈಗಾಗ್ಲೇ ಸಾಲು ಸಾಲು ಸಿನಿಮಾಗಳು, ಸೀರೀಸ್‌ಗಳು ಬಂದಿವೆ. ಆದ್ರೂ ಸಹ ಆತನ ಮೇಲಿನ ಕ್ರೇಜ್ ಕಿಂಚಿತ್ತೂ ಕಮ್ಮಿ ಆಗಿಲ್ಲ. ಐತಿಹಾಸಿಕ ಪುಟಗಳಲ್ಲಿ ರಾರಾಜಿಸಿದ ಶಿವಾಜಿ, ಎಂತಹ ಮಹಾನ್ ಸಾಮ್ರಾಟ..? ಆತ ಎಂತಹ ವೀರ ಪರಾಕ್ರಮಿ..? ಮೊಘಲರು ಹಾಗೂ ಬಿಜಾಪುರ ಸುಲ್ತಾನರ ವಿರುದ್ಧ ನಡೆಸಿದ ಯುದ್ಧಗಳು ಎಂಥದ್ದು..? ಹಿಂದವೀ ಸ್ವರಾಜ್ಯ ಕಟ್ಟಿ ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದು ಹೇಗೆ..? ಹಿಂದೂ ಧರ್ಮವನ್ನ ಸಂರಕ್ಷಿಸೋಕೆ ಆತ ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ.
ಇತ್ತೀಚೆಗೆ ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ನಟಿಸಿ, ನಿರ್ದೇಶಿಸಿದ ರಾಜಾ ಶಿವಾಜಿ ಸಿನಿಮಾ ತೆರೆಕಂಡಿತ್ತು. ಅದ್ರ ಬೆನ್ನಲ್ಲೀಗ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸೆಟ್ಟೇರೋಕೆ ಸಜ್ಜಾಗಿದೆ. ಸಂದೀಪ್ ಸಿಂಗ್ ಆ್ಯಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾದಲ್ಲಿ ಶಿವಾಜಿ ಪಾತ್ರದಲ್ಲಿ ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಬ್ಬರಿಸಿ, ಆರ್ಭಟಿಸಲಿದ್ದಾರೆ. ಈಗಾಗ್ಲೇ ಮೊಘಲ್ ಸಾಮ್ರಾಟ ಔರಂಗಾಜೇಬ್ ಪಾತ್ರಕ್ಕೆ ವಿವೇಕ್ ಒಬೇರಾಯ್ ಆಯ್ಕೆಯಾಗಿದ್ದು, ಮತ್ತೊಂದು ಪ್ರಮುಖ ಪಾತ್ರಕ್ಕೆ ನಾಯಕನಟಿ ಫೈನಲ್ ಆಗಿದ್ದಾರೆ.
ಯೆಸ್.. ನಮ್ಮ ಬೆಳಗಾವಿ ಮೂಲದ ವೀರ ರಾಣಿ ಬೆಳವಾಡಿಯ ಮಲ್ಲಮ್ಮನ ಪಾತ್ರಕ್ಕಾಗಿ ಬಾಲಿವುಡ್ ನಟಿಮಣಿ ಭೂಮಿ ಪಡ್ನೇಕರ್ ಆಯ್ಕೆ ಆಗಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸಂಚಲನ ಮೂಡಿಸಿದೆ. ಇನ್ನೂ ಸಿನಿಮಾ ಶೂಟಿಂಗ್ ಆರಂಭಕ್ಕೂ ಮೊದ್ಲೇ ಪಾತ್ರವರ್ಗದಿಂದ ಒಂದು ಸಿನಿಮಾ ಈ ಪಾಟಿ ಸೌಂಡ್ ಮಾಡ್ತಿರೋದು ಇಂಟರೆಸ್ಟಿಂಗ್. ಅಂದಹಾಗೆ ಈ ಸಿನಿಮಾ ಬರೋಬ್ಬರಿ 500ಕೋಟಿಗೂ ರೂಪಾಯಿಗೂ ಬಿಗ್ ಬಜೆಟ್‌ನಲ್ಲಿ ತಯಾರಾಗಲಿದೆ. ಒಂದಲ್ಲ ಎರಡೆರಡು ಭಾಗಗಳಲ್ಲಿ 2028 ಹಾಗೂ 2029ಕ್ಕೆ ಈ ಚಿತ್ರ ತೆರೆಗಪ್ಪಳಿಸಲಿದೆಯಂತೆ.
ಅಂದಹಾಗೆ ಭೂಮಿ ಪಡ್ನೇಕರ್ ಬಣ್ಣ ಹಚ್ಚುತ್ತಿರೋ ಬೆಳವಾಡಿ ಮಲ್ಲಮ್ಮನಿಗೂ ಶಿವಾಜಿ ಮಹಾರಾಜಗೂ ಏನು ಸಂಬಂಧ ಅಂತ ನೀವು ಕೇಳಬಹುದು. ಅದಕ್ಕೆ ಉತ್ತರ ಯುದ್ಧ. ಹೌದು.. ಬೆಳವಾಡಿಯ ಮಹಾರಾಜ ಈಶಪ್ರಭುವಿನ ಮಹಾರಾಣಿಯಾಗಿದ್ದ ಮಲ್ಲಮ್ಮ, ಮರಾಠರ ಜೊತೆ ನಡೆದ ಸಮರದಲ್ಲಿ ತನ್ನ ಪತಿ ಮರಣದ ನಂತರವೂ ವೀರಾವೇಶದಿಂದ ಹೋರಾಡುತ್ತಾರೆ. ತಮ್ಮ ರಾಜ್ಯದ ರಕ್ಷಣೆಗಾಗಿ ಮಹಿಳಾ ಸೈನ್ಯ ಕಟ್ಟಿ ನಿರಂತರವಾಗಿ ಹೋರಾಟ ನಡೆಸ್ತಾರೆ ಮಲ್ಲಮ್ಮ. ಆಕೆಯ ಸಾಹಸ ಹಾಗೂ ಶೌರ್ಯ ಮೆಚ್ಚಿ, ಖುದ್ದು ಶಿವಾಜಿ ಮಹಾರಾಜ ಯುದ್ಧವನ್ನ ನಿಲ್ಲಿಸಿ, ಅವ್ರನ ಬಹಳ ಗೌರವದಿಂದ ಕಾಣುತ್ತಾರೆ. ಅದಕ್ಕೆ ಯದ್ವಾಡ ಗ್ರಾಮದ ಹನುಮನ ಆಲಯದಲ್ಲಿ ಶಿವಾಜಿ-ಮಲ್ಲಮ್ಮನ ಶಿಲ್ಪಕಲೆ ಇಂದಿಗೂ ಸಾಕ್ಷಿಯಾಗಿದೆ. ಒಟ್ಟಾರೆ ರಿಷಬ್ ಶೆಟ್ಟಿ ಜೊತೆ ವೆರಿ ಟ್ಯಾಲೆಂಟೆಡ್ ನಟಿ ಭೂಮಿ ಪಡ್ನೇಕರ್ ಯುದ್ಧಭೂಮಿಯಲ್ಲಿ ಸೆಣಸಾಡುವ ದೃಶ್ಯ ವೈಭವಕ್ಕೆ ಮುನ್ನುಡಿ ಬರೆದಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
