ಐಷಾರಾಮಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್‌!

Film (14)

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಗೆಹೊಸ ಅತಿಥಿ ಆಗಮನವಾಗಿದೆ.  ಟೊಯೋಟಾ ಕಂಪನಿಯ ಕಪ್ಪು ಬಣ್ಣದ ವೆಲ್ಫೈರ್ ಕಾರನ್ನು ಖರೀದಿಸಿದ್ದಾರೆ.

ಟೊಯೋಟಾ ವೆಲ್ಫೈರ್ ಕಾರಿನ ಎಕ್ಸ್-ಶೋರೂಂ ಬೆಲೆ 1ಕೋಟಿ 22 ಲಕ್ಷ ರೂಪಾಯಿಯಿಂದ 1ಕೋಟಿ 32ಲಕ್ಷ ರೂಪಾಯಿಗಳ ನಡುವೆ ಇದೆ. ಆದರೆ, ರಸ್ತೆ ತೆರಿಗೆ ಮತ್ತು ಇತರ ಶುಲ್ಕಗಳೊಂದಿಗೆ ಈ ಕಾರಿನ ಒಟ್ಟಾರೆ ಬೆಲೆ 1 ಕೋಟಿ 40 ಲಕ್ಷ ರೂಪಾಯಿ ಎನ್ನಲಾಗಿದೆ. ಈ ಐಷಾರಾಮಿ ಕಾರು ತನ್ನ ಆಕರ್ಷಕ ವಿನ್ಯಾಸ, ಉನ್ನತ ತಂತ್ರಜ್ಞಾನ ಮತ್ತು ಸೌಕರ್ಯದಿಂದಾಗಿ ಗಮನ ಸೆಳೆಯುತ್ತದೆ.

ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ 1’ ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಅವರು ಮಂಗಳೂರಿನ ಪಂಜುರ್ಲಿ ದೈವದ ವಾರ್ಷಿಕ ಉತ್ಸವದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೈವದ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಂಡ ರಿಷಬ್‌ಗೆ, ಪಂಜುರ್ಲಿ ದೈವವು ವಿಶೇಷ ಅಭಯವನ್ನು ನೀಡಿತ್ತು.

ದೈವದ ಮಾತಿನ ಪ್ರಕಾರ, “ನಿನಗೆ ಜಗತ್ತಿನೆಲ್ಲೆಡೆ ದುಶ್ಮನ್‌ಗಳಿದ್ದಾರೆ. ನಿನ್ನ ಸಿನಿಮಾ ಎಂಬ ಸಂಸಾರವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಸಂಚು ರೂಪಿಸಲಾಗಿದೆ. ಆದರೆ, ನೀನು ನಂಬಿದ ದೈವ ಕೈಬಿಡಲ್ಲ. ನನಗೆ ಸೇವೆ ನೀಡು, 5 ತಿಂಗಳಲ್ಲಿ ಒಳ್ಳೆದು ಮಾಡುತ್ತೇನೆ,” ಎಂದು ಭರವಸೆ ನೀಡಿತ್ತು.

ರಿಷಬ್ ಶೆಟ್ಟಿಯ ‘ಕಾಂತಾರ’ ಸಿನಿಮಾವು ಭಾರತೀಯ ಚಿತ್ರರಂಗದಲ್ಲಿ ದಾಖಲೆಯ ಯಶಸ್ಸನ್ನು ಕಂಡಿತ್ತು. ಈಗ ಅವರ ಈ ಐಷಾರಾಮಿ ಖರೀದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಯಶಸ್ಸನ್ನು ಶ್ಲಾಘಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಿಷಬ್ ಶೆಟ್ಟಿಯಿಂದ ಇನ್ನಷ್ಟು ಯಶಸ್ವಿ ಸಿನಿಮಾಗಳು ಮತ್ತು ದೊಡ್ಡ ಸಾಧನೆಗಳನ್ನು ಅಭಿಮಾನಿಗಳು ಎದುರುನೋಡುತ್ತಿದ್ದಾರೆ.

Exit mobile version