ಗುರು ರಾಯರ ಮಹಿಮೆ ಸಾರುವ ‘ರಾಯರ ದರ್ಶನ’..!

ಬಿಡುಗಡೆಯಾಯ್ತು TNIT ಅವಾರ್ಡ್ಸ್ ನ್ಯೂ ಲೋಗೋ

Untitled design 2026 05 22T225724.928

ಕಲಿಯುಗದ ಕಲ್ಪವೃಕ್ಷ ಮಂತ್ರಾಲಯದ ಗುರು ರಾಯರ ಮಹಿಮೆ ಸಾರುವ ರಾಯರ ದರ್ಶನ ಆಲ್ಬಮ್ ಸಾಂಗ್ ರಿಲೀಸ್ ಆಗೋದ್ರ ಜೊತೆಗೆ ಸೌತ್ ಇಂಡಿಯಾದ ಪ್ರತಿಷ್ಠಿತ ‘TNIT ಅಕಾಡೆಮಿ’ಯ ಬ್ರ್ಯಾಂಡ್ ನ್ಯೂ ಲೋಗೋ ಲಾಂಚ್ ಆಗಿದೆ. TNIT ಅವಾರ್ಡ್ಸ್ ಫಂಕ್ಷನ್‌ಗೆ ಈಗಿನಿಂದಲೇ ಕೌಂಟ್‌ಡೌನ್ ಶುರುವಾಗಿದ್ದು, ಮಂತ್ರಾಲಯದಲ್ಲಿ ಜೂನ್ 20ಕ್ಕೆ ನಡೆಯಲಿರೋ ಆ ಬಿಗ್ ರಿಲೀಸ್ ಪ್ಲ್ಯಾನ್ ಏನು..? ಇಲ್ಲಿದೆ ನೋಡಿ.

ಗುರು ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಸಾರುವ ‘ರಾಯರ ದರ್ಶನ’ ಆಲ್ಬಮ್ ಸಾಂಗ್ ಸದ್ದಿಲ್ಲದೆ ಸಿದ್ದವಾಗಿದ್ದು, ಗಾಂಧಿನಗರದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ಹಾಡಿನ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಲ್‌ವುಡ್ ತಾರೆ ತಾರಾ ಅನುರಾಧಾ ಹಾಗೂ ಕಾಂತಾರ ಖ್ಯಾತಿಯ ಸಿಂಗರ್ ಆ್ಯಬಿ,ಅಜನೀಶ್ ಲೋಕನಾಥ್,ಸಿ.ಆರ್. ಬಾಬಿ ಗಣೇಶ್ ಕಾಸರಗೋಡು ಭಾಗವಹಿಸಿದ್ದರು. ರಾಯರ ಭಕ್ತರಾಗಿರುವ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಹಾಗೂ ಬಾಬಿ ಅವರ ಜಂಟಿ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದ್ದು, ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ.

ಇನ್ನು ಮಂತ್ರಾಲಯದ ಶ್ರೀನಿಧಿ ಕರನಂ ಅವರ ಸಮ್ಮುಖದಲ್ಲಿ ನಡೆದ ಈ ಈವೆಂಟ್‌ನ ಹೈಲೈಟ್ ಅಂದರೆ, ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಿರುವ ಪ್ರತಿಷ್ಠಿತ ‘ದಿ ನ್ಯೂ ಇಂಡಿಯನ್ ಟೈಮ್ಸ್’ ಅಕಾಡೆಮಿಯ ಭರ್ಜರಿ ಹೊಸ ಲೋಗೋ ಲಾಂಚ್ ಮಾಡಲಾಗಿದೆ. ಕಳೆದ 8 ವರ್ಷಗಳಿಂದ ಕರ್ನಾಟಕದ ಮೀಡಿಯಾ ಮಿತ್ರರಿಗೆ ಹಾಗೂ ಕಳೆದ ಎರಡು ವರ್ಷಗಳಿಂದ ಇಡೀ ಸೌತ್ ಇಂಡಿಯಾ ಮಟ್ಟದಲ್ಲಿ ಅವಾರ್ಡ್ಸ್ ನೀಡಿ ಸನ್ಮಾನಿಸುತ್ತಿರುವ TNIT, ಈ ಬಾರಿ ಮತ್ತಷ್ಟು ರಂಗಾಗಿ ಬರಲು ರೆಡಿಯಾಗಿದೆ. ​ನಿರ್ದೇಶಕ ರಘು ಭಟ್ ಹಾಗೂ ನಿರ್ಮಾಪಕಿ ಸುಗುಣಾ ರಘು ಅವರ ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ನಲ್ಲಿ ಮಂತ್ರಾಲಯದ ದೈನಂದಿನ ಪೂಜೆ, ಉತ್ಸವಗಳ ಕಣ್ಣಿಗೆ ಕಟ್ಟುವಂತಹ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ.

ಕೇವಲ ಹಾಡಷ್ಟೇ ಅಲ್ಲ, ಇದರ ಹಿಂದೆ ದೊಡ್ಡದೊಂದು ಮಾಸ್ಟರ್ ಪ್ಲ್ಯಾನ್ ಕೂಡ ಅಡಗಿದೆ. ಹೌದು, ಬರುವ ತಿಂಗಳು ಅಂದರೆ ಜೂನ್ 20ರಂದು ಮಂತ್ರಾಲಯದ ಪವಿತ್ರ ಸನ್ನಿಧಿಯಲ್ಲೇ ಈ ಆಲ್ಬಮ್ ಸಾಂಗ್ ಅನ್ನು ಅದ್ಧೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದೆ. ಇದರ ಬೆನ್ನಲ್ಲೇ, ಆಗಸ್ಟ್‌ ತಿಂಗಳಲ್ಲಿ ಇಡೀ ಸೌತ್ ಇಂಡಿಯಾ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಕಣ್ಮನ ಸೆಳೆಯುವ ಭವ್ಯ TNIT ಅವಾರ್ಡ್ಸ್ ಕಾರ್ಯಕ್ರಮ ನಡೆಯಲಿದ್ದು, ಈ ಬಾರಿ ಯಾರೆಲ್ಲಾ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

Exit mobile version