ಟಾಕ್ಸಿಕ್‌‌‌‌ಗೆ ರವಿ ಬಸ್ರೂರು ಎಂಟ್ರಿ..KGF ಕಾಂಬೋ ರಾಕ್ಸ್..!

ಯಶ್ ಅಚ್ಚುಮೆಚ್ಚಿನ ಕಂಪೋಸರ್..ನೀಲ್ ಆಸ್ಥಾನ ತಂತ್ರಜ್ಞ

Untitled design 2025 12 04T153714.603

ರಾಕಿಂಗ್ ಸ್ಟಾರ್ ಯಶ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಗ್ಲೋಬಲ್ ಮೂವಿ ಟಾಕ್ಸಿಕ್‌‌‌‌ ಅಡ್ಡಾಗೆ ರವಿ ಬಸ್ರೂರು ಎಂಟ್ರಿ ಕೊಟ್ಟಿದ್ದಾರೆ. ಮಾನ್‌ಸ್ಟರ್ ಪ್ರಶಾಂತ್ ನೀಲ್ ಆಸ್ಥಾನ ತಂತ್ರಜ್ಞನಾಗಿರೋ ರವಿ ಬಸ್ರೂರು, ಕೆಜಿಎಫ್ ಬಳಿಕ ಯಶ್ ಜೊತೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಸೋ.. ಸಿನಿಮಾ ಮ್ಯೂಸಿಕ್ ಹಾಗೂ ಬ್ಯಾಗ್ರೌಂಡ್ ಸ್ಕೋರ್ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಿದೆ.

ಟಾಕ್ಸಿಕ್.. ಕೆಜಿಎಫ್ ಬಳಿಕ ಗೇಮ್ ಚೇಂಜರ್ ಯಶ್ ನಟಿಸ್ತಿರೋ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರವನ್ನು ಗ್ಲೋಬಲ್ ಮಾರ್ಕೆಟ್‌‌‌ನಲ್ಲಿ ಹಾಲಿವುಡ್ ಸ್ಟ್ಯಾಂಡರ್ಡ್ಸ್‌‌ ಮೂಲಕ ಪ್ರೇಕ್ಷಕರಿಗೆ ತಲುಪಿಸೋ ಯೋಜನೆಯಲ್ಲಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆಗೂಡಿ, ಕೆವಿಎನ್ ಪ್ರೊಡಕ್ಷನ್ಸ್ ಜೊತೆ ತಾವು ಕೂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಯಶ್.

ಈಗಾಗ್ಲೇ ಯಶ್ ಬರ್ತ್ ಡೇ ಟೀಸರ್ ಸಖತ್ ಸೌಂಡ್ ಮಾಡಿದ್ದು, ರಾಕಿಭಾಯ್ ಸ್ವ್ಯಾಗ್‌ಗೆ ಎಲ್ರೂ ಕ್ಲೀನ್ ಬೋಲ್ಡ್ ಆಗಿದ್ದಾರೆ. ಯಶ್ ಸ್ಟೈಲಿಶ್ ಲುಕ್ಸ್, ಮೇಕಿಂಗ್, ತಾರಾಗಣದಿಂದ ಬಝ್ ಕ್ರಿಯೇಟ್ ಮಾಡಿದೆ ಟಾಕ್ಸಿಕ್ ಚಿತ್ರ. ಇನ್ನು ಸಿನಿಮಾ ಅಂದುಕೊಂಡ ಡೇಟ್‌ಗೆ ಅಂದ್ರೆ 2026ರ ಮಾರ್ಚ್‌ 19ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ ಅಂತ ಸ್ವತಃ ಚಿತ್ರತಂಡ ರೀಸೆಂಟ್ ಆಗಿ ಅಫಿಶಿಯಲಿ ಕನ್ಫರ್ಮ್ ಕೂಡ ಮಾಡಿದೆ.

ಆದ್ರೀಗ ಯಶ್ ಫೇವರಿಟ್ ಮ್ಯೂಸಿಕ್ ಕಂಪೋಸರ್ ರವಿ ಬಸ್ರೂರು, ಟಾಕ್ಸಿಕ್ ಅಡ್ಡಾ ಸೇರಿಕೊಂಡಿದ್ದಾರೆ ಅನ್ನೋದು ಲೇಟೆಸ್ಟ್ ಖಬರ್. ಹೌದು.. ಈ ಹಿಂದೆ ಯಶ್ ಅವರ ಕೆಜಿಎಫ್ ಹಾಗೂ ಕೆಜಿಎಫ್-2 ಚಿತ್ರಗಳಿಗೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಒದಗಿಸಿರೋ ಬಸ್ರೂರು, ಸದ್ಯ ಟಾಕ್ಸಿಕ್‌ಗೆ ಟ್ಯೂನ್ಸ್ ಮಾಡ್ತಿದ್ದಾರಂತೆ.

ಈ ಹಿಂದೆ ಕೆವಿಎನ್ ಪ್ರೊಡಕ್ಷನ್ಸ್ ತಮಿಳಿನ ಅನಿರುದ್ದ್ ರವಿಚಂದರ್ ಅನ್ನೋ ಮಾತುಗಳು ಕೇಳಿಬಂದಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಅನಿರುದ್ದ್ ಕೂಡ ಬೆಂಗಳೂರಿಗೆ ಬಂದು ಕೆವಿಎನ್ ಜೊತೆ ಲೈವ್ ಕಾನ್ಸರ್ಟ್ ಮಾಡಿ ಹೋಗಿದ್ರು. ಇದೀಗ ದಿಢೀರ್ ಅಂತ ಅನಿರುದ್ದ್‌ನ ಕೈಬಿಟ್ಟು, ರವಿ ಬಸ್ರೂರು ಅವರಿಗೇ ಅವಕಾಶ ನೀಡಿರೋದು ಅಚ್ಚರಿ ತಂದಿದೆ. ಅದೇನೇ ಇರಲಿ, ಮಾನ್‌ಸ್ಟರ್ ಪ್ರಶಾಂತ್ ನೀಲ್‌ರ ಉಗ್ರಂ ಚಿತ್ರದಿಂದ ಹಿಡಿದು, ಸಲಾರ್‌‌ವರೆಗೆ ನೀಲ್‌ರ ಎಲ್ಲಾ ಸಿನಿಮಾಗಳ ಪರ್ಮನೆಂಟ್ ಕಂಪೋಸರ್ ಬಸ್ರೂರು. ಸೋ.. ರವಿ ಬಸ್ರೂರು ಟಾಕ್ಸಿಕ್‌ಗೆ ಎಂಟ್ರಿ ಕೊಟ್ಟಿರೋದು ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಆಗಿದೆ.

ಎಲಿವೇಷನ್ ಶಾಟ್ಸ್‌‌ಗೆ ಬ್ಯಾಗ್ರೌಂಡ್ ಸ್ಕೋರ್ ಕೊಡೋದ್ರಲ್ಲಿ ರವಿ ಬಸ್ರೂರು ಪಂಟರ್. ಹಾಗಾಗಿ ಮಾಸ್ಟರ್‌ಮೈಂಡ್ ಯಶ್ ಅವರನ್ನೇ ಕರೆತಂದಿರೋದು ಇಂಟರೆಸ್ಟಿಂಗ್. ಸದ್ಯ ರವಿ ಬಸ್ರೂರು ಪ್ರಶಾಂತ್ ನೀಲ್‌- ಎನ್‌ಟಿಆರ್ ಕಾಂಬೋನ ಡ್ರ್ಯಾಗನ್ ಚಿತ್ರಕ್ಕೂ ಕಂಪೋಸ್ ಮಾಡ್ತಿದ್ದಾರೆ. ಬಾಲಿವುಡ್‌ನ ಖಾನ್‌ಗಳಿಗೂ ಇವರೇ ಫೇವರಿಟ್ ಸಂಗೀತ ಸಂಯೋಜಕ ಅನ್ನೋದು ವಿಶೇಷ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version