ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ‘ನ್ಯಾಷನಲ್ ಕಪಲ್’..?

6 ವರ್ಷಗಳ ನಂತರ ಒಂದಾಗ್ತಿರೋ ಗೀತಾ ಗೋವಿಂದ ಹಕ್ಕಿಗಳು

111 (30)

ರೌಡಿ ಬಾಯ್ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿವಾಹವಾಗುತ್ತಿದ್ದಾರೆ ಎಂಬ ವದಂತಿಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಈ ಜೋಡಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಆ ವಜ್ರದ ಉಂಗುರವೇ ಸಾಕ್ಷಿ. ಇದೆ ವೇಳೆ ಅದ್ಯಾಕೋ ವಿಜಯ್ ಲಕ್ ಕೈಕೊಟ್ಟಿದೆ ಸಿನಿಮಾಗಳು ಫ್ಲಾಪ್ ಆಗ್ತಿವೆ. ಭಾವಿ ಗಂಡನ ಸಿನಿ ಕರಿಯರ್ ಸಕ್ಸಸ್‌ಗಾಗಿ ರಶ್ಮಿಕಾ ಮಾಡಿರೋ ಆ ಮಹತ್ವದ ನಿರ್ಧಾರ ಏನು ಗೊತ್ತಾ?.

ರಶ್ಮಿಕಾ ಹಾಗೂ ವಿಜಯ್ ರಿಯಲ್ ಲೈಫ್​​ನಲ್ಲೂ ಈ ಜೋಡಿ ಬೆಸ್ಟ್ ಲವರ್ಸ್​ ಅನ್ನೋದೇನು ಗುಟ್ಟಾಗೇನು ಉಳಿದಿಲ್ಲ. ಕದ್ದು ಮುಚ್ಚಿ ಸುತ್ತಾಟವಾಡಿದ್ದು ಜಗತ್​​ ಜಾಹೀರಾತಾಗಿದೆ. ಈಗ ಈ ಗೀತಾ ಗೋವಿಂದನ ಮತ್ತೊಂದು ಕಹಾನಿ ಟಾಲಿವುಡ್​ ತುಂಬೆಲ್ಲಾ ಹರಿದಾಡ್ತಿದೆ. ಇವರಿಬ್ಬರು ನಮ್ಮ ಮಧ್ಯೆ ಏನು ಇಲ್ಲ ಜಸ್ಟ್ ಫ್ರೆಂಡ್ಸ್ ಎನ್ನುತ್ತಲೆ ಪ್ರೀತಿಗೆ ಬಿದ್ದವರು. ಪ್ರೇಮಿಗಳ ಹಾಗೆ ಸುತ್ತಾಡುತ್ತ ವಿದೇಶಲ್ಲಿ ರೆಡ್​ ಹ್ಯಾಂಡ್​ ಆಗಿ ಫ್ಯಾನ್ಸ್ ಕ್ಯಾಮೆರಾ ಕಣ್ಣಲ್ಲಿ ಹಲವಾರು ಬಾರಿ ಸಿಕ್ಕಿ ಬಿದಿದ್ದಾರೆ.

ಈ ಜೋಡಿಯ ಸಕ್ಸಸ್ ಕರಿಯರ್ ಶುರುವಾಗಿದ್ದು ಗೀತಾ ಗೋವಿಂದಂ ಸಿನಿಮಾ ಮೂಲಕ. ವಿಜಯ್ ದೇವರಕೊಂಡ ಗೀತಾ ಗೋವಿಂದ ಸಿನಿಮಾ ಆದ ಮೇಲೆ ದೊಡ್ಡ ಹಿಟ್​ ಸಿನಿಮಾ ಕೊಟ್ಟೇ ಇಲ್ಲ. ಡಿಯರ್​​ ಕಾಂಬ್ರೆಡ್​ ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದ ಈ ಜೋಡಿಗೆ ದೊಡ್ಡ ಸಕ್ಸಸ್​ ಏನೂ ಸಿಕ್ಕಿಲ್ಲ. ವಿಜಯ್​​​ ನಿರೀಕ್ಷೆ ಇಟ್ಟಿದ್ದ ಸಿನಿಮಾಗಳೆಲ್ಲಾ ಮಕಾಡೆ ಮಲಗಿವೆ. ಈಗ ಸೋತು ಸುಣ್ಣವಾಗಿರೋ ಗೆಳಯನಿಗೆ ಗೆಲುವಿನ ಹಾರ ಹಾಕಿಸೋಕೆ ಗೆಳತಿ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ.

ಹೌದು, ಮೂರನೇ ಭಾರಿ ರಶ್ಮಿಕಾ ವಿಜಯ್ ಕಾಂಬಿನೇಷನ್​​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಅದು ಐತಿಹಾಸಿಕ ಸಿನಿಮಾ ಅನ್ನೋದು ವಿಶೇಷ. 1800ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಕಥೆಯಲ್ಲಿ ರಶ್ಮಿಕಾ ವಿಜಯ್ ಆರು ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಈ ಐತಿಹಾಸಿಕ ಸಿನಿಮಾ ಮೂಡಿ ಬರಲಿದೆಯಂತೆ. ಈಗಾಗ್ಲೆ ರೀಲ್​ ಹಾಗು ರೀಯಲ್​​ನಲ್ಲಿ ಇವರಿಬ್ಬರ ಕೆಮಿಸ್ಟ್ರಿ ನೋಡಿರೋ ಜನ ಈಗ ಹಿಸ್ಟಾರಿಕಲ್​​ ಸಿನಿಮಾದಲ್ಲಿ ನೋಡಿ ಏನ್​ ಹೇಳ್ತಾರೋ ಕಾದು ನೋಡ್ಬೇಕಿದೆ.

ಇನ್ನು ರಶ್ಮಿಕಾ ವಿಜಯ್ ವಿವಾಹವಾಗುತ್ತಿದ್ದಾರೆ ಎಂಬ ವದಂತಿಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ 2025ರ ವೇಳೆ ರಶ್ಮಿಕಾ ಮಂದಣ್ಣ ಕಾರ್‌ನಲ್ಲಿ ಕುಳಿತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಈ ವೇಳೆ ಅವರು ತೊಟ್ಟಿದ್ದ ವಜ್ರದ ಉಂಗುರ ಗಮನ ಸೆಳೆದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ರಶ್ಮಿಕಾ ಮಂದಣ್ಣ ಹಾಗೂ ರೌಡಿ ಬಾಯ್ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಒಟ್ಟಾರೆ ವಿಜಯ್‌ಗಾಗಿ ರಶ್ಮಿಕಾ ಈ ಐತಿಹಾಸಿಕ ಸಿನಿಮಾ ಒಪ್ಪಿಕೊಂಡ್ರಾ..? ಭಾವಿ ಪತಿ ಲಕ್ ಕೈಕೊಟ್ಟಿದ್ದು ನಿರ್ಮಾಪಕರ ಲಕ್ಕಿ ಹಿರೋಯಿನ್ ಆಗಿರೊ ರಶ್ಮಿಕಾ ಮುಂದಿನ ಪ್ರಾಜೆಕ್ಟ್ ಹೇಗಿರುತ್ತೆ..? ಈ ಮೂಲಕ ಆದ್ರು ವಿಜಯ್‌ಗೆ ಮತ್ತೆ ಸಕ್ಸಸ್ ಗರಿ ತಂದು ಕೊಡುತ್ತ ರಶ್ಮಿಕಾ ವಿಜಯ್ ಪಾಲಿಗೆ ಮತ್ತೆ ಲಕ್ಕಿ ಗರ್ಲ್ ಆಗ್ತಾರಾ ನೋಡ್ಬೇಕು.

ಕೀರ್ತಿ ಪಾಟೀಲ್, ಫಿಲಂ ಬ್ಯೂರೊ, ಗ್ಯಾರಂಟಿ ನ್ಯೂಸ್.

Exit mobile version