ವಿಜಯ್ ದೇವರಕೊಂಡ ಕೈ ಹಿಡಿದ ಬಳಿಕ ಮೊದಲ ಬಾರಿಗೆ ತವರಿಗೆ ಬಂದಿದ್ದಾರೆ ರಶ್ಮಿಕಾ ಮಂದಣ್ಣ. ಕೂರ್ಗ್‌ನ ವಿರಾಜಪೇಟೆಯಲ್ಲಿ ವಿರೋಶ್ ಮತ್ತೊಮ್ಮೆ ರಿಸೆಪ್ಷನ್ ನಡೆದಿದ್ದು, ಕೊಡಗಿನ ಚೆಲುವೆಯರ ಅಂದವನ್ನ ಬಣ್ಣಿಸಿದ್ದಾರೆ ವಿಜಯ್. ಅಷ್ಟೇ ಅಲ್ಲ, ಮನೆಗೆ ಬಂದ ಮಗಳು-ಅಳಿಯನಿಗೆ ದುಬಾರಿ ಬಂಗ್ಲೆಯನ್ನ ಸರ್‌ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾರೆ ರಶ್ಮಿಕಾ ಪೋಷಕರು. ಇವೇ ಮೊದಲಾದ ವೆರಿ ವೆರಿ ಇಂಟರೆಸ್ಟಿಂಗ್ ವಿಷಯಗಳ ಕೂರ್ಗ್ ಡೈರಿ ಇಲ್ಲಿದೆ ನೋಡಿ..
- ತವರಿಗೆ ಬಂದ ರಶ್ಮಿಕಾ.. ಕೊಡಗಿನಲ್ಲಿ ವಿರೋಶ್ ರಿಸೆಪ್ಷನ್
- ರಕ್ಷಿತ್-ರಶ್ಮಿಕಾ ಎಂಗೇಜ್ ಆಗಿದ್ದ ಹಾಲ್‌ನಲ್ಲೇ ಆರತಕ್ಷತೆ
- ನ್ಯಾಷನಲ್ ಕ್ರಶ್ ಬರ್ತ್ ಡೇ ದಿನ ಡಬಲ್ ಸೆಲೆಬ್ರೇಷನ್
- ಕೂರ್ಗ್ ಹುಡ್ಗಿಯರು ಬ್ಯೂಟಿಫುಲ್ ಅಂದರೇಕೆ ವಿಜಯ್?
ರಶ್ಮಿಕಾ ಮಂದಣ್ಣ.. ಪೊಗರು ಸಿನಿಮಾದ ಬಳಿಕ ಆಲ್ಮೋಸ್ಟ್ ಕನ್ನಡ ಚಿತ್ರರಂಗಕ್ಕೆ ಟಾಟಾ ಅಂತ ಗುಡ್‌ಬೈ ಹೇಳಿ ಪಕ್ಕದ ಟಾಲಿವುಡ್‌ನಲ್ಲಿ ಸೆಟಲ್ ಆಗಿಬಿಟ್ಟ ಕನ್ನಡದ ನಟಿಮಣಿ. ತಮ್ಮ ಸಹ ನಟ ವಿಜಯ್ ದೇವರಕೊಂಡ ಜೊತೆ ಸ್ನೇಹ, ಸಲುಗೆಯಿಂದ ಇರ್ತಿದ್ದ ರಶ್ಮಿಕಾಗೆ ನಂತ್ರ ಪ್ರೇಮಾಂಕುರಿಸಿ, ಕೊನೆಗೆ ಅದು ಅವ್ರನ್ನ ಸಪ್ತಪದಿ ವರೆಗೂ ಕರೆದೊಯ್ಯುವಂತೆ ಆಯ್ತು. ಇತ್ತೀಚೆಗೆ ಅಂದ್ರೆ ಫೆಬ್ರವರಿ 26ರಂದು ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದ ರಶ್ಮಿಕಾ ವಿಜಯ್, ಅದಾದ ಬಳಿಕ ಹೈದ್ರಾಬಾದ್‌ನ ತಾಜ್ ಕೃಷ್ಣ ಪಂಚತಾರಾ ಹೋಟೆಲ್‌ನಲ್ಲಿ ಮಾರ್ಚ್ 4ಕ್ಕೆ ರಾಯಲ್ ರಿಸೆಪ್ಷನ್ ಕೂಡ ಮಾಡಿಕೊಂಡರು.
ಇದೀಗ ಈ ಜೋಡಿ ಕರ್ನಾಟಕದ ಕೂರ್ಗ್‌ನಲ್ಲಿ ಪ್ರಕೃತಿಯ ಮಡಿಲಲ್ಲಿ ಮಗದೊಮ್ಮೆ ರಿಸೆಪ್ಷನ್ ಮಾಡಿಕೊಂಡಿದೆ. ಹೌದು.. ಕೊಡಗಿನ ವಿರಾಜಪೇಟೆ ಮೂಲದವರಾದ ರಶ್ಮಿಕಾ ಮಂದಣ್ಣ, ಸದ್ಯ ತವರಿಗೆ ಬಂದಿದ್ದಾರೆ. ತಾನು ಹುಟ್ಟಿ, ಬೆಳೆದ ಊರಿನಲ್ಲಿ ತನ್ನವರಿಗಾಗಿ ಮತ್ತೊಮ್ಮೆ ಆರತಕ್ಷತೆ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ವಿರಾಜಪೇಟೆಯ ಸೆರೆನಿಟಿ ಹಾಲ್‌ನಲ್ಲೇ ರಶ್ಮಿಕಾ-ವಿಜಯ್ ಈ ರಿಸೆಪ್ಷನ್ ಆಗಿರೋದು ಹಲವು ಕುತೂಹಲಗಳಿಗೆ ಸಾಕ್ಷಿ ಆಗಿದೆ. ಯಾಕಂದ್ರೆ ಅದೇ ಸೆರೆನಿಟಿ ಹಾಲ್‌ನಲ್ಲಿ 2017ರ ಜುಲೈ 3ರಂದು ಕಿರಿಕ್ ಪಾರ್ಟಿ ಚಿತ್ರದ ಸಹನಟ ರಕ್ಷಿತ್ ಶೆಟ್ಟಿ ಜೊತೆ ಪರಸ್ಪರ ಉಂಗುರ ಬದಲಿಸಿಕೊಳ್ಳೋ ಮೂಲಕ ಎಂಗೇಜ್ ಆಗಿದ್ರು ರಶ್ಮಿಕಾ.
ಅಂದಹಾಗೆ ರಶ್ಮಿಕಾಗೆ ಮದುವೆ ಬಳಿಕ ಇದು ಮೊದಲ ಬರ್ತ್ ಡೇ. ಹಾಗಾಗಿ ಆಕೆಗೆ ಇದು ತುಂಬಾ ವಿಶೇಷವಾದ ಜನುಮ ದಿನ ಕೂಡ ಹೌದು. ಆದ್ರೆ ಈ ಬಾರಿ ಹುಟ್ಟುಹಬ್ಬವನ್ನ ತನ್ನ ತವರಲ್ಲಿ ತಂದೆ-ತಾಯಿ ಹಾಗೂ ಗಂಡನ ಜೊತೆ ಸೆಲೆಬ್ರೇಟ್ ಮಾಡಿಕೊಂಡಿರೋದು ರಶ್ಮಿಕಾಗೆ ಖುಷಿ ಕೊಟ್ಟಿದೆ. ಅಲ್ಲದೆ, ಆರತಕ್ಷತೆ ಆಗಿದ್ದು ಡಬಲ್ ಸಂಭ್ರಮಕ್ಕೆ ಸಾಕ್ಷಿ ಆಗಿದೆ. ಇನ್ನೂ ವಿಜಯ್ ದೇವರಕೊಂಡ ಕೊಡಗಿನ ಹುಡುಗಿಯರ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದು, ಕೂರ್ಗ್ ಚೆಲುವೆಯರು ತುಂಬಾ ಬ್ಯೂಟಿಫುಲ್ ಆಗಿರ್ತಾರೆ. ನಾನು ಅದೇ ಕೂರ್ಗ್ ಬ್ಯೂಟಿಯನ್ನ ಮದ್ವೆ ಆಗಿದ್ದೇನೆ ಎಂದಿದ್ದಾರೆ.
- ಮನೆಗೆ ಬಂದ ಅಳಿಯ.. ಅತ್ತೆ-ಮಾವನಿಂದ ಭರ್ಜರಿ ಗಿಫ್ಟ್..!
- ವಿರಾಜಪೇಟೆಯಲ್ಲಿರೋ 8 ಕೋಟಿ ಬಂಗ್ಲೆ ಪ್ರೀತಿಯ ಕಾಣಿಕೆ
ಮೊದಲ ಬಾರಿ ಮನೆಗೆ ಬಂದ ಅಳಿಯ-ಮಗಳಿಗೆ ತಮ್ಮದೇ ಸೆರೆನಿಟಿ ಹಾಲ್‌ನಲ್ಲಿ ರಿಸೆಪ್ಷನ್ ಮಾಡಿಸೋದ್ರ ಜೊತೆಗೆ ನಿರೀಕ್ಷೆಗೂ ಮೀರಿದ ಭರ್ಜರಿ ಗಿಫ್ಟ್ ನೀಡಿದ್ದಾರೆ ಪೋಷಕರು. ಯೆಸ್.. ರಶ್ಮಿಕಾ ಅಂದ್ರೆ ತಂದೆ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಮಂದಣ್ಣಗೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಗೆ ಪ್ರತೀಕವಾಗಿ ವಿರಾಜಪೇಟೆಯಲ್ಲಿರೋ ತಮ್ಮದೇ ದುಬಾರಿ ಬಂಗಲೆಯನ್ನ ಮಗಳು-ಅಳಿಯನಿಗೆ ಗಿಫ್ಟ್ ಆಗಿ ನೀಡಿದ್ದಾರೆ ರಶ್ಮಿಕಾ ಪೇರೆಂಟ್ಸ್.
ಹೌದು.. ರಶ್ಮಿಕಾಗೆ ಒಬ್ಬ ತಂಗಿ ಕೂಡ ಇದ್ದುಕೊಂಡು, ವಿರಾಜಪೇಟೆ ಹಾಗೂ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಆಸ್ತಿ ಹೊಂದಿರೋ ಮಂದಣ್ಣ ಫ್ಯಾಮಿಲಿ, ಮಗಳು ಅಳಿಯನಿಗೆ ದುಬಾರಿ ಉಡುಗೊರೆ ನೀಡಿರೋದು ಗ್ರೇಟ್. ಅಂದಹಾಗೆ ಆ ಬಂಗಲೆಯ ಬೆಲೆ ಬರೋಬ್ಬರಿ 8 ಕೋಟಿ ರೂಪಾಯಿ ಎನ್ನಲಾಗ್ತಿದೆ. ವಕೀಲರ ಸಮೇತ ಮಗಳನ್ನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ದು, ಆ ಬಂಗಲೆಯನ್ನ ರಿಜಿಸ್ಟ್ರೇಷನ್ ಮಾಡಿ ಕೊಟ್ಟಿದ್ದಾರೆ ರಶ್ಮಿಕಾ ಪೋಷಕರು.
- 3ನೇ ಬಾರಿ ಕೂರ್ಗ್‌ಗೆ ಕಾಲಿಟ್ಟ ವಿಜಯ್ ಅಚ್ಚರಿ ಮಾತು..!
- ರಶ್ಮಿಕಾ ಫ್ರೆಂಡ್ ಮನೆಯಲ್ಲೇ ಉಳಿದುಕೊಂಡಿದ್ದ ವಿಜಯ್
ಕೊಡಗು.. ವಿಜಯ್ ದೇವರಕೊಂಡಗೆ ಇಷ್ಟವಾಗುವ ಟೂರಿಸ್ಟ್ ಸ್ಪಾಟ್‌ಗಳಲ್ಲಿ ಒಂದು. ಇಲ್ಲಿಯ ತನಕ ಮೂರು ಬಾರಿ ಕೂರ್ಗ್‌ಗೆ ಬಂದಿರೋ ವಿಜಯ್, ತಮ್ಮ ಕೂರ್ಗ್ ಡೈರಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ ಫ್ಯಾಕ್ಟ್ ರಶ್ಮಿಕಾ ಪರಿಚಯಕ್ಕೂ ಮೊದಲೇ ಒಮ್ಮೆ ಕೊಡಗಿಗೆ ಪ್ರವಾಸಕ್ಕೆ ಅಂತ ಬಂದಿದ್ದರಂತೆ. ಆಗ ರಶ್ಮಿಕಾ ಅವ್ರ ಫ್ರೆಂಡ್ ಮನೆಯಲ್ಲೇ ಉಳಿದುಕೊಂಡಿದ್ದನ್ನ ಈಗ ರಿವೀಲ್ ಮಾಡಿದ್ದಾರೆ ಕರ್ನಾಟಕದ ಅಳಿಮಯ್ಯ ವಿಜಯ್.
ಒಟ್ಟಾರೆ ರಶ್ಮಿಕಾ ಲೈಫ್ ಕಂಪ್ಲೀಟ್ ಆಗಿ ಬದಲಾಗಿದೆ. ಅಂದ, ಅದೃಷ್ಟ ಎರಡೂ ಕೈ ಹಿಡಿದಿದೆ. ಕಿರಿಕ್ ಚೆಲುವೆ ಅನಿಸಿಕೊಂಡರೂ, ಇಡೀ ದೇಶವೇ ಮೆಚ್ಚುವಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಭಾಗವಾದ್ರು. ಬಾಲಿವುಡ್‌ನಲ್ಲಿ ಈಕೆಯ ಕ್ರೇಜ್ ತ್ರಿಬಲ್ ಆಗಿದೆ. ಸಕ್ಸಸ್ ರೇಟ್ ಜೊತೆ ಆಕೆಯ ಸ್ಟಾರ್ಡಮ್ ಕೂಡ ಹೆಚ್ಚಾಗ್ತಿದ್ದು, ಒಳ್ಳೊಳ್ಳೆ ಸಿನಿಮಾಗಳು ಮನೆ ಬಾಗಿಲಿಗೆ ಹುಡುಕಿಕೊಂಡು ಬರ್ತಿರೋದು ವಿಶೇಷ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
