ನ್ಯಾಷನಲ್ ಕ್ರಶ್ ರಶ್ಮಿಕಾಗೆ ಆಲ್‌ರೆಡಿ ವಿಜಯದ ಮೇಲೆ ವಿಜಯವಾಗ್ತಿದೆ. ಆದ್ರೀಗ ಬಹುಕಾಲದ ಗೆಳೆಯ ವಿಜಯ್ ದೇವರಕೊಂಡ ಮನೆಯನ್ನ ಬೆಳಗೋಮಹಾಲಕ್ಷ್ಮೀಯಾಗಿ ಹೋಗ್ತಿದ್ದಾರೆ. ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದ್ದು, ಅಫಿಶಿಯಲ್ ಇನ್ವಿಟೇಷನ್ ಕೂಡ ರಿವೀಲ್ ಆಗಿದೆ.
ಇಲ್ಲಿಯವರೆಗೂ ಇದ್ದಂತಹ ಅಂತೆ ಕಂತೆಗಳಿಗೆ ಕೊನೆಗೂ ತೆರೆ ಬಿದ್ದಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಸೆನ್ಸೇಷನಲ್ ಸ್ಟಾರ್, ರೌಡಿ ವಿಜಯ್ ದೇವರಕೊಂಡ ಕೈ ಹಿಡಿಯೋದು ಅಧಿಕೃತವಾಗಿದೆ. ಅದಕ್ಕೆ ಪೂರಕವಾಗಿ ಅವ್ರ ವೆಡ್ಡಿಂಗ್ ಇನ್ವಿಟೇಷನ್ ಕೂಡ ಬಯಲಾಗಿದೆ. ಗೀತ ಗೋವಿಂದಂ ಹಾಗೂ ಡಿಯಲ್ ಕಾಮ್ರೆಡ್ ಚಿತ್ರಗಳ ಜೋಡಿ ರೀಲ್ ಲೈಫ್‌ನಿಂದ ರಿಯಲ್ ಲೈಫ್‌ಗೆ ಎಂಟ್ರಿ ಕೊಡ್ತಿದೆ.
2017ರಲ್ಲಿ ರಕ್ಷಿತ್ ಜೊತೆ ಎಂಗೇಜ್ಮೆಂಟ್.. 2018ಕ್ಕೆ ಬ್ರೇಕಪ್
ಆ ಮುತ್ತು ತಂದ ಸಂಪತ್ತು.. ಮದ್ವೆಗೆ ಬರೆದೇ ಬಿಡ್ತು ಮುನ್ನುಡಿ
ಅಂದಹಾಗೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದ್ವೆ ಆಗ್ತಿದ್ದಾರೆ ಅನ್ನೋ ಸುದ್ದಿಯನ್ನ ಡೇಟ್ ಸಮೇತ ಮೊದಲಿಗೆ ಕನ್ನಡ ಮಾಧ್ಯಮದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ರಿವೀಲ್ ಮಾಡಿದ್ದೇ ಗ್ಯಾರಂಟಿ ನ್ಯೂಸ್. 2026ರ ಫೆಬ್ರವರಿ 26ರಂದು ಸಪ್ತಪದಿ ತುಳಿಯೋ ಮೂಲಕ ಈ ತಾರಾಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಅನ್ನೋದನ್ನ 2025ರಲ್ಲೇ ಹೇಳಿತ್ತು ಗ್ಯಾರಂಟಿ ನ್ಯೂಸ್. ಇದೀಗ ಅದಕ್ಕೆ ಅವ್ರ ಅಫಿಶಿಯಲ್ ವೆಡ್ಡಿಂಗ್ ಇನ್ವಿಟೇಷನ್ ಸಾಕ್ಷಿ ಆಗಿದೆ. ಗ್ಯಾರಂಟಿ ನ್ಯೂಸ್ ಹೇಳಿದಂತೆ ಇದೇ ಫೆಬ್ರವರಿ 26ಕ್ಕೆ ಕುಟುಂಬಸ್ಥರು ಹಾಗೂ ಅತ್ಯಾಪ್ತರ ಸಮ್ಮುಖದಲ್ಲಿ ಸತಿ-ಪತಿ ಆಗ್ತಿದ್ದಾರೆ ರಶ್ಮಿಕಾ-ವಿಜಯ್.
ಉದಯಪುರದ ಪ್ಯಾಲೇಸ್‌ನಲ್ಲಿ ಡೆಸ್ಟಿನೆಷನ್ ವೆಡ್ಡಿಂಗ್ ಆಗೋಕೆ ರಶ್-ವಿಜಿ ನಿಚ್ಚಯಿಸಿದ್ದು, ಈಗಾಗ್ಲೇ ಪ್ಯಾಲೇಸ್‌ನಲ್ಲಿ ಕಲ್ಯಾಣ ಮಂಟಪ ವೈಭವೋಪೇತವಾಗಿ ತಯಾರಾಗ್ತಿದೆ. ಆದ್ರೆ ಚಿತ್ರರಂಗದ ಎಲ್ಲಾ ಸ್ಟಾರ್‌ಗಳಿಗೆ, ರಾಜಕಾರಣಿಗಳಿಗೆ, ಸಹ ನಟರು, ಕಲಾವಿದರಿಗೆ ಮದ್ವೆಗೆ ಅಲ್ಲಿಗೆ ಆಹ್ವಾನವಿಲ್ಲ. ಅವರಿಗೆಲ್ಲಾ ಹೈದ್ರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರೋ ಪಂಚತಾರಾ ಹೋಟೆಲ್ ತಾಜ್ ಕೃಷ್ಣದಲ್ಲಿ ಮಾರ್ಚ್ 4ರಂದು ಔತಣಕೂಟ ಏರ್ಪಡಿಸಿದ್ದಾರೆ ರಶ್ಮಿಕಾ-ವಿಜಯ್. ಅಂದಹಾಗೆ ತಾಜ್ ಕೃಷ್ಣ ಹೋಟೆಲ್‌ನಲ್ಲಿ ರಾಯಲ್ ರಿಸೆಪ್ಷನ್ ನಡೆಯಲಿದೆ.
ರಶ್ಮಿಕಾ-ವಿಜಯ್ ದೇವರಕೊಂಡ ಸಪ್ತಪದಿಗೆ ಡೇಟ್ ಫಿಕ್ಸ್..!
ಫೆ-26ಕ್ಕೆ ರಶ್ಮಿಕಾ ವೆಡ್ಸ್ ವಿಜಿ.. ಮಾ-4ಕ್ಕೆ ರಾಯಲ್ ರಿಸೆಪ್ಷನ್
2017ರ ಜುಲೈ 3 ರಂದು ಕೂರ್ಗ್ ಮೂಲದ ರಶ್ಮಿಕಾ ಮಂದಣ್ಣ, ವಿರಾಜಪೇಟೆಯ ತಮ್ಮದೇ ಸೆರೆನಿಟಿ ಹಾಲ್‌ನಲ್ಲಿ ಕಿರಿಕ್ ಪಾರ್ಟಿ ಚಿತ್ರದ ಸಹನಟ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ರು. ಆದ್ರೆ ಆ ನಿಶ್ಚಿತಾರ್ಥ ಒಂದೇ ವರ್ಷದಲ್ಲಿ ಮುರಿದು ಬಿತ್ತು. ಅದಕ್ಕೆ ಕಾರಣ ಗೀತ ಗೋವಿಂದಂ ಚಿತ್ರದ ಸಹನಟ ವಿಜಯ್ ದೇವರಕೊಂಡ ಜೊತೆಗಿನ ಆ ಒಂದೇ ಒಂದು ಮುತ್ತು. ಎಂಗೇಜ್ಮೆಂಟ್ ಆದ ಬಳಿಕ ಲಿಪ್ ಕಿಸ್ ಮಾಡಿದ್ದು ರಕ್ಷಿತ್‌ಗೆ ಸರಿ ಅನಿಸಲಿಲ್ಲ. ಹಾಗಾಗಿ ಅದನ್ನ ಡಿಲೀಟ್ ಮಾಡಲು ಒತ್ತಡ ಹೇರಿದ್ರು. ಆದ್ರೆ ಅದು ಸಿನಿಮಾ ರಿಲೀಸ್‌ಗೆ ಮೊದಲೇ ಲೀಕ್ ಆಗಿತ್ತಾದ್ರೂ, ಆ ಕಿಸ್ ಸಿನಿಮಾದ ಜೀವಾಳ ಆಗಿತ್ತು. ಡಿಲೀಟ್ ಮಾಡೋಕೆ ನೋ ಅಂದಿದ್ದಾರೆ ರಶ್ಮಿಕಾ.
ಆ ಒಂದು ಮುತ್ತಿನ ಕಥೆಯಿಂದ ರಕ್ಷಿತ್ ರಿಲೇಷನ್‌ಶಿಪ್ ಕಟ್ ಮಾಡಿಕೊಂಡ ರಶ್ಮಿಕಾ ವಿಜಯ್ ಜೊತೆ ಸ್ನೇಹ ಮುಂದುವರೆಸಿದ್ರು. ಅವರಿಬ್ಬರ ಆಲೋಚನಾ ಲಹರಿಗಳು ಒಂದೇ ಆಗಿತ್ತು. ಪರಸ್ಪರ ಅರ್ಥೈಸಿಕೊಳ್ಳೋ ಅಷ್ಟರಲ್ಲಿ ಪ್ರೇಮಾಂಕುರಿಸಿತ್ತು. ಹಾಗಾಗಿಯೇ ರಶ್ಮಿಕಾ ರಕ್ಷಿತ್‌ಗೆ ನೋ ಹೇಳಿ ವಿಜಯ್ ಜೊತೆ ಯೆಸ್ ಅಂದ್ರು. ಅಲ್ಲಿಂದ ರಶ್ಮಿಕಾ ಲೈಫ್ ಕಂಪ್ಲೀಟ್ ಆಗಿ ಬದಲಾಯ್ತು. ಒಟ್ಟಾರೆ ಒಂದು ಮುತ್ತು ತಂದ ಆಪತ್ತು.. ವಿಜಯ್ ದೇವರಕೊಂಡ ಬಾಳಿಗೆ ರಶ್ಮಿಕಾ ಹೋಗೋಕೆ ಮುನ್ನುಡಿ ಬರೆಯಿತು.
