ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಗೆ ಕೌಂಟ್‌​ಡೌನ್​..!

ಉದಯಪುರದಲ್ಲಿ ಅದ್ದೂರಿ ಮದುವೆ.. ಏನಂದ್ರು ಶ್ರೀವಲ್ಲಿ..?

Untitled design 2026 01 22T174439.964

ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಮದುವೆ ವಿಚಾರ ಸದ್ಯ ಸಖತ್​ ಸೌಂಡ್​ ಮಾಡುತ್ತಿದೆ. ಮುಂದಿನ ತಿಂಗಳು ಫೆಬ್ರವರಿಯಲ್ಲಿ ರಶ್ಮಿಕಾ ವಿಜಯ್​ ಮದುವೆ ನಿಶ್ಚಯವಾಗಿದ್ದು, ತೆರೆಮರೆಯಲ್ಲೇ ಪ್ರಿಪರೇಶನ್ಸ್​ ನಡಿತ್ತಾ ಇದೆ. ಹೀಗಿರುವಾಗಲೇ ಕಿರಿಕ್​ ಚೆಲುವೆ ಮದುವೆ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ರಶ್ಮಿಕಾ ಏನು ಹೇಳಿದ್ರು ಅನ್ನೋದ್ರ ಫುಲ್‌ ಡಿಟೈಲ್ಸ್‌ ಇಲ್ಲಿದೆ..

ಟಾಲಿವುಡ್​ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಮುಂದಿನ ತಿಂಗಳು ರಾಜಸ್ಥಾನದಲ್ಲಿ ಇಬ್ಬರ ಮದುವೆ ನಡೆಯುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಈಗಾಗಲೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಹೊಸ ವರ್ಷವನ್ನು ಸ್ವಾಗತಿಸಿದ್ದರು. ಇದೆಲ್ಲದರ ನಡುವೆ ಮದುವೆ ಬಗ್ಗೆ ರಶ್ಮಿಕಾಗೆ ನೇರಾನೇರ ಪ್ರಶ್ನೆ ಎದುರಾಗಿದೆ.

ಈಗಾಗಲೇ ನಾನು ವಿಜಯ್​ ಅವರನ್ನೇ ಮದುವೆಯಾಗುತ್ತೇನೆ ಅಂತ ರಶ್ಮಿಕಾ ತಮ್ಮ ಫ್ಯಾನ್ಸ್​ಗೆ ಹಿಂಟ್​ ಕೊಟ್ಟಿದ್ದಾರೆ.. ಆದ್ರೆ ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಹೀಗಾಗಿ ಸಂದರ್ಶನವೊಂದರಲ್ಲಿ ಮಾತನಾಡುವಾಗ ರಶ್ಮಿಕಾಗೆ ಮದುವೆ ಬಗ್ಗೆ ಪ್ರಶ್ನೆ ಕೇಳಲಾಗಿದೆ.. ವಿಜಯ್ ಹಾಗೂ ರಶ್ಮಿಕಾ ಎಂಗೇಜ್ಡ್ ಆಗಿದ್ದಾರೆ. ಆದರೆ ಪ್ರತಿಬಾರಿ ನೀವು ನಾಚಿಕೋಳ್ತೀರಾ ಇವತ್ತು ಸತ್ಯ ಹೇಳಲೆಬೇಕು ಎಂದು ನಿರೂಪಕಿ ಪಟ್ಟುಹಿಡಿದಿದ್ದಾರೆ. ಸತ್ಯ ಏನಂದ್ರೆ, 4 ವರ್ಷಗಳಿಂದ ಇಂತಹ ವದಂತಿ ಹರಿದಾಡ್ತಿದೆ. ಆದರೆ ಯಾವಾಗ ಮಾತನಾಡಬೇಕೋ ಆಗ ನಾನು ಮಾತನಾಡುತ್ತೇನೆ ಎಂದು ರಶ್ಮಿಕಾ ನಕ್ಕಿದ್ದಾರೆ.

ಸಂದರ್ಶನ ಮುಗಿದ ಬಳಿದ ವೈಯಕ್ತಿಕವಾಗಿ ಮಾತಾಡೋಣ ಬಿಡಿ ಎಂದು ಜಾರಿಕೊಂಡಿದ್ದಾರೆ. ಮತ್ತೊಮ್ಮೆ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡಿ ರಶ್ಮಿಕಾ ಕುತೂಹಲ ಕಾಯ್ದುಕೊಂಡಿದ್ದಾರೆ. ಇಬ್ಬರ ಮದುವೆ ಖಚಿತ. ಇಲ್ಲದಿದ್ದರೆ ಆಕೆ ಹೇಳುತ್ತಿದ್ದಳು. ಹೀಗೆ ನುಣುಚಿಕೊಳ್ಳುತ್ತಿರಲಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಫೆಬ್ರವರಿ 26ಕ್ಕೆ ಉದಯಪುರ ಕೋಟೆಯಲ್ಲಿ ರಶ್ಮಿಕಾ ವಿಜಯ್​ ಮದುವೆ ಫಿಕ್ಸ್​ ಆಗಿದೆ ಅಂತ ಹೇಳಲಾಗಿದೆ. ಕೇವಲ ಅವರ ಆಪ್ತರು ಹಾಗೂ ಕುಟುಂಬಸ್ಥರ ಸಮೂಖದಲ್ಲಿ ಮದುವೆ ನಡೆಯಲಿದೆ.. ಒಟ್ನಲ್ಲಿ ರಶ್ಮಿಕಾ ಹಾಗೂ ವಿಜಯ್​ ಯಾವಾಗ ಮದುವೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುತ್ತಾರೆ ಅಂತ ಕಾದು ನೋಡಬೇಕಿದೆ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version