ರಶ್ಮಿಕಾ-ವಿಜಯ್ ಮನೆಯಲ್ಲಿ ಮೊನ್ನೆಯಷ್ಟೇ ಶುಭಕಾರ್ಯ ನಡೆಯೋ ಮೂಲಕ ಕರ್ನಾಟಕದ ಹೆಣ್ಣು ಮಗಳು ತೆಲಂಗಾಣ ಸೊಸೆ ಆಗಿದ್ದಾರೆ. ಆದ್ರೀಗ ಅದೇ ರಶ್ಮಿಕಾ ದೇವರಕೊಂಡ ನಿವಾಸದಲ್ಲಿ ಮತ್ತೊಂದು ಶುಭಕಾರ್ಯ ನಡೆಯೋ ಸೂಚನೆ ಸಿಕ್ಕಿದೆ.
ವಿರಾಟ್ ಕೊಹ್ಲಿ ಪೋಸ್ಟ್‌ಗಳ ದಾಖಲೆಗಳನ್ನೇ ಸರಿಗಟ್ಟುವಂತಹ ರೇಂಜ್‌ಗೆ ಸಂಚಲನ ಮೂಡಿಸಿರೋ ಸ್ಟಾರ್ ಕಪಲ್ ಅಂದ್ರೆ ಅದು ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ. ಇತ್ತೀಚೆಗೆ ಇವರುಗಳ ಮದುವೆ ಶುಭಕಾರ್ಯ ಎಷ್ಟು ಜೋರಾಗಿ, ಅದ್ಧೂರಿಯಾಗಿ ನಡೀತು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕಂದ್ರೆ ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್, ಹೈದ್ರಾಬಾದ್‌ನಲ್ಲಿ ಆರತಕ್ಷತೆ ಮಾಡಿಕೊಂಡ ಜೋಡಿ, ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸುದ್ದಿ ಆದರು.
ರಶ್ಮಿಕಾ ದೇವರಕೊಂಡ ಮನೆಯಲ್ಲಿ ಮತ್ತೊಂದು ಶುಭಕಾರ್ಯ
ವೈಷ್ಣವಿ ಚೈತನ್ಯ ಕೈ ಹಿಡಿಯುತ್ತಾರಾ ಆನಂದ್ ದೇವರಕೊಂಡ..?!
ನ್ಯಾಷನಲ್ ಕ್ರಶ್ ರಶ್ಮಿಕಾ ಇಷ್ಟು ದಿನ ಕರ್ನಾಟಕದ ಮನೆ ಮಗಳಾಗಿದ್ದರು. ಆದ್ರೀಗ ಆಕೆ ತೆಲಂಗಾಣದ ಸೊಸೆ. ದೇವರಕೊಂಡ ಕುಟುಂಬ ಬೆಳಗೋಕೆ ಹೋಗಿರೋ ಮಹಾಲಕ್ಷ್ಮೀ. ಮನೆಗೆ ಸೊಸೆಯನ್ನ ತುಂಬಿಸಿಕೊಂಡ ಖುಷಿ, ಸಂಭ್ರಮದಲ್ಲಿ ಇಡೀ ದೇವರಕೊಂಡ ಕುಟುಂಬವಿದೆ. ಅದಕ್ಕೆ ಸಾಕ್ಷಿಯಾಗಿ ತವರಿನ ಫಾರ್ಮ್‌ನಲ್ಲಿ ಒಂದು ಫಾರ್ಮ್ ಹೌಸ್ ಕೂಡ ನಿರ್ಮಿಸಿದ್ರು ವಿಜಯ್ ಫ್ಯಾಮಿಲಿ.
ಸತತವಾಗಿ ಬ್ಯಾಕ್ ಟು ಬ್ಯಾಕ್ ಫಂಕ್ಷನ್‌ಗಳಿಂದ ನಿತ್ಯ ಸಂಭ್ರಮಿಸುತ್ತಿರೋ ದೇವರಕೊಂಡ ಕುಟುಂಬದಲ್ಲಿ ಮತ್ತೊಂದು ಶುಭಕಾರ್ಯದ ಸೂಚನೆ ಸಿಕ್ಕಿದೆ. ರಶ್ಮಿಕಾ ಬೆನ್ನಲ್ಲೇ ಆ ಕುಟುಂಬಕ್ಕೆ ಮತ್ತೊಬ್ಬ ಸೊಸೆ ಎಂಟ್ರಿ ಕೊಡೋ ಲಕ್ಷಣಗಳು ಜೋರಾಗಿವೆ. ಯೆಸ್.. ವಿಜಯ್ ಸಹೋದರ ಆನಂದ್ ದೇವರಕೊಂಡ ಮದುವೆ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಹಸೆಮಣೆ ಏರುತ್ತಾರೆ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ಸೊಸೆ ಕೂಡ ರೆಡಿ ಇದ್ದಾರೆ ಎನ್ನಲಾಗ್ತಿದೆ.
‘ಬೇಬಿ’ ಜೋಡಿಯ ಮತ್ತೊಂದು ‘ಎಪಿಕ್’ ಲವ್ ಸ್ಟೋರಿ ರೆಡಿ
ಫ್ರೆಂಡ್ಶಿಪ್ ಜೊತೆ ಆನಂದ್-ವೈಷ್ಣವಿ ಜೋಡಿ ಕೆಮಿಸ್ಟ್ರಿ ಜೋರು..!
ಈ ಹಿಂದೆ ಆನಂದ್ ದೇವರಕೊಂಡ ಜೊತೆ ಬೇಬಿ ಅನ್ನೋ ಸಿನಿಮಾ ಮಾಡಿದ್ದ ನಾಯಕನಟಿ ವೈಷ್ಣವಿ ಚೈತನ್ಯ ಈಗ ಅದೇ ಆನಂದ್ ಜೊತೆ ಮತ್ತೊಂದು ಎಪಿಕ್ ಲವ್ ಸ್ಟೋರಿಗೆ ಕೈ ಜೋಡಿಸಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಖುದ್ದು ರಶ್ಮಿಕಾನೇ ತೆರಳಿ ಕ್ಲಾಪ್ ಮಾಡಿ, ಶುಭ ಕೋರಿದ್ರು. ಆ ಎಪಿಕ್ ಮೂವಿ ಟೀಸರ್ ಹಾಗೂ ಸಾಂಗ್ಸ್‌ನಿಂದ ಹುಬ್ಬೇರಿಸುವಂತಿದ್ದು, ಆನಂದ್-ವೈಷ್ಣವಿ ಕೆಮಿಸ್ಟ್ರಿ ಕೂಡ ಜೋರಿದೆ. ಇತ್ತೀಚೆಗೆ ನಡೆದ ವಿರೋಶ್ ಕಲ್ಯಾಣದಲ್ಲೂ ವೈಷ್ಣವಿ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ.
ಬೇಬಿ ಸಿನಿಮಾ ನೋಡಿದಾಗಲೇ ಅವರಿಬ್ಬರ ಸ್ನೇಹ, ಕೆಮಿಸ್ಟ್ರಿ ಕಂಡು ಆಹಾ ಇವರು ರಿಯಲ್ ಲೈಫ್‌ನಲ್ಲೂ ಒಂದಾದ್ರೆ ಚೆನ್ನಾಗಿರುತ್ತೆ ಅಂದಿದ್ರು ಜನ. ಅವರುಗಳ ನಿರೀಕ್ಷೆಯಂತೆ ಮತ್ತೊಂದು ಸಿನಿಮಾಗಾಗಿ ಆ ತಾರಾ ಜೋಡಿ ಒಂದಾಗಿದ್ದು, ಅದು ಮದುವೆ ಕಲ್ಯಾಣ ಮಂಟಪದವರೆಗೆ ಕರೆತರುವ ಎಲ್ಲಾ ಸಾಧ್ಯತೆಗಳಿವೆ. ಸೋ.. ಇವರಿಬ್ಬರ ನಡುವೆ ಬರೀ ಫ್ರೆಂಡ್ಶಿಪ್ ಇದೆಯಾ ಅಥ್ವಾ ಅದು ಲವ್ವಾ ಅನ್ನೋದು ಎಪಿಕ್ ಚಿತ್ರದ ಪ್ರಮೋಷನ್ಸ್ ವೇಳೆ ಬಯಲಾಗಲಿದೆ.
