ಬೆಚ್ಚಿ ಬೀಳಿಸಿದ ರಶ್ಮಿಕಾ ಥಮಾ ವರ್ಲ್ಡ್‌.. ದೆವ್ವ ಆದ್ರಾ ಕನ್ನಡತಿ ?

ನವಾಜುದ್ದೀನ್, ಆಯುಷ್ಮಾನ್ ಜೊತೆ ತಡಕ ಪಾತ್ರದಲ್ಲಿ ರಶ್ಮಿಕಾ

Untitled design (52)

ಭಿನ್ನ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ, ಮುಕ್ತವಾಗಿ ತಮ್ಮನ್ನ ತಾವು ಚಿತ್ರರಂಗಕ್ಕೆ ಅರ್ಪಿಸಿಕೊಂಡಾಗಲೇ ಕಂಪ್ಲೀಟ್ ಆ್ಯಕ್ಟರ್ ಅಂತ ಕರೆಸಿಕೊಳ್ಳಲು ಸಾಧ್ಯ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಆಗಿ ರಾರಾಜಿಸ್ತಿದ್ದಾರೆ. ಅದಕ್ಕೆ ಸದ್ಯ ರಿಲೀಸ್ ಆಗಿರೋ ಥಮಾ ಹಾರರ್ ಫ್ಯಾಂಟಸಿ ಚಿತ್ರದ ಟೀಸರ್ ಹಾಗೂ ಆಕೆಯ ರೀಸೆಂಟ್ ಹಿಟ್ಸ್.

ಇದು ಥಮಾ ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ನಮ್ಮ ಕನ್ನಡತಿ, ನ್ಯಾಷನಲ್ ಕ್ರಶ್, ಪ್ಯಾನ್ ಇಂಡಿಯಾದ ಮೋಸ್ಟ್ ಡಿಮ್ಯಾಂಡಿಂಗ್ ನಟಿಮಣಿ ರಶ್ಮಿಕಾ ಮಂದಣ್ಣ ನಟನೆಯ ನೆಕ್ಸ್ಟ್‌ ಅಪ್‌ಕಮಿಂಗ್ ಎಂಟರ್‌‌ಟೈನರ್. ಹೌದು.. ಬಾಲಿವುಡ್‌‌ನಲ್ಲಿ ತಯಾರಾಗಿರೋ ಈ ಸಿನಿಮಾ ಸೈಲೆಂಟ್ ಆಗಿ ಶೂಟಿಂಗ್ ಮಾಡಿ ಮುಗಿಸಿದೆ. ದೆಹಲಿ, ಮುಂಬೈ ಹಾಗೂ ಊಟಿಯಲ್ಲಿ ಚಿತ್ರಿಗೊಂಡಿರೋ ಈ ಸಿನಿಮಾ ಫ್ಯಾಂಟಸಿ ಜಾನರ್‌ಗೆ ಸೇರಿದ್ದು, ಹಾರರ್ ಕಾಮಿಡಿ ಎಂಟರ್‌‌ಟೈನರ್ ಆಗಿರಲಿದೆ.

ತಡಕ ಅನ್ನೋ ಪಾತ್ರದಲ್ಲಿ ರಶ್ಮಿಕಾ ಮಿಂಚಲಿದ್ದು, ದೆವ್ವ ಆಗಿಯೂ ಕಾಣಸಿಗಲಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ದಿ ಬೆಸ್ಟ್ ಪರ್ಫಾಮರ್‌‌ಗಳಾದ ಆಯುಷ್ಮಾನ್ ಖುರಾನ, ನವಾಜುದ್ದೀನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಕ್ಟೋಬರ್ 17ಕ್ಕೆ ಸಿನಿಮಾ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದ್ದು, ಟೀಸರ್ ಮೂಲಕ ಪ್ರಮೋಷನ್ಸ್ ಕಿಕ್‌‌ಸ್ಟಾರ್ಟ್‌ ಮಾಡಿದೆ ಚಿತ್ರತಂಡ. ಆದಿತ್ಯ ಸರ್ಪೋಟ್ದಾರ್ ನಿರ್ದೇಶನದ ಥಮಾ ಸಂಥಿಂಗ್ ಡಿಫರೆಂಟ್ ಅನಿಸಿದೆ.

ಅನಿಮಲ್, ಪುಷ್ಪ-2, ಛಾವಾ ಚಿತ್ರಗಳ ಬಿಗ್ಗೆಸ್ಟ್ ಸಕ್ಸಸ್ ಬಳಿಕ ಸಿಕಂದರ್‌‌ನಲ್ಲಿ ಕೊಂಚ ಎಡವಿದ್ರೂ, ಮತ್ತೆ ಕುಬೇರ ಸಿನಿಮಾದಿಂದ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ರು ನ್ಯಾಷನಲ್ ಕ್ರಶ್ ರಶ್ಮಿಕಾ. ಇದೀಗ ತೆಲುಗಿನ ದಿ ಗರ್ಲ್‌‌‌ಫ್ರೆಂಡ್ ಹಾಗೂ ಹಿಂದಿಯ ಥಮಾ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗ್ತಿದ್ದು, ರಶ್ಮಿಕಾ ಸಕ್ಸಸ್ ಗ್ರಾಫ್‌‌ನ ಮತ್ತಷ್ಟು ಮೇಲಕ್ಕೇರಿಸೋ ಮುನ್ಸೂಚನೆ ನೀಡಿವೆ. ಸದಾ ಭಿನ್ನ ವಿಭಿನ್ನ ಪಾತ್ರಗಳಿಗಾಗಿ ಹಾತೊರೆಯುವಂತಹ ರಶ್ಮಿಕಾ, ತಾನು ಎಲ್ಲಾ ಬಗೆಯ ಪಾತ್ರಗಳನ್ನ ಮಾಡಬಲ್ಲಂತಹ ಕಲಾವಿದೆ ಅನ್ನೋದನ್ನ ಪ್ರೂವ್ ಮಾಡ್ತಿದ್ದಾರೆ.

ರಶ್ಮಿಕಾ ರೆಮ್ಯುನರೇಷನ್ ದಿನದಿಂದ ದಿನ ಮುಗಿಲೆತ್ತರಕ್ಕೆ ಏರುತ್ತಿದ್ದು, ಸಿನಿಮಾವೊಂದಕ್ಕೆ 10ರಿಂದ 12 ಕೋಟಿ ಸಂಭಾವನೆ ಪಡೀತಾರೆ ಎನ್ನಲಾಗ್ತಿದೆ. ಕನ್ನಡದ ಹೆಣ್ಣು ಮಗಳು ಹೀಗೆ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version