ಕೊಡವ ಸಮಾಜದ ನಟಿಯರಿಗೆ ಅಪಮಾನ ಎಸಗಿದ್ದ ರಶ್ಮಿಕಾ ಮಂದಣ್ಣಗೆ ಒಂಥರಾ ಗುಡ್ ನ್ಯೂಸ್ ಸಿಕ್ಕಿದೆ. ನ್ಯಾಷನಲ್ ಕ್ರಶ್ ಆಗಿ ಬೆಳೆದು ನಿಂತಿರೋ ಕೂರ್ಗ್ ಚೆಲುವೆಗೆ ನಮ್ಮ ಸ್ಯಾಂಡಲ್‌ವುಡ್ ನಟಿಮಣಿಯರು ಬಿಟ್ಟುಕೊಡದೆ, ಸಾಥ್ ನೀಡಿದ್ದಾರೆ. ಯಾರ್ಯಾರು ಏನಂದ್ರು ಅನ್ನೋದ್ರ ಬಗ್ಗೆ ಇಲ್ಲಿ ಕಂಪ್ಲೀಟ್ ಆಗಿ ವಿವರಿಸಿದಿವಿ.
- ಕೊಡವ ಸಮಾಜ ಅವಮಾನಿಸಿದ್ರೂ ರಶ್ಮಿಕಾ ಆಗಲಿಲ್ಲ ಬಡವಿ
- ನಿಧಿ ಸುಬ್ಬಯ್ಯ, ಹರ್ಷಿಕಾಗೆ ನ್ಯಾಷನಲ್ ಕ್ರಶ್ ಅಂದ್ರೆ ಹೆಮ್ಮೆ..!
- ಮೂರೇ ಸಿನಿಮಾದಿಂದ ಸಾವಿರ ಕೋಟಿ ಕ್ಲಬ್‌ಗೆ ಕಿರಿಕ್ ಬ್ಯೂಟಿ
- ವಿವಾದಗಳಾದಷ್ಟೂ ಪುಟಿದೇಳುತ್ತಿದ್ದಾರೆ ರಶ್ಮಿಕಾ ಮಂದಣ್ಣ..!
ಕಿರಿಕ್ ಪಾರ್ಟಿ ಸಿನಿಮಾದಿಂದ ಶುರುವಾದ ರಶ್ಮಿಕಾ ಜರ್ನಿ.. ಸದ್ಯ ಮೊನ್ನೆಯಷ್ಟೇ ಬ್ಲಾಕ್ ಬಸ್ಟರ್ ಹಿಟ್ ಆದ ಕುಬೇರ ಸಿನಿಮಾವರೆಗೂ ಬಂದು ನಿಂತಿದೆ. ಮೈಸಾ ಅನ್ನೋ ಹೊಚ್ಚ ಹೊಸ ಮಹಿಳಾ ಪ್ರಧಾನ ಸಿನಿಮಾ ಅನೌನ್ಸ್ ಮಾಡಿರೋ ನ್ಯಾಷನಲ್ ಕ್ರಶ್, ಮತ್ತೆರಡು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ.
ಈ ಕುರಿತು ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ ಎಲ್ಲಾ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದು, ರಶ್ಮಿಕಾ ಮಂದಣ್ಣ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಿಲ್ಲ. ಬದಲಿಗೆ ನಮ್ಮ ಕಮ್ಯೂನಿಟಿಯಿಂದ ಹೋದ ಹೆಣ್ಮಗಳು ಇವತ್ತು ನ್ಯಾಷನಲ್ ಕ್ರಶ್ ಆಗಿ, ಸಿಕ್ಕಾಪಟ್ಟೆ ಬ್ಯುಸಿ ಇರೋದು ಹೆಮ್ಮೆ ತರಿಸುವಂಥದ್ದು. ನಾವು ಆಕೆಗೆ ಸಪೋರ್ಟೀವ್ ಆಗಿ ಇರ್ತೀವಿ ಅಂತ ರಶ್ಮಿಕಾ ಪರವೇ ಬ್ಯಾಟ್ ಬೀಸಿದ್ದಾರೆ.
ಇನ್ನೂ ಸಕ್ಸಸ್‌ನ ಉತ್ತುಂಗದಲ್ಲಿರೋ ರಶ್ಮಿಕಾ ಮಂದಣ್ಣ, ಸೌತ್‌ನಿಂದ ಬಾಲಿವುಡ್‌ವರೆಗೆ ಎಲ್ಲಾ ಸೂಪರ್ ಸ್ಟಾರ್‌ಗಳ ಹಾರ್ಟ್ ಫೇವರಿಟ್ ಆಗಿದ್ದಾರೆ. ಈಕೆಗೆ ಅಂದ ಹಾಗೂ ಅದೃಷ್ಠ ಎರಡೂ ಕೈ ಹಿಡಿದಿವೆ. ಅದರಲ್ಲೂ ಇತ್ತೀಚೆಗೆ ತೆರೆಕಂಡ ಮೂರು ಸಿನಿಮಾಗಳಿಂದ ಸಾವಿರ ಕೋಟಿ ಕ್ಲಬ್‌ಗೆ ಸೇರಿಕೊಂಡಿದ್ದಾರೆ ರಶ್ಮಿಕಾ. ಹೌದು, ಬೇರೆ ಯಾವ ನಟಿಮಣಿಯರ ಸಿನಿಮಾಗಳೂ ಸಾವಿರ ಕೋಟಿ ಕ್ಲಬ್ ಸೇರದೇ ಇದ್ದಾಗ. ರಶ್ಮಿಕಾರ ಲೇಟೆಸ್ಟ್ ರಿಲೀಸ್ ಆದ ಸಿಕಂದರ್, ಕುಬೇರ ಹಾಗೂ ಛಾವಾ ಆರೇ ತಿಂಗಳಲ್ಲಿ ಸಾವಿರ ಕೋಟಿ ಗಳಿಸೋ ಮುಖೇನ ದಾಖಲೆ ಬರೆದಿವೆ.