ರಶ್ಮಿಕಾ ಪರ ನಿಂತ ಕೊಡಗಿನ ಕುವರಿ ಹರ್ಷಿಕಾ

ಕೂರ್ಗ್ ನಿಂದ ನಾನೇ ಮೊದಲ ನಟಿಮಣಿ ಎಂದ ರಶ್ಮಿಕಾ

Web 2025 07 05t195145.556

ರಶ್ಮಿಕಾ ಮಂದಣ್ಣ ಹೆಂಗೋ ಕಾಂಟ್ರವರ್ಸಿ ಯಿಂದ ದೂರವಿದ್ದರು ಅದರು ಕೂಡ ಇರಲಾರದವರು ಇರುವೆ ಬಿಟ್ಟುಕೊಂಡರು ಅನ್ನೋ ಹಾಗೆ ಏನೋ ಮಾತಾಡೋಕೆಹೋಗಿ ಇನ್ನೇನೋ ಹೇಳಿ ಈಗ ಮತ್ತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಕೊಡವ ಕಮ್ಯುನಿಟಿಯಲ್ಲಿ ನಾನೇ ಮೊದಲ ಹೀರೋಯಿನ್ ಅನ್ನಿಸುತ್ತೆ ಸಿನಿಮಾ ಇಂಡಸ್ಟ್ರಿಗೆ ಬಂದಿರೋದು ಅನ್ನೋ ಮಾತು ವೈರಲ್ ಆಗ್ತಿದ್ದು ಕೊಡವ ಬ್ಯೂಟಿ ಹರ್ಷಿಕಾ ರಶ್ಮಿಕಾ ಹೇಳಿಕೆಗೆ ಏನು ರಿಯಾಕ್ಟ್ ಮಾಡಿದ್ದಾರೆ.

ರಶ್ಮಿಕಾ ಮೂಲತ: ಕೂರ್ಗ್ ಚೆಲುವೆ. ಕನ್ನಡದ ಸಿನಿಮಾ ಕಿರಿಕ್ ಪಾರ್ಟಿ ಮೂಲಕ ಸಿನಿ ಇಂಡಸ್ಟ್ರಿಗೆ ಬಂದು ಕೇವಲ 25 ಸಾವಿರ ಸಂಭಾವನೆ ಮೂಲಕ ಸಿನಿ ಜರ್ನಿ ಆರಂಬಿಸಿದ ನಟಿ ಯಾವುದೇ ಗಾಡ್ ಫಾದರ್ ಇಲ್ಲದೆ ಸಿನಿ ಇಂಡಸ್ಟ್ರಿಯಲ್ಲಿ ಇಷ್ಟರ ಮಟ್ಟಿಗೆಬೆಳೆದಿದ್ದಾರೆ. ಕನ್ನಡದ ನಂತರ ತೆಲುಗಿಗೆ ಚಲೋ ಅಂತ ಹೇಳಿ ಬಾಲಿವುಡ್ನ ಗುಡ್ ಬೈ ಮೂಲಕ ತೆಲುಗು ಬಿಟ್ಟು ಬಿಟೌನ್ ಗೆ ಕಾಲಿಟ್ಟ ನಟಿ ಈಗ ಸಾವಿರ ಕೋಟಿ ಸರದಾರೆ. ರಶ್ ಸಿನಿ ಗ್ರಾಫ್ ಆರಂಭದಿಂದಲೂ ಮೇಲಿರೋದು ಬಿಟ್ಟರೆ ಕೆಳಗೆ ಬಿದ್ದೇ ಇಲ್ಲ ಅಷ್ಟರ ಮಟ್ಟಿಗೆ ಟಿವಿ, ಸಿನಿಮಾ ಜಾಹಿರಾತು ಇಂಡಸ್ಟ್ರಿಯಲ್ಲಿ ಎಲ್ಲರಿಗು ಬೇಕಾಗಿರೋ ನಂ 1 ನಟಿಯಾಗಿದ್ದಾರೆ.

ADVERTISEMENT
ADVERTISEMENT

ಹೀಗಿರುವಾಗ ರಶ್ಮಿಕಾ ಮಂದಣ್ಣ ತಮ್ಮ ಕಮ್ಯೂನಿಟಿ ಬಗ್ಗೆ ತಮ್ಮ ಸಮುದಾಯದ ಮೂಲಕ ಸಿನಿ ಇಂಡಸ್ಟ್ರಿಗೆ ಬಂದ ನಟ ನಟಿಯರ ಬಗ್ಗೆ ತಿಳಿದು ಕೊಳ್ಳದೆ ಇದ್ದರೆ ಏನನ್ನಬೇಕು ಅಲ್ಲವಾ , ಇತ್ತೀಚಿನ ಸಂದರ್ಶನದಲ್ಲಿ ರಶ್ಮಿಕಾ ಬಹುಶ ನಾನೇ ಅನ್ನಿಸುತ್ತೆ ಕೂರ್ಗ್ ಸಮುದಾಯದಿಂದ ಸಿನಿಮಾ ಇಂಡಸ್ಟ್ರಿಗೆ ಬಂದಿರೋದು ಅಂತ ಹೇಳಿದ್ದರು.

ಈಗ ಇದೇ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಬಾರಿ ಚರ್ಚೆ ಹುಟ್ಟು ಹಾಕಿದ್ದು ಕೊಡವ ನಟಿ ಹರ್ಷಿಕಾ ಪೂನಾಚ್ಚ ರಿಯಾಕ್ಟ್ ಮಾಡಿದ್ದಾರೆ. ರಶ್ಮಿಕೆ ಮೇಲೆ ಗೌರವ ಪ್ರೀತಿ ಇದೆ ತಿಳಿದೇ ಮಾತಾಡಿರಬಹುದು ಇಲ್ಲ ನಂಬರ್ 1 ನಟಿ ಅನ್ನೋ ಅರ್ಥದಲ್ಲಿ ಹೇಳಿರಬಹುದು ಎಂದು ರಶ್ಮಿಕಾ ಪರ ಬ್ಯಾಟ್ ಬೀಸಿದ್ದಾರೆ.

ಇಷ್ಟೇ ಅಲ್ಲಾ ನಟಿ ನಿಧಿ ಸುಬ್ಬಯ್ಯ , ತಮ್ಮ ಗ್ಲಾಮರಸ್ ಮಾದಕ ಮೈಮಾಟದಿಂದ ಬಾಲಿವುಡ್ ನ ಸಿನಿಮಾದಲ್ಲಿಯು ನಟಿಸಿ ಬಂದಿದ್ದಾರೆ. ಅಲ್ಲದೆ ಶಿವಣ್ಣನ ವಜ್ರಕಾಯ ಸಿನಿಮಾದಲ್ಲಿ ಶುಭ್ರ ಅಯ್ಯಪ್ಪ ಕೂಡ ನಟಿಸಿರೋದಲ್ಲದೆ. ಹರ್ಷಿಕಾ ಪೂಣಚ್ಚ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ಬೋಜ್ ಪುರಿ ಸಿನಿಮಾ ಇಂಡಸ್ಟ್ರಿಯಲ್ಲಿಯು ನಟಿಸಿದ್ದಾರೆ. ಇವರೆಲ್ಲರು ಕನ್ನಡಿಗರೆ ಅಲ್ಲ ಕೊಡವ ಸಮುದಾಯಕ್ಕೆ ಸೇರಿದವರೆ ಅಲ್ವಾ ಅನ್ನೊಪ್ರಶ್ನೆ ಮಾಡ್ತಿದ್ದಾರೆ ನೆಟ್ಟಿಗರು.

ತಿಳಿದೋ ತಿಳಿಯದೆಯೋ ನಟಿ ರಶ್ಮಿಕಾ ಇ ರೀತಿ ಮಾತಾಡಿದ್ದರೋ ಇಲ್ಲವೇ ಏನೋ ಮಾತಿನ ಭರಾಟೆಯಲ್ಲಿ ಈ ಹೇಳಿಕೆ ನೀಡಿ ದ್ದರೋ ಏನೋ ಕನ್ನಡ ಗೊತ್ತಿಲ್ಲ ಅನ್ನೋದು ಓಕೆ ಆದರೆ ತಮ್ಮದೇ ಕೊಡವ ಸಮುದಾಯದ ನಟ ನಟಿಯರ ಬಗ್ಗೆಯು ತಿಳಿದುಕೊಳ್ಳದಷ್ಟು ಮುಗ್ದೆ ನಾ ಅನ್ನೋ ಅನುಮಾನ ಮೂಡಿರೋದು ಸುಳ್ಳಲ್ಲ.

Exit mobile version