ಇಂಡಸ್ಟ್ರಿಯಲ್ಲಿ ದಶಕ ಕಳೆದಿಲ್ಲ..ಆದ್ರೂ ರಶ್ಮಿಕಾ No.1

ಕೋಟಿ ಸಂಭಾವನೆ ಪಡೆದ್ರು ನಾನು No.1 ಅಲ್ಲ..!

Untitled design 2025 04 11t171102.659

ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ಅಂತೆಲ್ಲಾ ಬಿರುದು ಪಡೆದು, ಈಗ ಬಾಲಿವುಡ್‌ನಲ್ಲಿ ಬೀಡು ಬಿಟ್ಟಿರೋ ರಶ್ಮಿಕಾ ಮಂದಣ್ಣಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಅದೇನ್ ಕ್ರೇಜ್ ಅಂತೀರಾ ಅತೀ ಕಡಿಮೆ ಅವಧಿಯಲ್ಲಿ ಸೂಪರ್ ಸ್ಟಾರ್ಸ್ ಜೊತೆ ಸ್ಕ್ರೀನ್ ಮಾಡಿರೋ ಏಕೈಕ ನಟಿ ರಶ್ಮಿಕಾ, ಭಾರತದ ದುಬಾರಿ ನಟಿ ಎನ್ನಲಾಗ್ತಿದೆ.

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಅದೃಷ್ಟ ಖುಲಾಯಿಸಿದೆ, ಮುಟ್ಟಿದೆಲ್ಲ ಚಿನ್ನವಾಗ್ತಿದೆ. ಕನ್ನಡ, ತೆಲುಗು, ತಮಿಳು ನಂತರ ಬಾಲಿವುಡ್‌ಗೆ ಹಾರಿದ ಈ ಬ್ಯೂಟಿಯ ಯಶಸ್ಸು ತಡೆಯೋರೆ ಇಲ್ಲ. ಪುಷ್ಪ, ಅನಿಮಲ್, ಛಾವ ಚಿತ್ರದ ಸಕ್ಸಸ್ ನಂತರ ರಶ್ಮಿಕಾಗೆ ಬಾಲಿವುಡ್ ಪರ್ಮನೆಂಟ್ ಅಡ್ಡಾ ಆಗಿಬಿಟ್ಟಿದೆ. ಸಿಕಂದರ್‌‌ನಲ್ಲಿ ಸಲ್ಮಾನ್ ಖಾನ್ ಜೊತೆ ಡ್ಯುಯೆಟ್ ಆಡಿರೋ ರಶ್‌ಗೆ ಎಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ.

ಆಗಾಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗೋ ಶ್ರೀವಲ್ಲಿ ಹಿಂದಿ, ತೆಲುಗು ಆಡಿಯೆನ್ಸ್‌‌ಗೆ ಫೇವರಿಟ್ ನಟಿ. ರಶ್ಮಿಕಾ ಫೋಟೋ, ವಿಡಿಯೋ ಪೋಸ್ಟ್ ಮಾಡಿದ್ರೆ ಸಾಕು ಕ್ಯೂಟಿ, ಬ್ಯೂಟಿ, ಹಾಟಿ, ದಿಲ್ ಕಿ ಧಡ್ಕನ್ ಅಂತೆಲ್ಲ ಕಾಮೆಂಟ್ ಗಳ ಸುರಿಮಳೆ ಹರಿಯುತ್ತೆ. ಇನ್ನು ಸೂಪರ್ ಸ್ಟಾರ್ಸ್ ಜೊತೇನೆ ಜೋಡಿಯಾಗಿ ನಟಿಸೋ ರಶ್ಮಿಕಾ, ಇದೀಗ ಭಾರತದ ದುಬಾರಿ ನಟಿಯಂತೆ. ಬಾಲಿವುಡ್ ನೆಪೋ ಕಿಡ್ಸ್‌ನೂ ಹಿಂದಿಕ್ಕಿದ್ದಾರೆ. ಇದೇನಪ್ಪಾ ರಶ್ಮಿಕಾ ಇಂಡಸ್ಟ್ರಿ ಗೆ ಬಂದು 9ವರ್ಷ ಮಾತ್ರ ಕಳೆದಿದೆ, ಆಗ್ಲೇ ಟಾಪ್ ಹೀರೋಯಿನ್ಸ್ ನ ಮೀರಿಸೋ ನೇಮ್, ಫೇಮ್ ಗಳಿಸಿದ್ದಾರಲ್ವಾ ಅಂತ ಒಂದಷ್ಟು ಮಂದಿ ಹೊಟ್ಟೆ ಉರ್ಕೊಳ್ತಿದ್ದಾರೆ.

ಪುಷ್ಪ 2 ಬಿಡುಗಡೆಯ ಸಮಯದಲ್ಲಿ, ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಎಂದು ಇಂಟರ್ನೆಟ್‌ನಲ್ಲಿ ಎಲ್ಲೆಡೆ ಹರಡಿತ್ತು. ಪುಷ್ಪ 2 ಚಿತ್ರಕ್ಕಾಗಿ ಕೊಡಗಿನ ಕುವರಿ ಬರೋಬ್ಬರಿ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿತ್ತು. ಪುಷ್ಪ-2, ಅನಿಮಲ್, ಛಾವ ಬಳಿಕ ರಶ್ಮಿಕಾ ಭಾರತದ ಅತ್ಯಂತ ದುಬಾರಿ ನಟಿ ಎನ್ನುವ ಚರ್ಚೆ ಶುರುವಾಗಿದೆ. ಆದಾಗ್ಯೂ, ಕಳೆದ ವರ್ಷ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಾಗ ರಶ್ ವದಂತಿಗಳಿಗೆ ಬ್ರೇಕ್ ಹಾಕಿದ್ರು.

ಆದ್ರೂ ಈಗ ಮತ್ತೆ ಆ ವಿಡಿಯೋ ಸದ್ದು ಮಾಡ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ರಶ್ಮಿಕಾ ಹೇಳಿರೋದು ಏನಂದ್ರೆ ಪತ್ರಕರ್ತೆಯೊಬ್ಬರು ನೀವು ಭಾರತದ ದುಬಾರಿ ನಟಿಯಾಗಿದ್ದೀರಾ ಎಂಬ ಪ್ರಶ್ನೆಗೆ ರಶ್ಮಿಕಾ ಖುಷಿಯಿಂದ ಉತ್ತರಿಸಿದ್ದಾರೆ. ನಾನು ಈ ಮಾತನ್ನು ಒಪ್ಪೋದಿಲ್ಲಾ ಯಾಕಂದ್ರೆ ಅದು ನಿಜ ಅಲ್ಲ ಎಂದು ನಗುಮುಖದಿಂದ ಪ್ರತಿಕ್ರಿಯೆಸಿರೋ ವಿಡಿಯೋ ಹಲ್ ಚಲ್ ಎಬ್ಬಿಸಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version